ಜಾಗತಿಕ ಮಾರುಕಟ್ಟೆ ಪ್ರಭಾವ 30 ಸಾವಿರ ಗಡಿ ದಾಟಿದ ಚಿನ್ನ

ಮೂರು ದಿನದಿಂದ ಏರಿಕೆ ಹಾದಿಯಲ್ಲಿದ್ದ ಚಿನ್ನದ ದರ ಶುಕ್ರವಾರ 30,000 ರೂ.ಗಳ ಗಡಿ ಮುಟ್ಟಿದೆ. 10 ಗ್ರಾಂ ಚಿನ್ನದ ದರ 350 ರೂ. ಏರಿಕೆಯಾಗಿದ್ದು....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಮೂರು ದಿನದಿಂದ ಏರಿಕೆ ಹಾದಿಯಲ್ಲಿದ್ದ ಚಿನ್ನದ ದರ ಶುಕ್ರವಾರ 30,000 ರೂ.ಗಳ ಗಡಿ ಮುಟ್ಟಿದೆ. 10 ಗ್ರಾಂ ಚಿನ್ನದ ದರ 350 ರೂ. ಏರಿಕೆಯಾಗಿದ್ದು 30,250 ರೂ.ನಷ್ಟಿದೆ. ಕಳೆದ ಎರಡು ವರ್ಷಗಳಲ್ಲಿ ಇದು ಗರಿಷ್ಠ ಮಟ್ಟವಾಗಿದೆ.

ಜಾಗತಿಕ ಮಾರುಕಟ್ಟೆ ಪ್ರಭಾವವೇ ಬೆಲೆ  ಏರಿಕೆಗೆ ಕಾರಣವಾಗಿದೆ. ಅಲ್ಲದೇ ಮದುವೆ ಸೀಸನ್‌ನಿಂದಾಗಿ ಆಭರಣ ಖರೀದಿ ಭರಾಟೆಯಿಂದ ಬೇಡಿಕೆ ಏರುಗತಿಯಲ್ಲಿದೆ. ಉದ್ಯಮ ಘಟಕಗಳು ಮತ್ತು ನಾಣ್ಯ ತಯಾರಕರಿಂದ ಬೆಳ್ಳಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ  ಬೆಳ್ಳಿ ಸಹ ಕೆ.ಜಿಗೆ 600 ರೂ. ಏರಿಕೆಯಾಗಿದ್ದು 41,600 ರೂ. ತಲುಪಿದೆ.

ದೆಹಲಿಯಲ್ಲಿ 99.9 ಮತ್ತು 99.5 ಶುದ್ಧ ಚಿನ್ನದ ದರವು ಕ್ರಮವಾಗಿ 30,250 ಮತ್ತು 30,100 ರೂ. ತಲುಪಿದೆ. ಈ ಮಟ್ಟದ ದರವನ್ನು 2014ರ ಮೇ 13ರಂದು ಮಾರುಕಟ್ಟೆ ಕಂಡಿತ್ತು.

''ರೂಪಾಯಿ ಎದುರು ಡಾಲರ್‌ ದರವು ಕಳೆದ 10 ತಿಂಗಳಲ್ಲಿ ಕನಿಷ್ಠ ಮಟ್ಟ ಮುಟ್ಟಿದೆ. ಷೇರುಪೇಟೆಯಲ್ಲಿ ಏರಿಳಿತಗಳು ಉಂಟಾಗುತ್ತಿದ್ದು, ಪರ್ಯಾಯ ಹೂಡಿಕೆಯಾಗಿ ಚಿನ್ನದತ್ತ ಹೂಡಿಕೆದಾರರು ಗಮನ ಹರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com