ಟಾಟಾ ಟ್ರಸ್ಟ್ ಅಧ್ಯಕ್ಷ ಸ್ಥಾನದಿಂದ ರತನ್ ಟಾಟಾ ಕೆಳಗಿಳಿಯುವುದಿಲ್ಲ: ಟಾಟಾ ಸನ್ಸ್

ಟಾಟಾ ಟ್ರಸ್ಟ್ ನ ಮಧ್ಯಂತರ ಅಧ್ಯಕ್ಷ ಸ್ಥಾನದಿಂದ ರತನ್ ಟಾಟಾ ಕೆಳಗಿಳಿಯುವುದಿಲ್ಲ ಎಂದು ಟಾಟಾ ಸನ್ಸ್ ಸ್ಪಷ್ಟ ಪಡಿಸಿದ್ದಾರೆ....
ರತನ್ ಟಾಟಾ
ರತನ್ ಟಾಟಾ
Updated on

ಮುಂಬಯಿ: ಟಾಟಾ ಟ್ರಸ್ಟ್ ನ ಮಧ್ಯಂತರ ಅಧ್ಯಕ್ಷ ಸ್ಥಾನದಿಂದ ರತನ್ ಟಾಟಾ ಕೆಳಗಿಳಿಯುವುದಿಲ್ಲ ಎಂದು ಟಾಟಾ ಸನ್ಸ್ ಸ್ಪಷ್ಟ ಪಡಿಸಿದ್ದಾರೆ.

ಟಾಟಾ ಟ್ರಸ್ಟ್ ನ ಮಧ್ಯಂತರ ಅಧ್ಯಕ್ಷರಾಗಿರುವ ರತನ್ ಟಾಟಾ ತಮ್ಮ ಸ್ಥಾನದಿಂದ, ಈ ಸಮಯದಲ್ಲಿ ಕೆಳಗಿಳಿಯುವ ಬಗ್ಗೆ ಚಿಂತನೆ ನಡೆಸಿಲ್ಲ ಎಂದು ಟಾಟಾ ಸನ್ಸ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಟಾಟಾ ಟ್ರಸ್ಟ್ ರಾಷ್ಟೀಯ ಮಟ್ಟದಲ್ಲಿ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ. ಆ ಎಲ್ಲಾ ಯೋಜನೆಗಳನ್ನು ಟ್ರಸ್ಟ್ ಮುಂದುವರಿಸಿಕೊಂಡು ಹೋಗಲು ಬಯಸಿದ್ದು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಟಾಟಾ ಸಮೂಹ ಸಂಸ್ಥೆಗಳ ಶೇ.66 ಪಾಲುಹೊಂದಿರುವ ಟಾಟಾ ಟ್ರಸ್ಟ್​ನ ಅಧ್ಯಕ್ಷ ಸ್ಥಾನದಿಂದ ರತನ್ ಟಾಟಾ ಶೀಘ್ರದಲ್ಲೇ ಕೆಳಗಿಳಿಯಲಿದ್ದಾರೆ  ವರದಿಯಾಗಿತ್ತು. ಈ ವರದಿಗೆ ಟಾಟಾ ಸನ್ಸ್ ತಮ್ಮ ಹೇಳಿಕೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com