ಪಾರದರ್ಶಕತೆಯಲ್ಲಿ ಭಾರತದ ಕಂಪೆನಿಗಳು ಬೆಸ್ಟ್; ಚೀನಾ ಕಂಪೆನಿಗಳು ವರ್ಸ್ಸ್ಟ್: ಸಮೀಕ್ಷೆ

ಭಾರತೀಯ ಕಂಪೆನಿಗಳು ಅತ್ಯಂತ ಪಾರದರ್ಶಕವಾಗಿದ್ದು, ಚೀನಾ ದೇಶದ ಕಂಪೆನಿಗಳು ಅತ್ಯಂತ ಅಪಾರದರ್ಶಕವಾಗಿವೆ ಎಂದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಹಾಂಗ್ ಕಾಂಗ್/ ಲಂಡನ್: ಭಾರತೀಯ ಕಂಪೆನಿಗಳು ಅತ್ಯಂತ ಪಾರದರ್ಶಕವಾಗಿದ್ದು, ಚೀನಾ ದೇಶದ ಕಂಪೆನಿಗಳು ಅತ್ಯಂತ ಅಪಾರದರ್ಶಕವಾಗಿವೆ ಎಂದು ಬರ್ಲಿನ್ ಮೂಲದ ಟ್ರಾನ್ಸ್ಪರೆನ್ಸಿ ಇಂಟರ್ ನ್ಯಾಷನಲ್ ಸಮೀಕ್ಷೆ ತಿಳಿಸಿದೆ.
ಈ ಸಂಘಟನೆ ಇಂದು ಸಮೀಕ್ಷೆ ವರದಿಯನ್ನು ಬಿಡುಗಡೆ ಮಾಡಿದ್ದು, ಪ್ರವರ್ಧಮಾನಕ್ಕೆ ಬರುತ್ತಿರುವ 15 ದೇಶಗಳ 100 ಕಂಪೆನಿಗಳನ್ನು ಅಧ್ಯಯನ ಮಾಡಿ ಈ ತೀರ್ಮಾನಕ್ಕೆ ಬಂದಿದೆ. ಇವುಗಳಲ್ಲಿ ಬ್ರೆಜಿಲ್, ಮೆಕ್ಸಿಕೋ ಮತ್ತು ರಷ್ಯಾದ ಕಂಪೆನಿಗಳು ಕೂಡ ಸೇರಿವೆ.
ಭಾರತದ 19 ಕಂಪೆನಿಗಳು ಸಮೀಕ್ಷೆಯಲ್ಲಿ ಭಾಗವಹಿಸಿದ್ದು, ಅವುಗಳು ಕಂಪೆನಿಯ ರಚನೆ ಮತ್ತು ದೇಶದ ಕಂಪೆನಿ ಕಾಯ್ದೆಗಳ ಕಾನೂನುಗಳನ್ನು ಶೇಕಡಾ 75ರಷ್ಟು ಅನುಸರಿಸುತ್ತಿವೆ. ಚೀನಾ ದೇಶದ ಕಂಪೆನಿಗಳು ಮಾತ್ರ ಭ್ರಷ್ಟಾಚಾರ ವಿರೋಧಿ ಕಾನೂನುಗಳನ್ನು, ಕಂಪೆನಿ ಕಾಯ್ದೆಗಳನ್ನು ಸರಿಯಾಗಿ ಪಾಲಿಸುವುದಿಲ್ಲ ಎಂದು ಹೇಳಿದೆ. 
ಚೀನಾದ 37 ಕಂಪೆನಿಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ ಅವುಗಳ ಸಾಧನೆಗಳು ಕಳಪೆ ಮಟ್ಟದಲ್ಲಿವೆ. ಸಮೀಕ್ಷೆಗೊಳಪಟ್ಟ ಕಂಪೆನಿಗಳಲ್ಲಿ 3 ಕಂಪನಿಗಳು ಶೂನ್ಯ ಮತ್ತು ಉಳಿದ ಕಂಪೆನಿಗಳು ಶೇಕಡಾ 1.6 ರಷ್ಟು ಮಾತ್ರ ಅಂಕ ಗಳಿಸಿವೆ ಎಂದು ಟ್ರಾನ್ಸ್ಪರೆನ್ಸಿ ಇಂಟರ್ ನ್ಯಾಷನಲ್ ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿದೆ. 
