ನಗದು ಬಿಕ್ಕಟ್ಟು: ಹೊಸ 500 ರು. ನೋಟು ಮುದ್ರಣ ಮೂರುಪಟ್ಟು ಹೆಚ್ಚಳ

ಕೇಂದ್ರ ಸರ್ಕಾರ 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿದ ನಂತರ ದೇಶಾದ್ಯಂತ ನಗದು ಬಿಕ್ಕಟ್ಟು ಸೃಷ್ಟಿಯಾಗಿದ್ದು, ನೋಟುಗಳ ಕೊರತೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನಾಶಿಕ್: ಕೇಂದ್ರ ಸರ್ಕಾರ 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿದ ನಂತರ ದೇಶಾದ್ಯಂತ ನಗದು ಬಿಕ್ಕಟ್ಟು ಸೃಷ್ಟಿಯಾಗಿದ್ದು, ನೋಟುಗಳ ಕೊರತೆ ತಗ್ಗಿಸಲು ನೋಟು ಮುದ್ರಣಾಲಯ ಹೊಸ 500 ರುಪಾಯಿ ನೋಟುಗಳ ಮುದ್ರಣವನ್ನು ಮೂರು ಪಟ್ಟು ಹೆಚ್ಚಿಸಿದೆ.
ನಾಶಿಕ್ ನೋಟ್ ಮುದ್ರಣಾಲಯ ಈವರೆಗೆ ದಿನಕ್ಕೆ 35 ಲಕ್ಷ ನೋಟುಗಳನ್ನು ಮುದ್ರಿಸುತ್ತಿತ್ತು. ಆದರೆ ಈಗ ಅದನ್ನು ದಿನಕ್ಕೆ 1 ಕೋಟಿ ನೋಟುಗಳಿಗೆ ಹೆಚ್ಚಿಸಲಾಗಿದೆ ಎಂದು ಮುದ್ರಣಾಲಯದ ಮೂಲಗಳು ತಿಳಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಒಟ್ಟಾರೆ ಕಳೆದ ಶುಕ್ರವಾರ 4 ಕೋಟಿ 30 ಲಕ್ಷ ನೋಟುಗಳನ್ನು ಆರ್‌ಬಿಐಗೆ ಕಳಿಸಲಾಗಿದ್ದು, 500 ರು. ನೋಟುಗಳಲ್ಲದೆ, 100, 50 ಮತ್ತು 20 ರು. ಮುಖಬೆಲೆಯ ನೋಟುಗಳನ್ನೂ ಮುದ್ರಿಸಲಾಗುತ್ತಿದೆ ಎಂದೂ ಮುದ್ರಣಾಲಯದ ಮೂಲಗಳು ತಿಳಿಸಿವೆ.
ನವೆಂಬರ್ 11 ರಂದು 500 ರು.ಗಳ ಕೇವಲ 50 ಲಕ್ಷ ನೋಟುಗಳನ್ನು ಮುದ್ರಿಸಲಾಗಿತ್ತು. ಕಳೆದ 43 ದಿನಗಳಲ್ಲಿ ಒಟ್ಟು 82 ಕೋಟಿ 80 ಲಕ್ಷ ವಿವಿಧ ಮೌಲ್ಯಗಳ ನೋಟುಗಳನ್ನು ಮುದ್ರಿಸಲಾಗಿದೆ. ಇವುಗಳಲ್ಲಿ 25 ಕೋಟಿ 500 ರು. ನೋಟುಗಳಾಗಿದ್ದು, ಕಳೆದ 3 ದಿನಗಳಲ್ಲಿ ಮುದ್ರಣಾಲಯ 8 ಕೋಟಿ 30 ಲಕ್ಷ ನೋಟುಗಳನ್ನು ರವಾನೆ ಮಾಡಿದೆ.
ದೇಶದಲ್ಲಿ ನೋಟು ಮುದ್ರಿಸುವ 4 ಮುದ್ರಣಾಲಯಗಳು ಮಾತ್ರ ಇವೆ. ಇವುಗಳಲ್ಲಿ ಆರ್‌ಬಿಐಗೆ ಸೇರಿದ ಎರಡು ಕರ್ನಾಟಕ ಮತ್ತು ಬಂಗಾಳದ ಸಲ್ಬೋನಿ ಎಂಬಲ್ಲಿವೆ. ಉಳಿದೆರಡು ನಾಶಿಕ್ ಮತ್ತು ದೇವಾಸ್ ಎಂಬಲ್ಲಿವೆ.
ಈ ಮುದ್ರಣಾಲಯಗಳ ಕೆಲಸಗಾರರು ಭಾನುವಾರ ರಜೆ ತೆಗೆದುಕೊಳ್ಳುತ್ತಿಲ್ಲ. ಊಟ ತಿಂಡಿಗೂ ಬಿಡುವು ಪಡೆಯದೆ ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com