ನೂತನ ವಿತ್ತ ನೀತಿ: ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದ ಆರ್ಬಿಐ

ನೋಟು ನಿಷೇಧದ ಬಳಿಕ ಇದೇ ಮೊದಲ ಬಾರಿಗೆ ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ತನ್ನ ನೂತನ ಹಣಕಾಸು ನೀತಿಯನ್ನು ಪ್ರಕಟಿಸಿದ್ದು ರೆಪೋ ದರದಲ್ಲಿ...
ಆರ್ಬಿಐ
ಆರ್ಬಿಐ

ಮುಂಬೈ: ನೋಟು ನಿಷೇಧದ ಬಳಿಕ ಇದೇ ಮೊದಲ ಬಾರಿಗೆ ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ತನ್ನ ನೂತನ ಹಣಕಾಸು ನೀತಿಯನ್ನು ಪ್ರಕಟಿಸಿದ್ದು ರೆಪೋ ದರದಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ ಎಂದು ಹೇಳಿದೆ.

ಸದ್ಯ ರೆಪೋ ದರ ಶೇಕಡಾ 6.25ರಷ್ಟಿದ್ದು ಇದರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ನೂತನ ಆರ್ಬಿಐ ಗವರ್ನರ್ ಉರ್ಜಿತ್ ಪಟೇಲ್ ತಿಳಿಸಿದ್ದಾರೆ.

ಪ್ರಸ್ತುತ ನಾಲ್ಕನೇ ತ್ರೈಮಾಸಿಕದ ಅವಧಿಯಲ್ಲಿ ಚಿಲ್ಲರೆ ಹಣದುಬ್ಬರ ದರ ಶೇಕಡಾ 5 ಇರುತ್ತದೆ ಎಂದು ಉರ್ಜಿತ್ ಪಟೇಲ್ ಹೇಳಿದ್ದು, 2016-17ರಲ್ಲಿ ಜಿಡಿಪಿ ಬೆಳವಣಿಗೆ ಅಂದಾಜನ್ನು ಹಿಂದಿನ ಶೇಕಡಾ 7.6ಕ್ಕೆ ಬದಲಾಗಿ ಶೇಕಡಾ 7.1ಕ್ಕೆ ಇಳಿಸಲಾಗಿದೆ ಎಂದರು.

500-1000 ನೋಟುಗಳ ನಿಷೇಧ ಮಾಡಿರುವುದರಿಂದ ಮೂರನೇ ತ್ರೈಮಾಸಿಕ ಅವಧಿಯಲ್ಲಿ ತಾತ್ಕಾಲಿಕವಾಗಿ ಹಣದುಬ್ಬರ ಮೂಲದರದಲ್ಲಿ 10-15 ಅಂಕ ಇಳಿಯಬಹುದು ಎಂದು ಉರ್ಜಿತ್ ಪಟೇಲ್ ತಿಳಿಸಿದ್ದಾರೆ.

ವಿತ್ತ ನೀತಿ ಸಮಿತಿಯ ಎಲ್ಲಾ 6 ಸದಸ್ಯರು ಯಥಾಸ್ಥಿತಿ ಕಾಯ್ದುಕೊಳ್ಳುವುದರ ಪರ ಮತ ಚಲಾಯಿಸಿದ್ದು ಹಳೆಯ ರೆಪೋ ದರವನ್ನೇ ಮುಂದುವರೆಸಲಾಗುವುದು ಎಂದರು.

ಇನ್ನು ಹಳೆ ನೋಟು ನಿಷೇಧದಿಂದಾಗಿ ಇಲ್ಲಿಯವರೆಗೂ 11.55 ಲಕ್ಷ ಕೋಟಿ ಹಣ ಬ್ಯಾಂಕಿಗೆ ಬಂದಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com