ಮಂಡಳಿಯಲ್ಲಿ ಭಿನ್ನಮತ: ಎನ್ಎಸ್ಇ ಸಿಇಒ ಸ್ಥಾನಕ್ಕೆ ಚಿತ್ರಾ ರಾಜಿನಾಮೆ

ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ(ಎನ್ಎಸ್ ಇ)ನ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಸಿಇಒ ಚಿತ್ರಾ ರಾಮಕೃಷ್ಣ ಅವರು ತಮ್ಮ ಸ್ಥಾನಕ್ಕೆ ಶುಕ್ರವಾರ...
ಚಿತ್ರಾ ರಾಮಕೃಷ್ಣ
ಚಿತ್ರಾ ರಾಮಕೃಷ್ಣ
ಮುಂಬೈ: ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ(ಎನ್ಎಸ್ ಇ)ನ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಸಿಇಒ ಚಿತ್ರಾ ರಾಮಕೃಷ್ಣ ಅವರು ತಮ್ಮ ಸ್ಥಾನಕ್ಕೆ ಶುಕ್ರವಾರ ರಾಜಿನಾಮೆ ನೀಡಿದ್ದಾರೆ.
ಮಂಡಳಿಯಲ್ಲಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಚಿತ್ರಾ ಅವರು ತಕ್ಷಣದಿಂದ ಜಾರಿಗೆ ಬರುವಂತೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇನ್ನೂ ಬಂದಿಲ್ಲ. ಆದರೆ ಶೀಘ್ರದಲ್ಲಿ ಅಧಿಕೃತ ಪ್ರಕಟಣೆ ಹೊರಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಚಿತ್ರಾ ರಾಮಕೃಷ್ಣ ಅವರ ಅಧಿಕಾರವಧಿ 2018ರ ಮಾರ್ಚ್ ವರೆಗೆ ಇತ್ತು. ಆದರೆ ತಕ್ಷಣ ರಾಜಿನಾಮೆ ನೀಡಬೇಡಿ ಎಂಬ ಎನ್ ಎಸ್ ಇ ಮಂಡಳಿಯನ್ನು ತಿರಸ್ಕರಿಸಿ ಇಂದು ರಾಜಿನಾಮೆ ನೀಡಿದ್ದಾರೆ ಎನ್ನಲಾಗಿದೆ.
1992ರಿಂದ ಎನ್ ಎಸ್ ಇ ನಲ್ಲಿ ಕಾರ್ಯನಿರ್ವಹಿಸುತ್ತಿರುವ 52 ವರ್ಷದ ಚಿತ್ರಾ ರಾಮಕೃಷ್ಣ ಅವರು, ಕಳೆದ ತಿಂಗಳಷ್ಟೇ ವಿಶ್ವ ಷೇರು ವಿನಿಮಯ ಕೇಂದ್ರಗಳ ಒಕ್ಕೂಟದ (ಡಬ್ಲ್ಯುಎಫ್‍ಇ) ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com