ಆರ್ ಬಿ ಐ ಹಣಕಾಸು ನೀತಿ ಪ್ರಕಟ: ಬಡ್ಡಿದರದಲ್ಲಿ ಬದಲಾವಣೆ ಇಲ್ಲ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ(ಆರ್​ಬಿಐ) ದ್ವೈಮಾಸಿಕ ಹಣಕಾಸು ನೀತಿ ಪ್ರಕಟವಾಗಿದ್ದು ಈ ಬಾರಿಯ ಹಣಕಾಸು ನೀತಿಯಲ್ಲಿ ಬಡ್ಡಿ ದರದಲ್ಲಿ ಬದಲಾವಣೆ ಮಾಡಲಾಗಿಲ್ಲ.
ಆರ್​ಬಿಐ ಗೌರ್ನರ್ ರಘುರಾಮ್ ರಾಜನ್
ಆರ್​ಬಿಐ ಗೌರ್ನರ್ ರಘುರಾಮ್ ರಾಜನ್

ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ(ಆರ್​ಬಿಐ) ದ್ವೈಮಾಸಿಕ ಹಣಕಾಸು ನೀತಿ ಪ್ರಕಟವಾಗಿದ್ದು  ಈ ಬಾರಿಯ ಹಣಕಾಸು ನೀತಿಯಲ್ಲಿ ಬಡ್ಡಿ ದರದಲ್ಲಿ ಬದಲಾವಣೆ ಮಾಡಲಾಗಿಲ್ಲ.
ಹಣದುಬ್ಬರ ಪ್ರಮಾಣ ಏರಿಕೆಯಾಗುತ್ತಿರುವುದರಿಂದ ಈ ಬಾರಿ ಬಡ್ಡಿ ದರ ಕಡಿತಗೊಳಿಸಲಾಗಿಲ್ಲ. 2016-17ನೇ ಸಾಲಿನ ಬಜೆಟ್ ಈ ತಿಂಗಳು ಮಂಡನೆಯಾಗಲಿದೆ. ವಿತ್ತೀಯ ಕೊರತೆ, ಹಣದುಬ್ಬರ ಮತ್ತಿತರ ವಿಚಾರಗಳಿಗೆ ಸಂಬಂಧಿಸಿ ಸರ್ಕಾರ ಬಜೆಟ್​ನಲ್ಲಿ ಏನು ಕ್ರಮ ಕೈಗೊಳ್ಳಲಿದೆ ಎಂಬುದನ್ನು ಆರ್​ಬಿಐ ಕಾದು ನೋಡಲಿದ್ದು ಬಜೆಟ್ ನ್ನು ಆಧರಿಸಿ ಮುಂದಿನ ಹಣಕಾಸು ನೀತಿಯಲ್ಲಿ ಬಡ್ಡಿ ದರ ಕಡಿತಗೊಳಿಸುವ ಬಗ್ಗೆ ಆರ್ ಬಿಐ ನಿರ್ಧಾರ ಕೈಗೊಳ್ಳಲಿದೆ. 
ಮುಕ್ತ ಮಾರುಕಟ್ಟೆ ಕಾರ್ಯಾಚರಣೆ ಸೇರಿದಂತೆ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಬಂಡವಾಳ ಹರಿದು ಬರಲು ನೆರವಾಗುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹಣಕಾಸು ನೀತಿ ಪ್ರಕಟಿಸಿದ ರಘುರಾಮ್ ರಾಜನ್ ಹೇಳಿದ್ದಾರೆ. ಬ್ಯಾಂಕಿಂಗ್ ವ್ಯವಸ್ಥೆ ಬಂಡವಾಳ ಕೊರತೆ ಎದುರಿಸುತ್ತಿದೆ ಎಂಬುದು ವಾಸ್ತವವಲ್ಲ ಎಂದು ಆರ್​ಬಿಐ ಗೌರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com