ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಐದು ಭಾರತೀಯ ಭಾಷೆಗಳಲ್ಲಿ ಅಮೆಜಾನ್ ಕಿಂಡಲ್ ಇ-ಪುಸ್ತಕ ಸೇವೆ; ಕನ್ನಡಕ್ಕೆ ಜಾಗ ಇಲ್ಲ!

ಅಮೆಜಾನ್ ಅಂತರ್ಜಾಲ ಮಾರಾಟ ದೈತ್ಯ ಸಂಸ್ಥೆಯ ಉತ್ಪನ್ನ 'ಕಿಂಡಲ್', ಈ-ಪುಸ್ತಕಗಳನ್ನು ಓದುವ ಟ್ಯಾಬ್ಲೆಟ್ ಇನ್ನು ಮುಂದೆ ಐದು ಭಾರತೀಯ ಭಾಷೆಗಳಲ್ಲಿ ಸೇವೆ ಒದಗಿಸುವುದಾಗಿ ಹೇಳಿದೆ.
ನವದೆಹಲಿ: ಅಮೆಜಾನ್ ಅಂತರ್ಜಾಲ ಮಾರಾಟ ದೈತ್ಯ ಸಂಸ್ಥೆಯ ಉತ್ಪನ್ನ 'ಕಿಂಡಲ್', ಈ-ಪುಸ್ತಕಗಳನ್ನು ಓದುವ ಟ್ಯಾಬ್ಲೆಟ್ ಇನ್ನು ಮುಂದೆ ಐದು ಭಾರತೀಯ ಭಾಷೆಗಳಲ್ಲಿ ಸೇವೆ ಒದಗಿಸುವುದಾಗಿ ಹೇಳಿದೆ. ಹಿಂದಿ, ತಮಿಳು, ಮಲಯಾಳಂ, ಗುಜರಾತಿ ಮತ್ತು ಮರಾಠಿ ಭಾಷೆಗಳಲ್ಲಿ ಡಿಜಿಟಲ್ ಪುಸ್ತಕಗಳನ್ನು ಇನ್ನು ಮುಂದೆ ಕಿಂಡಲ್ ನಲ್ಲಿ ಅಧಿಕೃತವಾಗಿ ಲಭ್ಯವಾಗಲಿದ್ದು, ಕನ್ನಡವನ್ನು ಉಪೇಕ್ಷಿಸಲಾಗಿದೆ. 
"ಈಗಾಗಲೇ ೩ ದಶಲಕ್ಷ ಪುಸ್ತಕಗಳು ಕಿಂಡಲ್ ನಲ್ಲಿ ದೊರೆಯುತ್ತಿದ್ದು ಹೊಸದಾಗಿ ಹೆಚ್ಚುವರಿ ಐದು ಭಾಷೆಗಳನ್ನು ಸೇರಿಸಿದ್ದೇವೆ. ಹಿಂದಿ, ತಮಿಳು, ಮಲಯಾಳಂ, ಗುಜರಾತಿ ಮತ್ತು ಮರಾಠಿ ಭಾಷೆಗಳಲ್ಲಿ ಸಾವಿರಾರು ಡಿಜಿಟಲ್ ಪುಸ್ತಕಗಳ್ನನು ಸೇರಿಸಿದ್ದೇವೆ" ಎಂದು ಅಮೆಜಾನ್ ಕಿಂಡಲ್ ನಿರ್ದೇಶಕ (ಕಂಟೆಂಟ್) ಸಂಜೀವ್ ಝಾ ಹೇಳಿದ್ದಾರೆ. 
ಆದರೆ ಈ ನೂತನ ಸೇವೆಯಲ್ಲಿ ಕನ್ನಡ ಭಾಷೆಯನ್ನು ಒಳಗೊಳ್ಳದೆ ಇರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 
ಮಾರುಕಟ್ಟೆ ವರದಿಗಳ ಪ್ರಕಾರ ಪುಸ್ತಕ ಮುದ್ರಣ ಭಾರತದಲ್ಲಿ ೪ ಬಿಲಿಯನ್ ಡಾಲರ್ ಮಾರುಕಟ್ಟೆ ಹೊಂದಿದೆ. ಇದರ ಜೊತೆಗೆ ಫೋನ್ ಗಳು, ಟ್ಯಾಬ್ಲೆಟ್ ಗಳಲ್ಲಿ ಡಿಜಿಟಲ್ ಪುಸ್ತಕಗಳನ್ನು ಓದುವವರ ಸಂಖ್ಯೆ ಕೂಡ ಬೆಳೆಯುತ್ತಲೇ ಇದೆ. ಅಮೆರಿಕಾ ಮತ್ತು ಇಂಗ್ಲೆಂಡ್ ನಂತರ ಇ ಪುಸ್ತಕಗಳನ್ನು ಓದುವವರ ಸಂಖ್ಯೆಯಲ್ಲಿ ಭಾರತ ನಂತರದ ಸ್ಥಾನದಲ್ಲಿದೆ ಎನ್ನಲಾಗಿದೆ. 

Related Stories

No stories found.

Advertisement

X
Kannada Prabha
www.kannadaprabha.com