
ನವದೆಹಲಿ: ಡಿಸೆಂಬರ್ ತಿಂಗಳಲ್ಲಿ ಹಣದುಬ್ಬರ ಇಳಿಕೆ ಪ್ರವೃತ್ತಿ ಕುಂಟಿತವಾಗಿದ್ದು, ಸಗಟು ಸೂಚ್ಯಂಕ ಹಣದುಬ್ಬರ ಶೇ.(-)೦.73 ಕ್ಕೆ ಏರಿಕೆಯಾಗಿದೆ.
ತರಕಾರಿ ಸೇರಿದಂತೆ ಪ್ರಮುಖ ಆಹಾರ ಪದಾರ್ಥಗಳ ಬೆಲೆ ದುಬಾರಿಯಾಗಿರುವುದರಿಂದ ಹಣದುಬ್ಬರ ಇಳಿಕೆ ಪ್ರವೃತ್ತಿ ಕುಂಟಿತವಾಗಿದೆ ಎಂದು ವಿಶ್ಲೇಷಿಸಲಾಗಿದೆ. ಸಗಟು ಸೂಚ್ಯಂಕ ಹಣದುಬ್ಬರ ಕಳೆದ 4 ತಿಂಗಳಿನಿಂದ ಏರಿಕೆಯಾಗುತ್ತಿದ್ದು ನವೆಂಬರ್ ತಿಂಗಳಲ್ಲಿ ಶೇ. (-) 1 .99 ರಷ್ಟಿತ್ತು.
2014 ರ ಡಿಸೆಂಬರ್ ನಲ್ಲಿ ಸಗಟು ಸೂಚ್ಯಂಕ ಆಧಾರಿತ ಹಣದುಬ್ಬರ ಶೇ.(-)೦.50 ರಷ್ಟಿತ್ತು. ಡಿಸೆಂಬರ್ ತಿಂಗಳ ಏರಿಕೆಯೂ ಸೇರಿ ಹಣದುಬ್ಬರ ಸತತ 14 ನೇ ತಿಂಗಳು ಏರಿಕೆಯಾಗಿದ್ದಷ್ಟೇ ಅಲ್ಲದೇ ಋಣಾತ್ಮಕ ವಲಯದಲ್ಲೇ ಮುಂದುವರೆದಿದೆ. ಇನ್ನು ಆಹಾರ ಹಣದುಬ್ಬರವೂ ಏರಿಕೆಯಾಗಿದ್ದು ಕಳೆದ ತಿಂಗಳು( ನವೆಂಬರ್ ) ನಲ್ಲಿ ಶೇ.5 .20 ರಷ್ಟಿದ್ದ ಪ್ರಮಾಣ ಡಿಸೆಂಬರ್ ನಲ್ಲಿ 8 .17 ಕ್ಕೆ ಏರಿಕೆಯಾಗಿದೆ. ಡಿಸೆಂಬರ್ ತಿಂಗಳಲ್ಲಿ ತರಕಾರಿ ಬೆಲೆ ಏರಿಕೆ ದರ ಶೇ.20 .56 ರಷ್ಟಾದರೆ ಹಣ್ಣುಗಳ ಬೆಲೆ ಏರಿಕೆ ದರ ಶೇ.೦.76 ರಷ್ಟಾಗಿದೆ.
ಹಣದುಬ್ಬರ ಏರಿಕೆಯಾಗಿರುವುದರಿಂದ ಹಾಗೂ ಕೈಗಾರಿಕಾ ಉತ್ಪಾದನೆ ಕುಗ್ಗಿರುವುದರಿಂದ ಪ್ರಮುಖ ಸಾಲ ಪ್ರಮಾಣ ಇಳಿಕೆ ಮಾಡಲು ಆರ್.ಬಿ.ಐ ಮೇಲೆ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ.
Advertisement