
ನವದೆಹಲಿ: ಪಿಂಚಣಿ ಹಣ ಹಿಂಪಡೆಯಲು ಮತ್ತು ಅಂತಹ ಹಣವನ್ನು ವರಿಷ್ಠ ಪಿಂಚಣಿ ಭೀಮಾ ಯೋಜನೆಯಡಿ ಹೂಡಿಕೆ ಮಾಡಲು ಉದ್ಯೋಗ ಭವಿಷ್ಯ ನಿಧಿ ಸಂಸ್ಥೆ (ಪಿಎಎಫ್ ಒ) ನಿಯಮಗಳನ್ನು ಬಿಗಿಗೊಳಿಸಿದೆ.
ಇನ್ನು ಮುಂದೆ ಗ್ರಾಹಕರು 54 ವರ್ಷ ಪೂರೈಸಿದ ಕೂಡಲೇ ತಮ್ಮ ಪಿಂಚಣಿ ಹಣ ಹಿಂಪಡೆಯಲು ಸಾಧ್ಯವಾಗುವುದಿಲ್ಲ. ಅವರು 57 ವರ್ಷಗಳವರೆಗೆ ಕಾಯಲೇಬೇಕು. ಈ ಸಂಬಂಧ ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಸಚಿವಾಲಯ ಅಧಿಸೂಚನೆ ಹೊರಡಿಸಿದೆ ಎಂದು ಹಿರಿಯ ಅಧಿಕಾರಿಗಳು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಈ ಹಿಂದೆ ಇದ್ದ ನಿಯಮದ ಪ್ರಕಾರ, ಭವಿಷ್ಯ ನಿಧಿ ಗ್ರಾಹಕರು ಪಿಎಫ್ ಹಣದ ಶೇಕಡಾ 90 ಭಾಗವನ್ನು ತಮಗೆ 54 ವರ್ಷವಾದಾಗ ಪಡೆಯಬಹುದಾಗಿತ್ತು. ಆದರೆ ಇನ್ನು ಮುಂದೆ ಅದು ಸಾಧ್ಯವಾಗುವುದಿಲ್ಲ. ಮತ್ತೆ ಮೂರು ವರ್ಷಗಳವರೆಗೆ ಕಾಯಬೇಕಾಗುತ್ತದೆ.
Advertisement