ಎಲ್ಲಾ ರಹಸ್ಯ ದಾಖಲೆ ಹಿಂದಿರುಗಿಸುವಂತೆ ಮಿಸ್ತ್ರಿಗೆ ಟಾಟಾ ಸನ್ಸ್ ಸೂಚನೆ

ನಿಮ್ಮ ಬಳಿ ಇರುವ ಎಲ್ಲಾ ರಹಸ್ಯ ದಾಖಲೆ ಮತ್ತು ಮಾಹಿತಿಯನ್ನು ಹಿಂದಿರುಗಿಸುವಂತೆ ಟಾಟಾ ಸನ್ಸ್​ನ ಮಾಜಿ ಅಧ್ಯಕ್ಷ...
ಸೈರಸ್ ಮಿಸ್ತ್ರಿ
ಸೈರಸ್ ಮಿಸ್ತ್ರಿ
ನವದೆಹಲಿ: ನಿಮ್ಮ ಬಳಿ ಇರುವ ಎಲ್ಲಾ ರಹಸ್ಯ ದಾಖಲೆ ಮತ್ತು ಮಾಹಿತಿಯನ್ನು ಹಿಂದಿರುಗಿಸುವಂತೆ ಟಾಟಾ ಸನ್ಸ್​ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿಗೆ ಅವರಿಗೆ ಟಾಟಾ ಸನ್ಸ್ ತನ್ನ ಎರಡನೇ ಲೀಗಲ್ ನೋಟಿಸ್ ನಲ್ಲಿ ಸೂಚಿಸಿದೆ.
ಟಾಟಾ ಸನ್ಸ್ ಮಿಸ್ತ್ರಿಗೆ ಗುರುವಾರ ನೋಟಿಸ್ ನೀಡಿದ್ದು, ರಹಸ್ಯ ದಾಖಲೆ ಕೂಡಲೇ ಹಿಂದಿರುಗಿಸುವಂತೆ ಸೂಚಿಸಿದೆ. ಕಳೆದ ಮೂರು ದಿನಗಳಲ್ಲಿ ಟಾಟಾ ಸನ್ಸ್ ಮಿಸ್ತ್ರಿಗೆ ಎರಡು ನೋಟಿಸ್ ನೀಡಿದ್ದು, ಕಂಪನಿಗೆ ಸಂಬಂಧಿಸಿದ ಎಲ್ಲಾ ರಹಸ್ಯ ದಾಖಲೆಗಳನ್ನು ತಕ್ಷಣ ಹಿಂದಿರುಗಿಸುವಂತೆ ಸೂಚಿಸಲಾಗಿದೆ.
ಕಂಪನಿಯ ಗೋಪ್ಯತಾ ಕಾಯ್ದೆಯನ್ನು ಉಲ್ಲಂಘಿಸಿದ ಆರೋಪ ಎದುರಿಸುತ್ತಿರುವ ಮಿಸ್ತ್ರಿ ಅವರು ಕಂಪನಿಯ ಅನುಮತಿಯಿಲ್ಲದೆ ರಹಸ್ಯ ದಾಖಲೆಗಳನ್ನು ಹೊರಗೆ ಕೊಂಡೊಯ್ದಿದ್ದಾರೆ. ಜತೆಗೆ ಅದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಟಾಟಾ ಸನ್ಸ್ ಆರೋಪಿಸಿದೆ.
ಮಿಸ್ತ್ರಿ ಅವರನ್ನು ಟಾಟಾ ಸನ್ಸ್ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದ್ದನ್ನು ಪ್ರಶ್ನಿಸಿ ಮಿಸ್ತ್ರಿ ಕುಟುಂಬಸ್ಥರ ಹೂಡಿಕೆ ಇರುವ ಕಂಪನಿಗಳು ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್ ನಲ್ಲಿ ಅರ್ಜಿ ಸಲ್ಲಿಸಿವೆ. ಈ ಅರ್ಜಿಗಳೊಂದಿಗೆ ಟಾಟಾ ಸನ್ಸ್​ಗೆ ನ ಹಲವಾರು ರಹಸ್ಯ ದಾಖಲೆಗಳನ್ನು ಲಗತ್ತಿಸಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಟಾಟಾ ಸನ್ಸ್ ಮಿಸ್ತ್ರಿಗೆ ಮಂಗಳವಾರ ಒಂದು ನೋಟಿಸ್ ನೀಡಿ ರಹಸ್ಯ ದಾಖಲೆ ದುರುಪಯೋಗ ಪಡಿಸಿಕೊಳ್ಳದಂತೆ ಸೂಚಿಸಿತ್ತು. ಜತೆಗೆ ದಾಖಲೆ ದುರುಪಯೋಗ ಸಂಬಂಧ ಮಿಸ್ತ್ರಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿಯೂ ತಿಳಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com