ಮುಂಬೈ: ಷೇರುದಾರರು ಮತ ಹಾಕಿದ ನಂತರ ಟಾಟಾ ಇಂಡಸ್ಟ್ರೀಸ್ ನಿರ್ದೇಶಕ ಸ್ಥಾನದಿಂದ ಸೈರಸ್ ಮಿಸ್ಟ್ರಿ ಅವರನ್ನು ವಜಾ ಮಾಡಲಾಗಿದೆ. ಟಾಟಾ ಸಮೂಹಗಳ ಸಂಸ್ಥೆಯ ಅಧ್ಯಕ್ಷನ ಸ್ಥಾನದಿಂದ ವಜಾ ಮಾಡಿದ ನಂತರ ಈಗ ಈ ಸ್ಥಾನವನ್ನು ಮಿಸ್ಟ್ರಿ ಕಳೆದುಕೊಂಡಿದ್ದಾರೆ.
ನಿರ್ದೇಶಕ ಸ್ಥಾನ ಕಳೆದುಕೊಂಡಿರುವುದರಿಂದ ಈಗ ಮಿಸ್ಟ್ರಿ ಸಂಸ್ಥೆಯ ಅಧ್ಯಕ್ಷ ಸ್ಥಾನವನ್ನು ಕೂಡ ಕಳೆದುಕೊಂಡಿದ್ದಾರೆ ಎಂದು ಟಾಟಾ ಇಂಡಸ್ಟ್ರೀಸ್ ಸಂಸ್ಥೆ ತಿಳಿಸಿದೆ.
"ಡಿಸೆಂಬರ್ ೧೨ ರಂದು ನಡೆದ ಟಾಟಾ ಇಂಡಸ್ಟ್ರೀಸ್ ವಿಶೇಷ ಕಾರ್ಯಕಾರಿ ಸಭೆಯಲ್ಲಿ ಸೈರಸ್ ಪಿ ಮಿಸ್ಟ್ರಿ ಅವರನ್ನು ನಿರ್ದೇಶಕ ಸ್ಥಾನದಿಂದ ವಜಾ ಮಾಡಲಾಗಿದೆ. ಆದುದರಿಂದ ಅವರು ಸಂಸ್ಥೆಯ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವುದಿಲ್ಲ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಉಪ್ಪಿನಿಂದ ಸಾಫ್ಟ್ವೇರ್ ನ ವರೆಗಿನ ವಿವಿಧ ಸಂಸ್ಥೆಗಳ ೧೦೩ ಬಿಲಿಯನ್ ಡಾಲರ್ ಮೌಲ್ಯದ ಟಾಟಾ ಸನ್ಸ್ ಸಂಸ್ಥೆಯ ಅಧ್ಯಕ್ಷ ಸ್ಥಾನದಿಂದ ಅಕ್ಟೋಬರ್ ೨೪ ರಂದು ಮಿಸ್ಟ್ರಿ ಅವರನ್ನು ವಜಾ ಮಾಡಲಾಗಿತ್ತು. ಅಂದಿನಿಂದ ರತನ್ ಟಾಟಾ ಅವರನ್ನು ಆ ಸ್ಥಾನಕ್ಕೆ ನೇಮಿಸಲಾಗಿದೆ.