ನಷ್ಟದ ಹಂತಕ್ಕೆ ತಲುಪಿದ ಶೇಕಡಾ 50ರಷ್ಟು ಸ್ಟಾರ್ಟ್ ಅಪ್ ಕಂಪೆನಿಗಳು

ಕೇಂದ್ರ ಸರ್ಕಾರದ ಪರಿಸರ ಸ್ನೇಹಿ ನವೋದ್ಯಮ(ಸ್ಟಾರ್ಟ್ ಅಪ್)ನಿಂದ ಉತ್ತೇಜಿತಗೊಂಡು ಉದ್ಯಮಕ್ಕೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಕೇಂದ್ರ ಸರ್ಕಾರದ ಪರಿಸರ ಸ್ನೇಹಿ ನವೋದ್ಯಮ(ಸ್ಟಾರ್ಟ್ ಅಪ್)ನಿಂದ ಉತ್ತೇಜಿತಗೊಂಡು ಉದ್ಯಮಕ್ಕೆ ಕೈಹಾಕಿದ ಶೇಕಡಾ 50ರಷ್ಟು ಯುವ ಉದ್ಯಮಿಗಳು ಕಳೆದ ಎರಡು ವರ್ಷಗಳಲ್ಲಿ ಉದ್ಯಮವನ್ನು ಮುಚ್ಚುವ ಹಂತಕ್ಕೆ ತಲುಪಿದ್ದಾರೆ.
ಸಂಶೋಧನಾ ಘಟಕ ಕ್ಸೆಲರ್8 ಜೂನ್ 2014ರಿಂದ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, 2 ಸಾವಿರದ 281 ಭಾರತೀಯ ನವ ಉದ್ಯಮಿಗಳು ತಮ್ಮ ಕೆಲಸ ಕಾರ್ಯಗಳನ್ನು ಆರಂಭಿಸಿದ್ದಾರೆ. ಆದರೆ ಅವರಲ್ಲಿ 997 ಮಂದಿ ಈಗಾಗಲೇ ಉದ್ಯಮ ನಷ್ಟವಾಗಿ ಮುಚ್ಚಿದ್ದಾರೆ ಎಂದು ತಿಳಿದುಬಂದಿದೆ.
ನಷ್ಟದಿಂದ ಮುಚ್ಚಿರುವ ಕಂಪೆನಿಗಳು ಇ-ಕಾಮರ್ಸ್, ಆರೋಗ್ಯ ತಂತ್ರಜ್ಞಾನ, ರೊಬೊಟಿಕ್ಸ್, ಲಾಜಿಸ್ಟಿಕ್ಸ್, ವ್ಯಾಪಾರ ಗುಪ್ತಚರ ಮತ್ತು ವಿಶ್ಲೇಷಣೆ, ಆಹಾರ ತಂತ್ರಜ್ಞಾನ ಮತ್ತು ಆನ್ಲೈನ್ ನೇಮಕಾತಿಯ ಕಂಪೆನಿಗಳಾಗಿದ್ದವು.
ಕ್ಸೆಲರ್ 8ನ ಸ್ಥಾಪಕ ರಿಶಬ್ ಲಾವನಿಯಾ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿ, ವಿಫಲಗೊಂಡ ಕಂಪೆನಿಗಳ ಸರಾಸರಿ ಅವಧಿ ಹನ್ನೊಂದೂವರೆ ತಿಂಗಳುಗಳಾಗಿವೆ. ಕಂಪೆನಿ ವ್ಯವಸ್ಥಾಪಕರ ಅದಕ್ಷತೆ, ಹಣಕಾಸಿನ ಕೊರತೆ, ವಹಿವಾಟಿನ ಸಂಗತಿಗಳು ಮೊದಲಾದವು ಕಂಪೆನಿಗಳು ನಷ್ಟ ಹೊಂದಲು ಪ್ರಮುಖ ಕಾರಣಗಳು.
ಕೇಂದ್ರ ಸರ್ಕಾರ ಸ್ಟಾರ್ಟ್ ಅಪ್ ಅಭಿಯಾನವನ್ನು ಕೈಗೆತ್ತಿಕೊಂಡರೂ ಸಹ ಸರಿಯಾದ ಮಾರ್ಗಸೂಚಿಯಿಲ್ಲದಿರುವುದು ಪ್ರಮುಖ ಹಿನ್ನಡೆಯಾಗಿವೆ. ಸರ್ಕಾರದ ಸ್ಟಾರ್ಟ್ ಅಪ್ ಇಂಡಿಯಾ ಪೋರ್ಟಲ್ ಗೆ ಬಂದ 728 ಅರ್ಜಿಗಳಲ್ಲಿ ಕೇವಲ 16 ಅರ್ಜಿಗಳನ್ನು ಮಾತ್ರ 2016ನೇ ಹಣಕಾಸು ಕಾಯ್ದೆ ಪ್ರಕಾರ, ತೆರಿಗೆ ಲಾಭಕ್ಕಾಗಿ ಪರಿಗಣಿಸಲಾಗಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com