ಈಗಲೇ ನಿಮ್ಮ ಆದಾಯ ತೆರಿಗೆ ಘೋಷಣೆ ಮಾಡಿಕೊಳ್ಳಿ; ಶಿಕ್ಷೆಯಿಂದ ಪಾರಾಗಿ

ನೀವು ತೆರಿಗೆ ಪಾವತಿಸದಿದ್ದರೆ, ನಿಮ್ಮ ಆಸ್ತಿ ಘೋಷಣೆ ಮಾಡಿರದಿದ್ದರೆ ಆದಾಯ ಘೋಷಣೆ ಅರ್ಜಿ-2016 ನ್ನು ಇಂದೇ ಸಲ್ಲಿಸಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ನೀವು ತೆರಿಗೆ ಪಾವತಿಸದಿದ್ದರೆ, ನಿಮ್ಮ ಆಸ್ತಿ ಘೋಷಣೆ ಮಾಡಿರದಿದ್ದರೆ ಆದಾಯ ಘೋಷಣೆ ಅರ್ಜಿ-2016 ನ್ನು ಇಂದೇ ಸಲ್ಲಿಸಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಿ. ಇದು ಭಾರತೀಯ ನಿವಾಸಿಗಳು, ಅನಿವಾಸಿ ಭಾರತೀಯರು, ಹಿಂದೂ ಅವಿಭಜಿತ ಕುಟುಂಬಗಳಿಗೆ, ಕಂಪೆನಿಗಳು, ಘಟಕಗಳು ಮತ್ತು ಪಾಲುದಾರಿಕೆಯವರಿಗೆ ಅನ್ವಯವಾಗುತ್ತದೆ.
ಏನಿದು ಐಡಿಎಸ್?
ನೀವು ಈ ಹಿಂದೆ ನಿಮ್ಮ ಆದಾಯ ಘೋಷಣೆ ಮಾಡಿರದಿದ್ದರೆ, ಸರ್ಕಾರಕ್ಕೆ ತೆರಿಗೆ ಕಟ್ಟಿರದಿದ್ದರೆ ಇದು ಒಂದು ಬಾರಿಯ ಕೊನೆಯ ಅವಕಾಶ. ಈ ಸಲ ನೀವು ಆದಾಯ ತೆರಿಗೆ ಕಟ್ಟಿ ನಿಮ್ಮ ಸಂಪಾದನೆಯನ್ನು ಘೋಷಿಸಬಹುದು. ಈ ಮೂಲಕ ಶಿಕ್ಷೆಯಿಂದ ಪಾರಾಗಲು ಸರ್ಕಾರ ಜನರಿಗೆ ಅವಕಾಶ ನೀಡಿದೆ. 
ಹೊಸ ತೆರಿಗೆ ದರವೇನು?
ನಿಮ್ಮ ಆದಾಯ ಯಾವುದೇ ಸ್ವರೂಪದಲ್ಲಿರಲಿ, ಅದು ಆಸ್ತಿ, ಸಂಪತ್ತು, ಸ್ಥಿರ ಮತ್ತು ಚರಾಸ್ತಿ, ಚಿನ್ನ, ಒಡವೆ, ಹಣದ ರೂಪದಲ್ಲಿದ್ದರೂ ಅದು ಈ ವರ್ಷ ಅಥವಾ ಹಿಂದಿನ ತೆರಿಗೆ ಪಾವತಿ ವರ್ಷದ್ದಾಗಿರಬಹುದಾದರೂ ಮಾರುಕಟ್ಟೆ ದರದ ಆಧಾರದಲ್ಲಿ ತೆರಿಗೆ ಪಾವತಿಸಬೇಕು. ಅಘೋಷಿತ ಆದಾಯಕ್ಕೆ ತೆರಿಗೆ ದರ ಶೇಕಡಾ 30ರಷ್ಟಿದ್ದು, ಶೇಕಡಾ 25ರಷ್ಟು ಅಧಿಕವಾಗಿದೆ. ಇದು ಒಂದು ಬಾರಿಯ ತೆರಿಗೆ ದರ, ಅಧಿಕ ತೆರಿಗೆ ಮತ್ತು ದಂಡವನ್ನು ಆದಾಯ ತೆರಿಗೆ ಕಾಯ್ದೆಯಡಿ ನಿಗದಿಪಡಿಸಲಾಗುತ್ತದೆ. ಅಘೋಷಿತ ಆದಾಯ ತೆರಿಗೆ ಸಲ್ಲಿಸಲು ಸೆಪ್ಟೆಂಬರ್ 30 ಕೊನೆಯ ದಿನ. ಆದರೆ ತೆರಿಗೆ, ಅಧಿಕ ತೆರಿಗೆ ಮತ್ತು ದಂಡ ಪಾವತಿಸಲು ನವೆಂಬರ್ 30ರವರೆಗೆ ಅವಕಾಶವಿದೆ.
ಏನಿದರ ಲಾಭ?
