ಒಲಾ ಕ್ಯಾಬ್ಸ್, ಯೆಸ್ ಬ್ಯಾಂಕ್ ಸಹಭಾಗಿತ್ವದಲ್ಲಿ ಮೊಬೈಲ್ ಎಟಿಎಂ ಸೌಲಭ್ಯ

ನೋಟುಗಳ ಅಪಮೌಲ್ಯದ ನಂತರ ಜನರಿಗೆ ಉಂಟಾಗಿರುವ ತೊಂದರೆಯನ್ನು ಸರಿಪಡಿಸಲು ಯಸ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ನೋಟುಗಳ ಅಪಮೌಲ್ಯದ ನಂತರ ಜನರಿಗೆ ಉಂಟಾಗಿರುವ ತೊಂದರೆಯನ್ನು ಸರಿಪಡಿಸಲು ಯಸ್ ಬ್ಯಾಂಕ್ ಕ್ಯಾಬ್ ಕಂಪೆನಿ ಒಲಾ ಜೊತೆಗೂಡಿ ಮೊಬೈಲ್ ಎಟಿಎಂಗಳನ್ನು ತೆರೆಯಲಿದೆ. ಇದರಿಂದ ಯೆಸ್ ಬ್ಯಾಂಕು ಗ್ರಾಹಕರು ಯಾವುದೇ ಬ್ಯಾಂಕುಗಳಿಂದ ಡೆಬಿಟ್ ಕಾರ್ಡನ್ನು ಉಜ್ಜಿ ಎಲ್ಲಿ ಬೇಕಾದರೂ ನಗದು ಪಡೆಯಬಹುದು.
ಈ ಸೇವೆ ದೇಶದ 10 ನಗರಗಳಾದ ಮುಂಬೈ, ದೆಹಲಿ, ಬೆಂಗಳೂರು, ಚೆನ್ನೈ, ಪುಣೆ, ಕೋಲ್ಕತ್ತಾ, ಚಂಡೀಗಢ, ಅಹ್ಮದಾಬಾದ್, ಹೈದರಾಬಾದ್ ಮತ್ತು ಜೈಪುರಗಳಲ್ಲಿ ದೊರಕಲಿದ್ದು ಪ್ರತಿ ನಗರದ 30 ಕಡೆಗಳಲ್ಲಿ ಆರಂಭವಾಗಲಿದೆ ಎಂದು ಕಂಪೆನಿ ಹೇಳಿಕೆಯಲ್ಲಿ ತಿಳಿಸಿದೆ.
ಒಲಾ ಕಂಪೆನಿ ಜೊತೆ ಕೈಜೋಡಿಸಿ ಗ್ರಾಹಕರಿಗೆ ಅನುಕೂಲವಾಗುವ ರೀತಿಯಲ್ಲಿ ಎಟಿಎಂ ಸೌಲಭ್ಯವನ್ನು ನೀಡುತ್ತಿರುವುದಕ್ಕೆ ನಮಗೆ ಸಂತಸವಾಗುತ್ತಿದೆ ಎಂದು ಯೆಸ್ ಬ್ಯಾಂಕಿನ ಹಿರಿಯ ಅಧ್ಯಕ್ಷ ರಜತ್ ಮೆಹ್ತಾ ತಿಳಿಸಿದ್ದಾರೆ.
ಪ್ರತಿ ಕಾರ್ಡಿಗೆ 2 ಸಾವಿರ ರೂಪಾಯಿಯಂತೆ ಯೆಸ್ ಬ್ಯಾಂಕು ಗ್ರಾಹಕರು ಹಣ ಪಡೆಯಬಹುದು. ಪಾಯಿಂಟ್ ಆಫ್ ಸೇಲ್ ಮೆಶಿನ್ ಗಳನ್ನು ಬಳಸಿಕೊಂಡು ಯೆಸ್ ಬ್ಯಾಂಕ್ ಶಾಖೆಗಳ ಹತ್ತಿರ ಒಲಾ ಕ್ಯಾಬ್ಸ್ ಸ್ಟೇಷನ್ ಗಳ ಸಮೀಪ ಹಣ ಪಡೆಯಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com