ಸಗಟು ಬೆಲೆ ಸೂಚ್ಯಂಕ ಏರಿಕೆ: ಅಗತ್ಯ ವಸ್ತುಗಳು ದುಬಾರಿ

ಆಹಾರ ಪದಾರ್ಥಗಳು ಮತ್ತು ಉತ್ಪಾದಕ ವಸ್ತುಗಳ ಮೇಲೆ ಸಗಟು ಬೆಲೆ ಸೂಚ್ಯಂಕ ಏರಿಕೆ ಕಂಡುಬಂದಿದ್ದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಆಹಾರ ಪದಾರ್ಥಗಳು ಮತ್ತು ಉತ್ಪಾದಕ ವಸ್ತುಗಳ ಮೇಲೆ ಸಗಟು ಬೆಲೆ ಸೂಚ್ಯಂಕ ಏರಿಕೆ ಕಂಡುಬಂದಿದ್ದು, ಶೇಕಡಾ 1.62ರಷ್ಟು ಹೆಚ್ಚಾಗಿದೆ.
ಸಗಟು ಬೆಲೆ ಸೂಚ್ಯಂಕ ಏರಿಕೆಯಿಂದ ಚಿಲ್ಲರೆ ಹಣದುಬ್ಬರ ಬೆಲೆಯೇರಿಕೆಯುಂಟಾಗಿದ್ದು ಕಳೆದ ಐದೂವರೆ ತಿಂಗಳಲ್ಲೇ ಇದು ಹೆಚ್ಚಳವಾಗಿದೆ. ಜೂನ್ ತಿಂಗಳೊಂದರಲ್ಲೇ ಶೇಕಡಾ 5.77ರಷ್ಟು ಹೆಚ್ಚಳವಾಗಿದೆ. ಅಲ್ಲದೆ ವಾರ್ಷಿಕ ಸಗಟು ಹಣದುಬ್ಬರ ಕೂಡ ಮೇ ತಿಂಗಳಲ್ಲಿ ಶೇಕಡಾ 0.79ರಷ್ಟು ಮತ್ತು ಜೂನ್ ನಲ್ಲಿ (-)2.13ರಷ್ಟು ಅಧಿಕವಾಗಿದೆ.
ಆಹಾರ ಹಣದುಬ್ಬರ ಶೇಕಡಾ 8.18ರಷ್ಟು ಹೆಚ್ಚಳವಾಗಿದ್ದು, ತರಕಾರಿ, ಹಣ್ಣು, ಧಾನ್ಯಗಳು, ಪ್ರೊಟೀನ್ ಭರಿತ ಆಹಾರ ಪದಾರ್ಥಗಳ ಬೆಲೆ ಹೆಚ್ಚಳವಾಗಿದೆ ಎಂದು ಸರ್ಕಾರ ಇಂದು ಬಿಡುಗಡೆ ಮಾಡಿರುವ ಅಂಕಿಅಂಶದಿಂದ ತಿಳಿದುಬಂದಿದೆ.
ತರಕಾರಿ ಬೆಲೆಯಂತೂ ಶೇಕಡಾ 16.91ರಷ್ಟು ಹೆಚ್ಚಾಗಿದೆ. ಆಲೂಗಡ್ಡೆ ಬೆಲೆ ಶೇಕಡಾ 64.48ರಷ್ಟು ಜಾಸ್ತಿಯಾಗಿದೆ. ಧಾನ್ಯಗಳ ಬೆಲೆ ಶೇಕಡಾ26.61ರಷ್ಟು ಹೆಚ್ಚಾಗಿದೆ. ಈರುಳ್ಳಿ ಬೆಲೆ ಮಾತ್ರ ಸ್ವಲ್ಪ ಕಡಿಮೆಯಾಗಿದೆ. ಇಂಧನ, ವಿದ್ಯುತ್ ಮತ್ತು ಖನಿಜಗಳ ಬೆಲೆಗಳಲ್ಲಿಯೂ ಸ್ವಲ್ಪ ಮಟ್ಟಿಗೆ ಜೂನ್ ತಿಂಗಳಲ್ಲಿ ಇಳಿಕೆ ಕಂಡುಬಂದಿದೆ.
ಉತ್ಪಾದನಾ ವಸ್ತುಗಳ ವಿಭಾಗದಲ್ಲಿ ಹಣದುಬ್ಬರ ಶೇಕಡಾ 1.17ರಷ್ಟು ಹೆಚ್ಚಳವಾಗಿದೆ.
ರಿಸರ್ವ್ ಬ್ಯಾಂಕಿನ ಮುಂದಿನ ಯೋಜನಾ ಸಭೆ ಆಗಸ್ಟ್ 9ರಂದು ನಡೆಯಲಿದೆ. ಅದರ ನಿರ್ಧಾರದ ಮೇಲೆ ಮುಂದಿನ ದಿನಗಳಲ್ಲಿ ಹಣದುಬ್ಬರದ ಪರಿಸ್ಥಿತಿ ನಿರ್ಧಾರವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com