ಕಡಿಮೆ ಹಣದುಬ್ಬರ ದರ ಹೇಳಿಕೆ ಸಾಬೀತುಪಡಿಸಲು ಟೀಕಾಕಾರರಿಗೆ ರಘುರಾಮ್ ರಾಜನ್ ಸವಾಲು

ಹಣದುಬ್ಬರ ಕಡಿಮೆಯಾಗುತ್ತಿದ್ದರು ಬಡ್ಡಿ ದರವನ್ನು ಇಳಿಕೆ ಮಾಡುತ್ತಿಲ್ಲವೆಂಬ ಟೀಕೆಗಳಿಗೆ ಆರ್ ಬಿಐ ಗೌರ್ನರ್ ರಘುರಾಮ್ ರಾಜನ್, ಪ್ರತಿಕ್ರಿಯೆ ನೀಡಿದ್ದಾರೆ.
ಕಡಿಮೆ ಹಣದುಬ್ಬರ ದರ ಹೇಳಿಕೆ ಸಾಬೀತುಪಡಿಸಲು ಟೀಕಾಕಾರರಿಗೆ ರಘುರಾಮ್ ರಾಜನ್ ಸವಾಲು

ಮುಂಬೈ: ಹಣದುಬ್ಬರ ಕಡಿಮೆಯಾಗುತ್ತಿದ್ದರು ಬಡ್ಡಿ ದರವನ್ನು ಇಳಿಕೆ ಮಾಡುತ್ತಿಲ್ಲವೆಂಬ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿರುವ ಆರ್ ಬಿಐ ಗೌರ್ನರ್ ರಘುರಾಮ್ ರಾಜನ್, ದರ ಏರಿಕೆ ಹೇಗೆ ಕಡಿಮೆಯಾಗುತ್ತಿದೆ ಎಂಬುದನ್ನು ತೋರಿಸುವಂತೆ ಟೀಕಾಕಾರರಿಗೆ ಸವಾಲು ಹಾಕಿದ್ದಾರೆ.

ಅರ್ಥಶಾಸ್ತ್ರದ ಆಧಾರವಿಲ್ಲದೆ ಚರ್ಚೆ ಮುಂದುವರೆಯುತ್ತಿದೆ. ಕಳೆದ ವಾರ ಪ್ರಕಟವಾದ ಅಂಕಿ-ಅಂಶಗಳ ಪ್ರಕಾರ ಹಣದುಬ್ಬರ ಶೇ.5.8 ರಷ್ಟಿದೆ.  ನಮ್ಮ ವಿತ್ತೀಯ ನೀತಿ ದರ  ಶೇ.6.5 ರಷ್ಟಿದೆ. ಹಾಗಾದರೆ ಹಣದುಬ್ಬರ ಕಡಿಮೆ ಇದೆ ಎಂದು ಹೇಳಲು, ಬಡ್ಡಿ ದರ ಕಡಿಮೆ ಮಾಡಲು ಕೇಳಲು ಹೇಗೆ ಸಾಧ್ಯ? ಎಂದು ರಘುರಾಮ್ ರಾಜನ್ ಪ್ರಶ್ನಿಸಿದ್ದಾರೆ.

ಹಣದುಬ್ಬರವನ್ನು ಗಮದಲ್ಲಿಟ್ಟುಕೊಂಡು ಬಡ್ಡಿದರ ಕಡಿಮೆ ಮಾಡದ ರಘುರಾಮ್ ರಾಜನ್ ಮಾನಸಿಕರಾಗಿ ಭಾರತೀಯರಾಗಿಲ್ಲ ಎಂದು ಇತ್ತೀಚಿನ ದಿನಗಳಲ್ಲಿ ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಘುರಾಮ್ ರಾಜನ್ ತಮ್ಮ ಟೀಕಾಕಾರರಿಗೆ ಪ್ರತಿಕ್ರಿಯೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com