ಜಬಾಂಗ್ ಖರೀದಿಸಿದ ಮಿಂತ್ರಾ

ಫ್ಲಿಪ್ ಕಾರ್ಟ್ ಮಾಲೀಕತ್ವದ ಮಿಂತ್ರಾ, ಜಬೊಂಗ್ ನ್ನು ಗ್ಲೋಬಲ್ ಫ್ಯಾಶನ್ ಗ್ರೂಪ್ ನಿಂದ ಬಹಿರಂಗಪಡಿಸದ ಮೊತ್ತಕ್ಕೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಫ್ಲಿಪ್ ಕಾರ್ಟ್ ಮಾಲೀಕತ್ವದ ಮಿಂತ್ರಾ, ಜಬೊಂಗ್ ನ್ನು ಗ್ಲೋಬಲ್ ಫ್ಯಾಶನ್ ಗ್ರೂಪ್ ನಿಂದ ಬಹಿರಂಗಪಡಿಸದ ಮೊತ್ತಕ್ಕೆ ಖರೀದಿಸಿದ್ದು, ಭಾರತದಲ್ಲಿ ಬೆಳವಣಿಗೆ ಹೊಂದುತ್ತಿರುವ ಇ-ಕಾಮರ್ಸ್ ಕೈಗಾರಿಕೆಗೆ ಇದು ಇನ್ನಷ್ಟು ಬಲ ನೀಡಲಿದೆ.
ಮಿಂತ್ರಾವನ್ನು ಫ್ಲಿಪ್ ಕಾರ್ಟ್ 2014ರಲ್ಲಿ ಸುಮಾರು 2 ಸಾವಿರ ಕೋಟಿ ರೂಪಾಯಿಗೆ ಖರೀದಿಸಿತ್ತು.ಇದಕ್ಕೆ 15 ಮಿಲಿಯನ್ ಮಾಸಿಕ ಸಕ್ರಿಯ ಬಳಕೆದಾರರಿದ್ದರು.
ಖರೀದಿ ಬಗ್ಗೆ ಯಾವುದೇ ಹಣಕಾಸು ವಿವರ ಬಹಿರಂಗಪಡಿಸಿಲ್ಲ.
ಭಾರತದಲ್ಲಿ ಫ್ಯಾಶನ್ ಮತ್ತು ಲೈಫ್ ಸ್ಟೈಲ್ ವಿಭಾಗಗಳಲ್ಲಿ ಪ್ರಸ್ತುತ ಅನಭಿಷಿಕ್ತವಾಗಿ ಮೆರೆಯುತ್ತಿರುವ ಫ್ಲಿಪ್ ಕಾರ್ಟ್ ಗುಂಪು ಜಬೊಂಗನ್ನು ಖರೀದಿಸುವ ಮೂಲಕ ತನ್ನ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿದೆ. ಭಾರತದ ಪ್ರಮುಖ ಫ್ಯಾಶನ್ ಬಹು ಬ್ರ್ಯಾಂಡ್ ಇ-ಮಳಿಗೆಗಳಲ್ಲಿ ಜಬೊಂಗ್ ಒಂದಾಗಿದ್ದು, ಸಾವಿರದ 500ಕ್ಕೂ ಅಧಿಕ ಆನ್ ಟ್ರೆಂಡ್ ಅಂತಾರಾಷ್ಟ್ರೀಯ ಹೈ ಸ್ಟ್ರೀಟ್ ಬ್ರ್ಯಾಂಡ್ ಗಳು, ಸ್ಪೋರ್ಟ್ಸ್ ಲೇಬಲ್ ಗಳು, ಭಾರತದ ಪುರಾತನ ಮತ್ತು ವಿನ್ಯಾಸ ಲೇಬಲ್ ಗಳು ಮತ್ತು 1 ಲಕ್ಷದ 50 ಸಾವಿರಕ್ಕೂ ಅಧಿಕ ಸ್ಟೈಲ್ ಗಳನ್ನು ಒಳಗೊಂಡಿದೆ ಎಂದು ಮಿಂತ್ರಾ ಹೇಳಿಕೆಯಲ್ಲಿ ತಿಳಿಸಿದೆ.
ಈ ಬಗ್ಗೆ ಜಬೊಂಗ್ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com