ನೀವು ತೆರಿಗೆ ಸಲ್ಲಿಸಿದರೆ ಯಾವುದೇ ವಿಚಾರಣೆ ಮತ್ತು ತನಿಖೆಯಿಂದ ತಪ್ಪಿಸಿಕೊಳ್ಳಬಹುದು. ಆದಾಯ ತೆರಿಗೆ ಸಲ್ಲಿಸಿದವರ ವಿವರಗಳನ್ನು ಗೌಪ್ಯವಾಗಿಡಲಾಗುತ್ತದೆ. ಈ ಯೋಜನೆಯಡಿ ಸಂಪತ್ತು ಘೋಷಿಸಿಕೊಂಡವರಿಗೆ ಸಂಪತ್ತು ತೆರಿಗೆಯಿಂದ ವಿನಾಯ್ತಿ ನೀಡಲಾಗುತ್ತದೆ. ಆದಾಯ ತೆರಿಗೆ ಘೋಷಿಸಿಕೊಂಡವರು ನಿರ್ದಿಷ್ಟ ನಿಯಮಗಳಿಗೆ ಅನುಗುಣವಾಗಿ 1988ರ ಆದಾಯ ತೆರಿಗೆ, ಸಂಪತ್ತು ತೆರಿಗೆ ಕಾಯ್ದೆ ಮತ್ತು ಬೇನಾಮಿ ವಹಿವಾಟು(ತಡೆ) ಕಾಯ್ದೆಯಡಿ ಶಿಕ್ಷೆಯಿಂದ ವಿನಾಯ್ತಿ ಪಡೆಯುತ್ತಾರೆ. 
ಯಾಕೆ ಆದಾಯವನ್ನು ಘೋಷಿಸಬೇಕು?
ವ್ಯಕ್ತಿಯ ಆದಾಯದ ರೀತಿ ಮತ್ತು ಆದಾಯದ ಮೂಲಗಳ ಬಗ್ಗೆ ಗೊಂದಲವಾಗಬಾರದು. ಆದಾಯ ತೆರಿಗೆ ಘೋಷಣೆ ಅರ್ಜಿಯಲ್ಲಿ ಅಘೋಷಿತ ಆದಾಯ ಕಲಂನಲ್ಲಿ ಸ್ಥಿರ ಆದಾಯಗಳಾದ ಆಸ್ತಿ, ಒಡವೆ, ಹಣ ಇತ್ಯಾದಿಗಳನ್ನು ಸೂಚಿಸಬೇಕು. ಹಿಂದಿನ ವರ್ಷಗಳ ಆದಾಯವನ್ನು ಈಗ ಘೋಷಿಸಿಕೊಂಡರೆ ಅದು ತಪ್ಪಾದ ಮಾಹಿತಿಯಾಗುತ್ತದೆ. ಅದಕ್ಕೆ ಕೂಡ ಆದಾಯ ತೆರಿಗೆ ಕಾಯ್ದೆಯಲ್ಲಿ ಶಿಕ್ಷೆಯಿದೆ.
ಯಾಕೆ ಮುಕ್ತವಾಗಿ ಆದಾಯ ತೆರಿಗೆ ಸಲ್ಲಿಸಬೇಕು?
ಹಿಂದೆ ವ್ಯಕ್ತಿಯ ಆದಾಯದ ಮೂಲ ಮತ್ತು ಸಂಪಾದನೆಯ ಮಾರ್ಗವನ್ನು ರುಜುವಾತುಪಡಿಸಬೇಕೆಂದು ಜನರು ಅಪೇಕ್ಷಿಸುತ್ತಿದ್ದರು. ಈಗ, ಸೀಮಿತ ಅವಧಿಯ ಯೋಜನೆಗಳಿಂದಾಗಿ, ಆದಾಯದ ಮೂಲಗಳನ್ನು ವಿವರಿಸಬೇಕಾಗಿಲ್ಲ. ಅಲ್ಲದೆ ಇಂದು ಆದಾಯ ತೆರಿಗೆ ಇಲಾಖೆ ವ್ಯಕ್ತಿಯ ಆದಾಯವನ್ನು ರಿಜಿಸ್ಟ್ರಾರ್ ಗಳಿಂದ, ಬ್ಯಾಂಕು, ಸ್ಟಾಕ್ ಎಕ್ಸ್ ಚೇಂಜ್, ತೆರಿಗೆ ಕಡಿತದಾರರಿಂದ ಸಂಗ್ರಹಿಸುತ್ತದೆ. ಅಲ್ಲದೆ ತೆರಿಗೆ ಪಾವತಿದಾರರು ಇತ್ತೀಚಿನ ವರ್ಷಗಳಲ್ಲಿ ನಡೆಸಿದ ಹಣಕಾಸು ವಹಿವಾಟುಗಳ ಬಗ್ಗೆ ಅಂಕಿಅಂಶಗಳನ್ನು ಪ್ರಾಜೆಕ್ಟ್ ಇನ್ಸೈಟ್ ಎಂಬ ವಿಸ್ತಾರವಾದ ಮತ್ತು ಅನುಸರಣೆ ನಿರ್ವಹಣೆ ಕಾರ್ಯಕ್ರಮದ ಮೂಲಕ ಪಡೆದುಕೊಳ್ಳುತ್ತದೆ. ನೀವು ನಿಮ್ಮ ಆದಾಯವನ್ನು ಘೋಷಣೆ ಮಾಡದಿದ್ದರೂ ಸಹ ತೆರಿಗೆ ಸಿಬಿಐ ತಂಡಕ್ಕೆ ಗೊತ್ತಿರುತ್ತದೆ.
ಮೌಲ್ಯಮಾಪನ ಅಗತ್ಯವೇ?
ತೆರಿಗೆ ಮೌಲ್ಯಮಾಪನ ವರದಿಯನ್ನು ಪಡೆಯುವುದು ಕಡ್ಡಾಯವಾದರೂ ಕೂಡ ಅದನ್ನು ಸೇರಿಸುವ ಅಗತ್ಯವಿಲ್ಲ. ಆಸ್ತಿಯನ್ನು ಮ್ಯಾಜಿಸ್ಟ್ರೇಟ್ ಬಳಿ ಮೌಲ್ಯಮಾಪನ ಮಾಡಿಸಿಟ್ಟುಕೊಂಡಿರಬೇಕು ಎಂದು ಇಲಾಖೆಯ ನಿಯಮ ಹೇಳುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com