ಸೈರಸ್ ಮಿಸ್ತ್ರಿ ವಜಾ: ಕಾರಣ ಬಹಿರಂಗ ಪಡಿಸಿದ ರತನ್ ಟಾಟಾ

ಟಾಟಾ ಗ್ರೂಪ್ ನಿಂದ ಸೈರಸ್ ಮಿಸ್ತ್ರಿ ಅವರನ್ನು ವಜಾಗೊಳಿಸಲು ಕಾರಣ ಏನು ಎಂಬುದನ್ನು ರತನ್ ಟಾಟಾ ತಿಳಿಸಿದ್ದಾರೆ. ...
ರತನ್ ಟಾಟಾ
ರತನ್ ಟಾಟಾ

ನವದೆಹಲಿ: ಟಾಟಾ ಗ್ರೂಪ್ ನಿಂದ ಸೈರಸ್ ಮಿಸ್ತ್ರಿ ಅವರನ್ನು ವಜಾಗೊಳಿಸಲು ಕಾರಣ ಏನು ಎಂಬುದನ್ನು ರತನ್ ಟಾಟಾ ತಿಳಿಸಿದ್ದಾರೆ.

ಸೈರಸ್ ಮಿಸ್ತ್ರಿ ಟಾಟಾ ಸನ್ಸ್‌ ನಿರ್ದೇಶಕ ಮಂಡಳಿಯ ವಿಶ್ವಾಸಕ್ಕೆ ಕಂಟಕವಾಗಿದ್ದರು.  ಟಾಟಾ ಸಮೂಹದ ಉದ್ದಿಮೆಗಳನ್ನು ಭವಿಷ್ಯದಲ್ಲಿ ಮುನ್ನಡೆಸುವ  ಅವರ ಸಾಮರ್ಥ್ಯದ ಬಗ್ಗೆ  ಅಪನಂಬಿಕೆಯೂ ಮೂಡಿತ್ತು. ಈ ಎಲ್ಲ  ಕಾರಣಕ್ಕೆ  ಅವರನ್ನು ಹೊರ ಹಾಕುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರತನ್ ಟಾಟಾ ತಿಳಿಸಿದ್ದಾರೆ.

ಪದಚ್ಯುತ ಸೈರಸ್‌ ಮಿಸ್ತ್ರಿ ಅವರು ನಿರ್ದೇಶಕರಾಗಿ ಮುಂದುವರೆದಿರುವುದರಿಂದ ಕಂಪೆನಿಗಳ ಸಮರ್ಪಕ ಕಾರ್ಯನಿರ್ವಹಣೆಗೆ ಅಡ್ಡಿಯಾಗಲಿದೆ’ ಎಂದು ರತನ್‌ ಟಾಟಾ ಅವರು ಷೇರುದಾರರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಟಾಟಾ ಸಮೂಹದ ಆರು ಉದ್ದಿಮೆ ಸಂಸ್ಥೆಗಳ ನಿರ್ದೇಶಕ ಹುದ್ದೆಯಿಂದಲೂ ಮಿಸ್ತ್ರಿ ಅವರನ್ನು ಹೊರ ಹಾಕಲು ಪ್ರತ್ಯೇಕವಾಗಿ ಕರೆದಿರುವ ಸರ್ವ ಸದಸ್ಯರ ಸಭೆಯಲ್ಲಿ ಟಾಟಾ ಸನ್ಸ್‌ನ  ಬೆಂಬಲಕ್ಕೆ ನಿಲ್ಲಬೇಕು ಎಂದು ರತನ್‌ ಟಾಟಾ ಅವರು ತಮ್ಮ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಟಾಟಾ ಸನ್ಸ್‌ ನಿರ್ದೇಶಕ ಮಂಡಳಿ ಮತ್ತು ಮಿಸ್ತ್ರಿ ಅವರ ಮಧ್ಯೆ ಸಂಬಂಧ  ಹದಗೆಟ್ಟಿತ್ತು. ಈ ಕಾರಣಕ್ಕೆ ಅವರೇ ರಾಜೀನಾಮೆ ನೀಡಿ ಹೊರ ನಡೆಯಬೇಕಾಗಿತ್ತು. ಸಮೂಹದ ಪ್ರಮುಖ ಪ್ರವರ್ತಕ ಸಂಸ್ಥೆಯಾಗಿರುವ ಟಾಟಾ ಸನ್ಸ್‌ ಜತೆಗೆ ಮಿಸ್ತ್ರಿ ಅವರು ವೈರತ್ವ  ಬೆಳೆಸಿಕೊಂಡಿದ್ದರಿಂದ ಗೌರವಯುತವಾಗಿ ಹೊರ ನಡೆಯಲು ಅವರಿಗೆ ಕೊನೆಯ ಅವಕಾಶವನ್ನೂ  ಕಲ್ಪಿಸಿಕೊಡಲಾಗಿತ್ತು.  ಅದನ್ನು ಅವರು ತಿರಸ್ಕರಿಸಿದ್ದರು ಎಂದು ರತನ್‌ ಟಾಟಾ ಅವರು ಪತ್ರದಲ್ಲಿ ವಿವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com