ಟಾಟಾ ಸನ್ಸ್ ವಿರುದ್ಧ ಎನ್ ಸಿಎಲ್ ಟಿ ಮೆಟ್ಟಿಲೇರಿದ ಮಿಸ್ತ್ರಿ

ಟಾಟಾ ಸಮೂಹದ ಎಲ್ಲಾ ಕಂಪನಿಗಳಿಗೂ ರಾಜಿನಾಮೆ ನೀಡಿ ಟಾಟಾ ಸನ್ಸ್ ನಿಂದ ಹೊರ ಬಂದಿರುವ ಸೈರಸ್ ಮಿಸ್ತ್ರಿ, ಕಾನೂನು ಹೋರಾಟಕ್ಕೆ ಸಜ್ಜುಗೊಂಡಿದ್ದಾರೆ.
ಸೈರಸ್ ಮಿಸ್ತ್ರಿ
ಸೈರಸ್ ಮಿಸ್ತ್ರಿ
ಮುಂಬೈ: ಟಾಟಾ ಸಮೂಹದ ಎಲ್ಲಾ ಕಂಪನಿಗಳಿಗೂ ರಾಜಿನಾಮೆ ನೀಡಿ ಟಾಟಾ ಸನ್ಸ್ ನಿಂದ ಹೊರ ಬಂದಿರುವ ಸೈರಸ್ ಮಿಸ್ತ್ರಿ, ಕಾನೂನು ಹೋರಾಟಕ್ಕೆ ಸಜ್ಜುಗೊಂಡಿದ್ದಾರೆ. 
ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯಲ್ಲಿ ಟಾಟಾ ಸನ್ಸ್ ವಿರುದ್ಧ ಮೊಕದ್ದಮೆ ಹೂಡಲು ಸೈರಸ್ ಮಿಸ್ತ್ರಿ ತೀರ್ಮಾನಿಸಿದ್ದಾರೆ. ಮಿಸ್ತ್ರಿ ಕುಟುಂಬ ಒಡೆತನದ ಹೂಡಿಕೆ ಸಂಸ್ಥೆ ಮುಂಬೈ ನಲ್ಲಿರುವ ಎನ್ ಸಿಎಲ್ ಟಿಗೆ ಅರ್ಜಿ ಸಲ್ಲಿಸಿದೆ ಎಂದು ತಿಳಿದುಬಂದಿದೆ.  
ಟಾಟಾ ಸನ್ಸ್ ನ ವಿರುದ್ಧ ಕಂಪನಿ ಕಾಯ್ದೆ ಸೆಕ್ಷನ್ 241 ರ ಕಾಯ್ದೆ ಅಡಿಯಲ್ಲಿ ದಬ್ಬಾಳಿಕೆ ಮತ್ತು ಕೆಟ್ಟ ನಿರ್ವಹಣೆಯ ಆರೋಪ ಹೊರಿಸಲಾಗಿದ್ದು, ಅರ್ಜಿಯ ಮೊದಲ ವಿಚಾರಣೆ ಡಿ.22 ರಂದು ನಡೆಯಲಿದೆ. ಡಿ.19ರಂದು ಟಾಟಾ ಸಮೂಹದ ಎಲ್ಲಾ ಕಂಪನಿಗಳಿಗೂ ರಾಜಿನಾಮೆ ನೀಡಿದ್ದ ಸೈರಸ್ ಮಿಸ್ತ್ರಿ ಟಾಟಾ ಸಮೂಹ ಸಂಸ್ಥೆಗಳ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದರು. 
ಒಂದು ವಾರದ ಹಿಂದಷ್ಟೆ ಟಾಟಾ ಇಂಡಸ್ಟ್ರೀಸ್ ನಿರ್ದೇಶಕ ಮಂಡಳಿಯಿಂದ ಮಿಸ್ತ್ರಿ ಅವರನ್ನು ವಜಾಗೊಳಿಸಲಾಗಿತ್ತು. ಟಾಟಾ ಸನ್ಸ್ ಅಧ್ಯಕ್ಷ ರತನ್ ಟಾಟಾ ಅವರು ಮಿಸ್ತ್ರಿ ಅವರನ್ನು ವಿವಿಧ ಕಂಪನಿಗಳ ನಿರ್ದೇಶಕರ ಮಂಡಳಿಯಿಂದ ಹೊರ ಹಾಕಲು ಸಹಕರಿಸುವಂತೆ ಷೇರುದಾರರಿಗೆ ಮನವಿ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com