100 ಎಂಬಿಪಿಎಸ್ ವೇಗದ 4ಜಿ ಸೇವೆ ಆರಂಭಿಸಿದ ಬಿಎಸ್ಎನ್ಎಲ್

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) 4ಜಿ ಸೇವೆ ಆರಂಭಿಸಿದೆ. ಬಿಎಸ್ಎನ್ಎಲ್ 3 ಜಿ ಸೇವೆಯೇ ಸರಿಯಾಗಿ...
ಬಿಎಸ್ಎನ್ಎಲ್
ಬಿಎಸ್ಎನ್ಎಲ್
ನವದೆಹಲಿ: ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) 4ಜಿ ಸೇವೆ ಆರಂಭಿಸಿದೆ. ಬಿಎಸ್ಎನ್ಎಲ್ 3 ಜಿ ಸೇವೆಯೇ ಸರಿಯಾಗಿ ಸಿಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿರುವ ನಡುವೆಯೇ ಪ್ರಸ್ತುತ ಕಂಪನಿ 4 ಜಿ ಸೇವೆ ಆರಂಭಿಸಿದೆ.
100 ಎಂಬಿಪಿಎಸ್ ಗಿಂತ ಹೆಚ್ಚಿನ ವೇಗ ಕಲ್ಪಿಸುತ್ತೇವೆ ಎಂಬ ವಾಗ್ದಾನದೊಂದಿಗೆ 4 ಜಿ ಸೇವೆ ಆರಂಭಿಸಿರುವ ಬಿಎಸ್ಎನ್ಎನ್ ಇದೀಗ ಆಯ್ದ ಬಿಎಸ್ಎನ್ಎಲ್ ಉದ್ಯೋಗಿಗಳಿಗೆ ಮಾತ್ರ ಈ ಸೇವೆಯನ್ನು ಕಲ್ಪಿಸಿ ಪ್ರಯೋಗ ನಡೆಸುತ್ತಿದೆ. ರಿಲಾಯನ್ಸ್ ಜಿಯೋ ಕೂಡಾ ಇದೇ ರೀತಿ ತಮ್ಮ ಉದ್ಯೋಗಿಗಳಿಗೆ ಮಾತ್ರ ಸೇವೆಯನ್ನು ನೀಡಿ ಪ್ರಯೋಗ ನಡೆಸಿತ್ತು. ಚಂಡೀಗಢದಲ್ಲಿ ಮಾತ್ರ ಈಗ 4 ಜಿ ಸೇವೆ ಲಭ್ಯವಾಗುವಂತೆ ಮಾಡಲಾಗಿದೆ.
2500ಮೆಗಾಹರ್ಟ್ಸ್ ಬ್ಯಾಂಡ್ನಲ್ಲಿ  4 ಜಿ ಸೇವೆ ಕಲ್ಪಿಸುವ ದೇಶದ ಮೊದಲ ಟೆಲಿಕಾಂ ಕಂಪನಿಯಾಗಿದೆ ಬಿಎಸ್ಎನ್ಎಲ್. ಗುಜರಾತ್, ಆಂಧ್ರಪ್ರದೇಶ, ಕರ್ನಾಟಕ, ತಮಿಳ್ನಾಡು, ಕೊಲ್ಕತ್ತಾ ನಗರಗಳಲ್ಲಿ 4ಜಿ ಸೇವೆ ಮೊದಲು ಲಭ್ಯವಾಗಲಿದೆ. ಆಮೇಲೆ ಜನರ ಅವಶ್ಯಕತೆಗಳನ್ನು ಪರಿಗಣಿಸಿ ಇನ್ನುಳಿದ ರಾಜ್ಯಗಳಲ್ಲಿ 4 ಜಿ ಸೇವೆ ನೀಡಲಾಗುವುದು. 
ಏತನ್ಮಧ್ಯೆ, ರಿಲಾಯನ್ಸ್ ಮತ್ತು ಬಿಎಸ್ಎನ್ಎಲ್ ನೆಟ್ವರ್ಕ್ ಹಂಚಿಕೆಯ ಬಗ್ಗೆ ಮಾತುಕತೆಗಳು ನಡೆದು ಬರುತ್ತಿವೆ. ಇಲ್ಲಿವರೆಗೆ ನಡೆದ ಮಾತುಕತೆಯ ಪ್ರಕಾರ ಬಿಎಸ್ಎನ್ಎಲ್ನ 2 ಜಿ, 3ಜಿ ನೆಟ್ವರ್ಕ್ ರಿಲಾಯನ್ಸ್ ಜಿಯೋ ನೀಡಲಿದೆ. ಇದಕ್ಕೆ ಪ್ರತಿಯಾಗಿ ರಿಲಾಯನ್ಸ್ ಜಿಯೋದ 4 ಜಿ ಸೇವೆಯನ್ನು ಬಿಎಸ್ಎನ್ಎಲ್ ಹಂಚಿಕೊಳ್ಳಲಿದೆ. ಆದರೆ ಈ ಬಗ್ಗೆ ಅಂತಿಮ ತೀರ್ಮಾನವೇನೂ ನಡೆದಿಲ್ಲ ಎಂದು ಬಲ್ಲಮೂಲಗಳು ಹೇಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com