ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಆನ್ ಲೈನ್ ವಹಿವಾಟುಗಳಿಗೆ ಡಿಸೆಂಬರ್ 25ರಿಂದ ಪ್ರತಿದಿನ ಲಕ್ಕಿ ಡ್ರಾ: ಕೇಂದ್ರದ ಯೋಜನೆ

ದೇಶದಲ್ಲಿ ಡಿಜಿಟಲ್ ವ್ಯವಹಾರವನ್ನು ಪ್ರೋತ್ಸಾಹಿಸುವ ಸಲುವಾಗಿ ಕೇಂದ್ರ ಸರ್ಕಾರ ಡಿಸೆಂಬರ್ 25 ರಿಂದ ಲಕ್ಕಿ ಡ್ರಾ ಯೋಜನೆ...

ನವದೆಹಲಿ: ದೇಶದಲ್ಲಿ ಡಿಜಿಟಲ್ ವ್ಯವಹಾರವನ್ನು ಪ್ರೋತ್ಸಾಹಿಸುವ ಸಲುವಾಗಿ ಕೇಂದ್ರ ಸರ್ಕಾರ ಡಿಸೆಂಬರ್ 25 ರಿಂದ ಲಕ್ಕಿ ಡ್ರಾ ಯೋಜನೆ ಆರಂಭಿಸಲಿದೆ.

ನೀತಿ ಆಯೋಗದ ಸಿಇಓ ಅಮಿತಾಬ್ ಕಾಂತ್ ಅವರು ಎರಡು ಪ್ರಮುಖ ಯೋಜನೆಗಳನ್ನು ಇಂದು ಘೋಷಿಸಿದ್ದಾರೆ. ಆನ್ ಲೈನ್ ವ್ಯವಹಾರಕ್ಕೆ ಗ್ರಾಹಕರನ್ನು ಆಕರ್ಷಿಸಲು 'ಲಕ್ಕಿ ಗ್ರಾಹಕ್ ಯೋಜನೆ' ಹಾಗೂ ವ್ಯಾಪಾರಿಗಳಿಗಾಗಿ 'ಡಿಜಿ ಧನ್ ವ್ಯಾಪಾರಿ ಯೋಜನೆ' ಗಳನ್ನು ಪರಿಚಯಿಸಲಾಗಿದೆ. ಈ ಮೂಲಕ ಕಪ್ಪು ಹಣಕ್ಕೆ ತಡೆ ಒಡ್ಡಲು ಡಿಜಿಟಲ್ ಪೇಮೆಂಟ್ ಮಾಡುವಂತೆ ದೇಶದ ಜನತೆಗೆ ಹೇಳಲಾಗುತ್ತಿದೆ ಎಂದು ಅಮಿತಾಬ್ ಕಾಂತ್ ತಿಳಿಸಿದ್ದಾರೆ.

ಎರಡು ಯೋಜನೆಗಳ ಪ್ರಮುಖಾಂಶಗಳು

  • ಲಕ್ಕಿ ಗ್ರಾಹಕ ಯೋಜನೆ ಹಾಗೂ ಡಿಜಿ ಧನ್ ವ್ಯಾಪಾರಿ ಯೋಜನೆ ಡಿಸೆಂಬರ್ 25 ರಂದು ಆರಂಭವಾಗಲಿದೆ.
  • ಈ ಯೋಜನೆಯಡಿ ಮುಂದಿನ 100 ದಿನಗಳು 15 ಸಾವಿರ ವಿಜೇತರಿಗೆ ತಲಾ 1 ಸಾವಿರ ರೂ. ಉಡುಗೊರೆ.
  • 50 ರು. ನಿಂದ 3 ಸಾವಿರ ರು. ವರೆಗಿನ ಡಿಜಿಟಲ್ ಪೇಮೇಂಟ್ ಗಳು ಎರಡೂ ಯೋಜನೆಯಲ್ಲಿ ಒಳಗೊಳ್ಳುತ್ತವೆ.
  • ಡಿಜಿಟಲ್ ಪೇಮೆಂಟ್ ಬಳಸುವ ಗ್ರಾಹಕರು ಮತ್ತು ವ್ಯಾಪಾರಿಗಳಿಗೆ 1 ಕೋಟಿ ರೂ. ವರಗೆ ಪ್ರತಿದಿನ, ಪ್ರತಿವಾರ ಮತ್ತು ಮೆಗಾ ಅವಾರ್ಡ್ ಗಳು.
  • ಡಿಜಿ ಧನ್ ಯೋಜನೆಯಲ್ಲಿ ಪ್ರತಿ ವ್ಯಾಪಾರಿಗೆ ಪ್ರತಿವಾರ 7 ಸಾವಿರ ದಿಂದ 50 ಸಾವಿರ ರು. ವರಗೆ ಬಹುಮಾನ ನೀಡಲಾಗುತ್ತದೆ.
  • ಲಕ್ಕಿ ಗ್ರಾಹಕ ಯೋಜನೆ ಹಾಗೂ ಡಿಜಿ ಧನ್ ವ್ಯಾಪಾರಿ ಯೋಜನೆಗಳಡಿ ಏಪ್ರಿಲ್ 14 ರವರೆಗೆ ಮೆಗಾ ಬಹುಮಾನ ಕೂಡ ನೀಡಲಾಗುತ್ತದೆ.
  • ಈ ಯೋಜನೆಗಳಿಗೆ ಸುಮಾರು 340 ಕೋಟಿ ರೂ ಹಣ ವೆಚ್ಚವಾಗಲಿದೆ

Related Stories

No stories found.

Advertisement

X
Kannada Prabha
www.kannadaprabha.com