4.8 ಬಿಲಿಯನ್ ಡಾಲರ್ ಗೆ ಯಾಹೂ ಖರೀದಿಸಿದ ವೆರಿಜಾನ್

ಇಂಟರ್ ನೆಟ್ ದೈತ್ಯ ಯಾಹೂ ಕಂಪನಿಯನ್ನು ವೆರಿಜಾನ್ ಸಂಸ್ಥೆ ಸುಮಾರು 4.8 ಬಿಲಿಯನ್ ಡಾಲರ್ ಮೊತ್ತಕ್ಕೆ ಖರೀದಿಸಿದೆ....
ಯಾಹೂ
ಯಾಹೂ

ನವದೆಹಲಿ: ಇಂಟರ್ ನೆಟ್ ಎಂದರೇ ಯಾಹೂ ಎನ್ನುವ ಕಾಲವೊಂದಿತ್ತು. ಅಂತಹ ಇಂಟರ್ ನೆಟ್ ದೈತ್ಯ ಯಾಹೂ ಕಂಪನಿಯನ್ನು ವೆರಿಜಾನ್ ಸಂಸ್ಥೆ ಸುಮಾರು 4.8 ಬಿಲಿಯನ್ ಡಾಲರ್ ಮೊತ್ತಕ್ಕೆ ಖರೀದಿಸಿದೆ.

ಹಲವು ದಿನಗಳಿಂದ ನಡೆಯುತ್ತಿದ್ದ ಮಾರಾಟ ಪ್ರಕ್ರಿಯೆ ಕೊನೆಗೊಂಡಿದ್ದು ನ್ಯೂಯಾರ್ಕ್ ಮೂಲದ ವೆರಿಜಾನ್ ಯಾಹೂ ಕಂಪನಿ ಖರೀದಿಸಿದೆ.

ಗೂಗಲ್ ಮತ್ತು ಫೇಸ್ ಬುಕ್ ನ ಜಾಹೀರಾತು ಮಾರುಕಟ್ಟೆಗಳಿಗೆ ವೆರಿಜಾನ್ ಪ್ರತಿಸ್ಪರ್ಧಿಯಾಗಲಿದೆ ಎಂದು ವಿಶ್ಲೇಷಿಸಲಾಗಿದೆ. ಯಾಹೂ ಖರೀದಿ ಪ್ರಕ್ರಿಯೆಯಲ್ಲಿ ಕ್ವಿಕೆನ್ ಲೋನ್ಸ್ ಸಂಸ್ಥಾಪಕ ಡಾನ್ ಗಿಲ್ಬೆರ್ಟ್ ವೆಕ್ಟರ್  ಕ್ಯಾಪಿಟಲ್ ಮ್ಯಾನೇಜ್ ಮೆಂಟ್ ಮತ್ತು
ಟಿಜಿಪಿ ಸಂಸ್ಥೆಗಳು ಕೂಡ ಭಾಗಿಯಾಗಿದ್ದವು.

2008 ರಲ್ಲಿ ಯಾಹೂ ಕಂಪನಿಯನ್ನು ಕೊಂಡುಕೊಳ್ಳಲು ಮೈಕ್ರೋಸಾಪ್ಟ್ 44 ಬಿಲಿಯನ್ ಡಾಲರ್ ಕೊಟ್ಟು ಖರೀದಿಸಲು ಮುಂದಾಗಿತ್ತು. ಆದರೆ ಯಾಹೂ ಸಂಸ್ಥೆ ಮಾರಾಟಕ್ಕೆ ಒಪ್ಪಿರಲಿಲ್ಲ.

ಕಳೆದ ನಾಲ್ಕು ವರ್ಷಗಳಿಂದ ಪುನರ್ ಸ್ಥಾಪನೆ ಕ್ರಮದಲ್ಲಿರುವ ಇಂಟರ್ ನೆಟ್ ದೈತ್ಯ ಕಂಪನಿಯನ್ನು ಮತ್ತೆ ಲಾಭಕ್ಕೆ ತರಲು ಯಾಹೂ ಕಂಪನಿಯ ಸಿಇಓ ಮಾರಿಸ್ಸಾ ಮೇಯರ್ ಪ್ರಯತ್ನಿಸುತ್ತಿದ್ದಾರೆ.

ಯಾಹೂ  ಸಂಸ್ಥೆಯ ಮುಖ್ಯ ಆಸ್ತಿ  ಚೀನಾದ ಇಂಟರ್ ನೆಟ್ ದೈತ್ಯ ಅಲಿಬಾಬಾ ಆಗಿದೆ. ಇದರಿಂದ ಯಾಹೂ ಮಾರುಕಟ್ಟೆ ಮೌಲ್ಯ 37 ಬಿಲಿಯನ್ ಡಾಲರ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com