ಹಣದುಬ್ಬರ ಇಳಿಕೆ
ವಾಣಿಜ್ಯ
ಹಣದುಬ್ಬರ ದರ ಶೇ.(-).85 ಕ್ಕೆ ಇಳಿಕೆ: ಸತತ 17 ನೇ ತಿಂಗಳಲ್ಲೂ ಋಣಾತ್ಮಕ ವಲಯದಲ್ಲೇ ಮುಂದುವರಿಕೆ
ವಾರ್ಷಿಕ ಸಗಟು ಹಣದುಬ್ಬರ ಇಳಿಕೆಯಾಗಿದ್ದು ಫೆಬ್ರವರಿಯಲ್ಲಿ (-).91 ರಷ್ಟಿದ್ದ ಹಣದುಬ್ಬರ ಮಾರ್ಚ್ ನಲ್ಲಿ (-)0 .85 ರಷ್ಟಾಗಿದೆ.
ನವದೆಹಲಿ: ವಾರ್ಷಿಕ ಸಗಟು ಹಣದುಬ್ಬರ ಇಳಿಕೆಯಾಗಿದ್ದು ಫೆಬ್ರವರಿಯಲ್ಲಿ (-).91 ರಷ್ಟಿದ್ದ ಹಣದುಬ್ಬರ ಮಾರ್ಚ್ ನಲ್ಲಿ (-)0 .85 ರಷ್ಟಾಗಿದೆ.
ಏ.18 ರಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಸಗಟು ಹಣದುಬ್ಬರ ಸೂಚ್ಯಂಕವನ್ನು ಬಿಡುಗಡೆ ಮಾಡಿದ್ದು, ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಸತತ 17 ನೇ ತಿಂಗಳಲ್ಲೂ ಹಣದುಬ್ಬರ ದರ ಇಳಿಕೆಯಾಗಿದೆ. ಆದರೆ ಋಣಾತ್ಮಕ ವಲಯದಲ್ಲೇ ಮುಂದುವರೆದಿದೆ.
ಒಂದು ವರ್ಷದಲ್ಲಿ ಸಗಟು ಇಂಧನ ಬೆಲೆ ಶೇ.8 .3 ರಷ್ಟು ಕಡಿಮೆಯಾಗಿದ್ದರೆ ಉತ್ಪಾದಿತ ಸರಕುಗಳ ಬೆಲೆ ಶೇ.0 .13 ರಷ್ಟು ಕಡಿಮೆಯಾಗಿದೆ. ಪರಿಶೀಲನೆಯಲ್ಲಿರುವ ತಿಂಗಳಲ್ಲಿ ಆಹಾರ ಪದಾರ್ಥಗಳ ಬೆಲೆ ಶೇ.3 .73 ರಷ್ಟು ಏರಿಕೆಯಾಗಿದೆ ಇನ್ನು ಕಳೆದ ವರ್ಷಕ್ಕೆ ಹೋಲಿಸಿದರೆ ಬೇಳೆಕಾಳುಗಳ ಬೆಲೆ ಶೇ.34 .45 ರಷ್ಟು ದುಬಾರಿಯಾಗಿದೆ.


