ಕೇಂದ್ರೀಯ ವಿವಿಗಳಲ್ಲಿ ತ್ರಿವರ್ಣ ಧ್ವಜ ಹಾರಾಟ ಅಪಾಯಕಾರಿ ಟ್ರೆಂಡ್: ಆರ್ ಜೆಡಿ

ಕೇಂದ್ರ ಸರ್ಕಾರ ಎಲ್ಲವನ್ನು ಪ್ರದರ್ಶನಕ್ಕೆ ಇಡುವ ಮಟ್ಟಕ್ಕೆ ಇಳಿಯುತ್ತಿದೆ. ಇದೊಂದು ಅಪಾಯಕಾರಿ ಟ್ರೆಂಡ್ ...
ಭಾರತ ರಾಷ್ಟ್ರಧ್ವಜ
ಭಾರತ ರಾಷ್ಟ್ರಧ್ವಜ

ಪಾಟ್ನಾ:  ಎನ್‌ಡಿಎ ಸರ್ಕಾರ ಎಲ್ಲವನ್ನು ಪ್ರದರ್ಶನಕ್ಕೆ ಇಡುವ ಮಟ್ಟಕ್ಕೆ ಇಳಿಯುತ್ತಿದೆ.ಇದು ಅತ್ಯಂತ ಅಪಾಯಕಾರಿ ಪ್ರವೃತ್ತಿ ಎಂದು ಆರ್‌ಜೆಡಿ ವಕ್ತಾರ ಮನೋಜ್ ಝಾ ಆರೋಪಿಸಿದ್ದಾರೆ.

ಕೇಂದ್ರಿಯ ವಿಶ್ವವಿದ್ಯಾಲಯಗಳಲ್ಲಿ ರಾಷ್ಟ್ರಧ್ವಜ ಹಾರಾಟ ಕಡ್ಡಾಯಗೊಳಿಸುತ್ತಿರುವ ನಡೆಯನ್ನು ಟೀಕಿಸಿರುವ ಅವರು ನಾವು ನಮ್ಮ ತ್ರಿವರ್ಣ ಧ್ವಜವನ್ನು ಹೃದಯದಲ್ಲಿಟ್ಟುಕೊಂಡಿದ್ದೇವೆ. ರಾಷ್ಟ್ರವಾದವನ್ನು ಕೇವಲ ಧ್ವಜದ ಮೂಲಕವಷ್ಟೇ ಅಲ್ಲದೆ ಚರ್ಚೆ, ಪಾಲ್ಗೊಳ್ಳುವಿಕೆ ಮೂಲಕ ಸಹ ತಿಳಿದುಕೊಳ್ಳುತ್ತೇವೆ. ಆದರೆ ಕೇಂದ್ರ ಸರ್ಕಾರ ಎಲ್ಲವನ್ನು ಪ್ರದರ್ಶಕ್ಕೆ ಇಡುವ ಮಟ್ಟಕ್ಕೆ ಇಳಿಯುತ್ತಿದೆ. ಇದೊಂದು ಅಪಾಯಕಾರಿ ಟ್ರೆಂಡ್ ಆಗುತ್ತಿದೆ ಎಂದು ಆರ್‌ಜೆಡಿ ವಕ್ತಾರ ಮನೋಜ್ ಝಾ ಆತಂಕ ವ್ಯಕ್ತ ಪಡಿಸಿದ್ದಾರೆ.

ಕೇಂದ್ರ ಸರ್ಕಾರ ಮತ್ತು ಮಾನವ ಸಂಪನ್ಮೂಲ ಸಚಿವಾಲಯಗಳು ಕೇವಲ ಚಿಹ್ನೆಗಳ ಮೇಲೆ ನಿರ್ದಿಷ್ಟ ಪ್ರೀತಿಯನ್ನು ಹೊಂದಿವೆ. ವಿಶ್ವವಿದ್ಯಾಲಯ ವ್ಯವಸ್ಥೆಗೆ ಸಂಬಂಧಿಸಿದಂತೆ ನಾವು ಇದಕ್ಕಿಂತ ಹೆಚ್ಚು ಕಾಳಜಿ ತೋರಬೇಕಾದ ವಿಷಯಗಳನ್ನು ಹೊಂದಿದ್ದೇವೆ. ಸ್ವಾಯತ್ತತೆ, ತಾರತಮ್ಯ ಇವೇ ಮೊದಲಾದ ಗಂಭೀರ ವಿಷಯಗಳ ಬಗ್ಗೆ ಚರ್ಚೆಯೇ ನಡೆಯುತ್ತಿಲ್ಲ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com