ಅತ್ಯಂತ ಕೆಳಮಟ್ಟದ 25 ಕಂಪೆನಿಗಳಲ್ಲಿ ಕೂಡ ಚೀನಾದ ಕಂಪೆನಿಗಳು ಹೆಚ್ಚಾಗಿವೆ. ಆದರೆ ಭಾರತೀಯ ಕಂಪೆನಿಗಳು ಅತಿ ಉನ್ನತ ಮಟ್ಟದಲ್ಲಿದ್ದು, ಕಂಪೆನಿಯ ನಿಯಮ, ಹಣಕಾಸಿನ ವಹಿವಾಟುಗಳಲ್ಲಿ ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತವೆ.
ಹೊರದೇಶಗಳಲ್ಲಿ ಕೆಲಸ ಮಾಡುವ ಭಾರತೀಯ ಕಂಪೆನಿಗಳು ಕೂಡ ಅಲ್ಲಿನ ನಿಯಮಗಳನ್ನು ಸರಿಯಾಗಿ ಪಾಲಿಸುತ್ತವೆ ಎಂದು ಹೇಳಿದೆ. ಸಮೀಕ್ಷೆಯಲ್ಲಿ ಭಾರತೀಯ ಕಂಪೆನಿಗಳಲ್ಲಿ ಮೊದಲ ಸ್ಥಾನ ಭಾರ್ತಿ ಏರ್ ಟೆಲ್ ಗೆ ಹೋಗಿದೆ. ಅದಕ್ಕೆ 10ರಲ್ಲಿ 7.3 ಅಂಕಗಳು ಸಿಕ್ಕಿದೆ. ನಂತರದ ಸ್ಥಾನದಲ್ಲಿ ಟಾಟಾ ಮತ್ತು ವಿಪ್ರೋ ಕಂಪೆನಿಗಳಿವೆ. ಅತಿ ಉತ್ತಮ ಗುಣಮಟ್ಟದ 25 ಕಂಪೆನಿಗಳಲ್ಲಿ ಚೀನಾದ ಝೆಡ್ ಟಿಇ ಕಂಪೆನಿ ಮಾತ್ರ ಸ್ಥಾನ ಪಡೆದಿದೆ. 
ಅಧ್ಯಯನದ ವರದಿಯಿಂದ ಅಂತಾರಾಷ್ಟ್ರೀಯ ಕಂಪೆನಿಗಳ ಸ್ಥಿತಿಗತಿ ಅತ್ಯಂತ ಶೋಚನೀಯವಾಗಿರುವುದು ಕಂಡುಬಂದಿದ್ದು, ಭ್ರಷ್ಟಾಚಾರವನ್ನು ತಡೆಗಟ್ಟಲು ಕೆಲಸ ಮಾಡಬೇಕಾದ ಅವಶ್ಯಕತೆಯಿದೆ ಎಂದು ಮನದಟ್ಟಾಗುತ್ತದೆ.
ಜಾಗತಿಕ ಬೆಳವಣಿಗೆಯಲ್ಲಿ ಶೇಕಡಾ 70ರಷ್ಟು ಮಾರುಕಟ್ಟೆಯ ಆರ್ಥಿಕ ವ್ಯವಹಾರ, ಪ್ರಗತಿ ಅವಲಂಬಿತವಾಗಿದ್ದು, ಸಾಮಾಜಿಕ-ಆರ್ಥಿಕ ಬೆಳವಣಿಗೆಗೆ ಭ್ರಷ್ಟಾಚಾರ ಅಡ್ಡಗಾಲು ಹಾಕುತ್ತದೆ. 
ಪನಾಮಾ ಪೇಪರ್ಸ್ ಸೋರಿಕೆಯಾದ ಕೆಲ ದಿನಗಳಲ್ಲಿ ಈ ಸಂಸ್ಥೆ ಅಧ್ಯಯನ ನಡೆಸಿ ವರದಿ ಹೊರತಂದಿದೆ. ಕಾರ್ಪೊರೇಟ್ ವೆಬ್ ಸೈಟ್ ಮತ್ತು ಸಾರ್ವಜನಿಕವಾಗಿ ಸಿಕ್ಕಿದ ಮಾಹಿತಿ ಆಧಾರದಲ್ಲಿ ಟ್ರಾನ್ಸ್ಪರೆನ್ಸಿ ಇಂಟರ್ ನ್ಯಾಷನಲ್ ಮಾಹಿತಿ ಕಲೆಹಾಕಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com