ಅಜೀಮ್ ಪ್ರೇಮ್ ಜಿ(ಎಡ) ಮತ್ತು ಹೆಚ್ ಸಿಎಲ್ ಸಹ ಸ್ಥಾಪಕ ಶಿವ ನದರ್(ಸಂಗ್ರಹ ಚಿತ್ರ)
ವಾಣಿಜ್ಯ
ವಿಶ್ವದ ಪ್ರಮುಖ 100 ಟೆಕ್ ಶ್ರೀಮಂತರ ಪಟ್ಟಿಯಲ್ಲಿ ಪ್ರೇಮ್ ಜಿ, ಶಿವ್ ನದರ್ ಗೆ ಸ್ಥಾನ
ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವದ ಪ್ರಮುಖ 100 ಶ್ರೀಮಂತ ವ್ಯಕ್ತಿಗಳ ಫೋರ್ಬ್ಸ್ ಪಟ್ಟಿಯಲ್ಲಿ ಈ ವರ್ಷ...
ನ್ಯೂಯಾರ್ಕ್: ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವದ ಪ್ರಮುಖ 100 ಶ್ರೀಮಂತ ವ್ಯಕ್ತಿಗಳ ಫೋರ್ಬ್ಸ್ ಪಟ್ಟಿಯಲ್ಲಿ ಈ ವರ್ಷ ವಿಪ್ರೋ ಅಧ್ಯಕ್ಷ ಅಜೀಮ್ ಪ್ರೇಮ್ ಜಿ ಮತ್ತು ಹೆಚ್ ಸಿಎಲ್ ಸಹ ಸ್ಥಾಪಕ ಶಿವ ನದರ್ ಒಳಗೊಂಡಿದ್ದಾರೆ. ಇವರು ಮೊದಲ 20 ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಇವರ ಬಳಿಕ ಗೂಗಲ್ ಮುಖ್ಯಸ್ಥ ಎರಿಕ್ ಸ್ಚಿಮಿಡ್ತ್ ಮತ್ತು ಉಬರ್ ಸಿಇಒ ಟ್ರವಿಸ್ ಕಲಾನಿಕ್ ಇದ್ದಾರೆ.
ವಿಶ್ವದ 2016ನೇ ಸಾಲಿನ 100 ಶ್ರೀಮಂತ ತಂತ್ರಜ್ಞಾನ ಶತಕೋಟಿದಾರರಲ್ಲಿ ಮೊದಲ ಸ್ಥಾನದಲ್ಲಿ ಮೈಕ್ರೋಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್ ಇದ್ದಾರೆ. ಅವರ ಸಂಪತ್ತಿನ ಮೊತ್ತ ಸುಮಾರು 78 ಶತಕೋಟಿ ಅಮೆರಿಕನ್ ಡಾಲರ್ ಆಗಿದೆ.
ಫೋರ್ಬ್ಸ್ ಪಟ್ಟಿಯಲ್ಲಿ ಪ್ರೇಮ್ ಜಿ 13ನೇ ಸ್ಥಾನದಲ್ಲಿದ್ದು, ಅವರ ಸಂಪತ್ತಿನ ಮೊತ್ತ 16 ಬಿಲಿಯನ್ ಅಮೆರಿಕನ್ ಡಾಲರ್ ಆಗಿದೆ. ನದರ್ 17ನೇ ಸ್ಥಾನದಲ್ಲಿದ್ದು, ಅವರಲ್ಲಿ 11.6 ಶತಕೋಟಿ ಡಾಲರ್ ನಷ್ಟು ಆಸ್ತಿ ಮೌಲ್ಯವಿದೆ.
ಇಬ್ಬರು ಭಾರತೀಯ ಮೂಲದ ಅಮೆರಿಕನ್ ತಂತ್ರಜ್ಞಾನ ದಿಗ್ಗಜರಾದ ಸಿಂಫೊನಿ ಟೆಕ್ನಾಲಜಿ ಗ್ರೂಪ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೊಮೆಶ್ ವಾಧ್ವಾನಿ ಮತ್ತು ಐಟಿ ಕನ್ಸಲ್ಟಿಂಗ್ ಮತ್ತು ಹೊರಗುತ್ತಿಗೆ ಕಂಪೆನಿಯಾದ ಸಿಂಟೆಲ್ ನ ಭರತ್ ದೇಸಾಯಿ ಮತ್ತು ಅವರ ಪತ್ನಿ ನೀರ್ಜಾ ಸೇತಿ ಕೂಡ ಫೋರ್ಬ್ಸ್ ಪಟ್ಟಿಯಲ್ಲಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