'ಹ್ಯಾಪಿ ನ್ಯೂ ಇಯರ್ ಆಫರ್' ಏಕೆ ರದ್ದುಪಡಿಸಬಾರದು?: ರಿಲಯನ್ಸ್ ಜಿಯೋಗೆ ಟ್ರಾಯ್ ಪ್ರಶ್ನೆ

'ಹ್ಯಾಪಿ ನ್ಯೂ ಇಯರ್ ಆಫರ್' ಏಕೆ ರದ್ದುಪಡಿಸಬಾರದು? ಎಂದು 90 ದಿನಗಳ ಕಾಲ ಉಚಿತ ಇಂಟರ್ನೆಟ್ ಪ್ಯಾಕೇಜ್ ಮತ್ತು ವಾಯ್ಸ್ ಕಾಲ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮುಂಬೈ: 'ಹ್ಯಾಪಿ ನ್ಯೂ ಇಯರ್ ಆಫರ್' ಏಕೆ ರದ್ದುಪಡಿಸಬಾರದು? ಎಂದು 90 ದಿನಗಳ ಕಾಲ ಉಚಿತ ಇಂಟರ್ನೆಟ್ ಪ್ಯಾಕೇಜ್ ಮತ್ತು ವಾಯ್ಸ್ ಕಾಲ್ ಸೇವೆ ನೀಡುವ ಮೂಲಕ ಟೆಲಿಕಾಂ ಮಾರುಕಟ್ಟೆಯಲ್ಲಿ ಭಾರೀ ಸಂಚಲನ ಸೃಷ್ಠಿಸಿರುವ ರಿಲಯನ್ಸ್ ಜಿಯೋಗೆ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ(ಟ್ರಾಯ್ ) ಶುಕ್ರವಾರ ಪ್ರಶ್ನಿಸಿದೆ.
ಇನ್ನು ತನ್ನ ಉಚಿತ ಡೇಟಾ ಮತ್ತು ವಾಯ್ಸ್ ಕಾಲ್ ಸೇವೆಗಳನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಮುಖೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಕಂಪನಿ, ಜಿಯೋ ಉಚಿತ ಕೊಡುಗೆಯನ್ನು 90 ದಿನಗಳಗಿಂತ ಹೆಚ್ಚು ಅವಧಿಗೆ ವಿಸ್ತರಿಸುವ ಮೂಲಕ ಯಾವುದೇ ನಿಯಮ ಉಲ್ಲಂಘಿಸಿಲ್ಲ ಎಂದು ಸ್ಪಷ್ಟಪಡಿಸಿದೆ.
ಟ್ರಾಯ್ ವಿವರಣೆಗೆ ಇಂದು ಸ್ಪಷ್ಟನೆ ನೀಡಿರುವ ರಿಲಯನ್ಸ್ ಕಂಪನಿ, ತನ್ನ ಆರಂಭಿಕ ಕೊಡುಗೆಯ ವಿಸ್ತರಣೆ ಎಂದು ಪರಿಗಣಿಸುವಂತಿಲ್ಲ ಎಂದು ಹೇಳಿದೆ.
ಟ್ಯಾರಿಫ್ ಯೋಜನೆಗಳು ಬಹು ಅಂಶಗಳನ್ನು ಹೊಂದಿದ್ದು, ಕಾಲಕಾಲಕ್ಕೆ ಬದಲಾಗಬಹುದಾಗಿದೆ. ಹೀಗಾಗಿ ಹ್ಯಾಪಿ ನ್ಯೂ ಇಯರ್ ಕೊಡುಗೆಯನ್ನು ವೆಲ್ ಕಂ ಆಫರ್ ನ ವಿಸ್ತರಣೆಯಾಗಿ ಪರಿಗಣಿಸುವಂತಿಲ್ಲ ಎಂದು ಜಿಯೋ ವಾದಿಸಿದೆ.
ಜಿಯೋ ಸೆಪ್ಟೆಂಬರ್ ನಲ್ಲಿ ತನ್ನ ಗ್ರಾಹಕರಿಗೆ 90 ದಿನಗಳ ಉಚಿತ ಸೇವೆ ವ್ಯವಸ್ಥೆ ಘೋಷಿಸಿತ್ತು. ಆದರೆ ಗ್ರಾಹಕರು 4ಜಿ ಬಳಕೆಯ ಮಿತಿಯನ್ನು ಮೀರಿದಾಗ ರಿನ್ಯೂಯ್ ಅಥವಾ ಪಾವತಿಗೆ ಯಾವುದೇ ಆಯ್ಕೆಯನ್ನು ನೀಡಿರಲಿಲ್ಲ. ಡಿಸೆಂಬರ್ 1ರಂದು ಹೊಸ ಆಫರ್ ಪ್ರಕಟಿಸಿದ ಜಿಯೋ, ಡೇಟಾ ಮತ್ತು ನಿಗದಿತ ವೇಗವನ್ನು ರಿಚಾರ್ಜ್ ಮೂಲಕ ಪಡೆದುಕೊಳ್ಳಬಹುದು ಎಂದು ಹೇಳಿತ್ತು.
ಬಳಿಕ ಹ್ಯಾಪಿ ನ್ಯೂ ಇಯರ್ ವಿಶೇಷ ಸೇವೆ ಒದಗಿಸುವ ಸಲುವಾಗಿ ಉಚಿತ ಸೇವೆಯ ಕಾಲಾವಧಿಯನ್ನು ಮಾರ್ಚ್ ಅಂತ್ಯದವರೆಗೂ ವಿಸ್ತರಿಸಿತ್ತು. ಈ ಸೇವೆ ಕುರಿತಂತೆ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಜಿಯೋಗೆ ಮಾಹಿತಿ ನೀಡುವಂತೆ ಕೇಳಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com