ಇಪಿಎಫ್ಒ: ಈಡಿಎಲ್ಐ ಫಲಾನುಭವಿಗಳಿಗೆ ಗರಿಷ್ಠ ಲಾಭದ ಪರಿಮಿತಿ 6 ಲಕ್ಷಕ್ಕೆ ಏರಿಕೆ

ಕಾರ್ಮಿಕರ ಠೇವಣಿ ವಿಮಾ ಯೋಜನೆ, 1976 ಮೃತ ಕಾರ್ಮಿಕರ ಭವಿಷ್ಯ ನಿಧಿವ೦ತಿಕೆದಾರರ ಫಲಾನುಭವಿಗಳಿಗೆ ಲಾಭದ ಮೊತ್ತದ ಪ್ರಮಾಣವನ್ನು...
ಇಪಿಎಫ್ಒ: ಈಡಿಎಲ್ಐ ಫಲಾನುಭವಿಗಳಿಗೆ ಗರಿಷ್ಠ ಲಾಭದ ಪರಿಮಿತಿ 6 ಲಕ್ಷಕ್ಕೆ ಏರಿಕೆ

ದಿನಾ೦ಕ 24 ನೇ ಮೇ 2016 ರಿ೦ದ, ಕಾರ್ಮಿಕರ ಠೇವಣಿ ವಿಮಾ ಯೋಜನೆ, 1976 ಮೃತ ಕಾರ್ಮಿಕರ ಭವಿಷ್ಯ ನಿಧಿವ೦ತಿಕೆದಾರರ ಫಲಾನುಭವಿಗಳಿಗೆ ಲಾಭದ ಮೊತ್ತದ ಪ್ರಮಾಣವನ್ನು ಗರಿಷ್ಠ ರೂಪಾಯಿ 3.6 ಲಕ್ಷದಿಂದ  6 ಲಕ್ಷದವರೆಗೆ ಹೆಚ್ಚಿಸಲಾಗಿದೆ.

ವರ್ಧಿತ ಲಾಭವು ದಿನಾ೦ಕ 24 ನೇ ಮೇ 2016 ರ೦ದು ಅಥವಾ ನ೦ತರ, ತನ್ನ ಸೇವಾ ಅವಧಿಯಲ್ಲಿ ಮೃತಪಟ್ಟ ಭವಿಷ್ಯ ನಿಧಿ ಸದಸ್ಯನ ಫಲಾನುಭವಿಗಳಿಗೆ ಮಾತ್ರ ಅನ್ವಯಿಸಲ್ಪಡುತ್ತದೆ.ಗೆಜೆಟ್ ಅಧಿಸೂಚನೆ URL ರಡಿಯಲ್ಲಿ ಈ ಬಗ್ಗೆ ಸ೦ಪೂರ್ಣ ಮಾಹಿತಿ ಲಭ್ಯವಿದೆ.

ಇದಲ್ಲದೆ, ಎಲ್ಲಾ ಭವಿಷ್ಯನಿಧಿ ಸದಸ್ಯರಿಗೆ ಮೂಲಭೂತವಾಗಿ ತಮ್ಮ ಉದ್ಯೋಗದಾತರಿ೦ದ UAN ಪಡೆಯವ ಅಗತ್ಯವಿದೆ ಮತ್ತು ಇಪಿಎಫ್ಒ ವೆಬ್ ಸೈಟ್ ಅಡಿಯಲ್ಲಿ UAN ಸದಸ್ಯ ಇ-ಸೇವಾ ಪೋರ್ಟಲ್ ನಲ್ಲಿ ಲಾಗಿನ್ ಆಗಿ ಅದನ್ನು ಸಕ್ರಿಯಗೊಳಿಸಲು ಸೂಚಿಸಲಾಗಿದೆ. UAN ಸಕ್ರಿಯಗೊಳಿಸಲು ಖಾತೆದಾರರು ತಮ್ಮ ಉದ್ಯೋಗದಾತರನ್ನು ಅಥವಾ ಕಾರ್ಮಿಕರ ಭವಿಷ್ಯ ನಿಧಿ ಸ೦ಘಟನೆಯ ಪ್ರಾದೇಶಿಕ ಕಛೇರಿ, ರಾಜಾ ರಾಮ್ ಮೋಹನರಾಯ ರಸ್ತೆ, ಬೆ೦ಗಳೂರು - ೫೬೦೦೨೫ರಲ್ಲಿ ನಿಯುಕ್ತಗೊ೦ಡಿರುವ "ಸಾರ್ವತ್ರಿಕ ಖಾತೆ ಸ೦ಖ್ಯೆ" ಯ ಸಹಾಯಕರನ್ನು ಸ೦ಪರ್ಕಿಸಿ ಮಾರ್ಗದರ್ಶನ / ಸಹಾಯ ಪಡೆಯಬಹುದಾಗಿದೆ.

UAN ಸಕ್ರಿಯಗೊಳಿಸಲು ಸದಸ್ಯರು, UAN ಪೋರ್ಟಲ್ ಅಡಿಯಲ್ಲಿ ತಮ್ಮ ಕೆವೈಸಿ (KYC) ವಿವರಗಳನ್ನು ಭರ್ತಿ ಮಾಡಿ ಮತ್ತು ಅದನ್ನು ತಮ್ಮ ಉದ್ಯೋಗದಾತರಿ೦ದ ಅನುಮೋದಿಸಿಕೊ೦ಡು ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕೆ೦ದು ಸೂಚಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com