ಅಮೆಜಾನ್ ಭಾರತದಲ್ಲಿ ೩ ಬಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ: ಜೆಫ್ ಬೆಜೋಸ್

ಅಮೆರಿಕಾ ಮೂಲದ ಜಾಗತಿಕ ಇ-ಕಾಮರ್ಸ್ ದೈತ್ಯ ಅಮೆಜಾನ್ ಭಾರತದಲ್ಲಿ ಮತ್ತೆ ೩ ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಮುಂದಾಗಿದೆ. ದೇಶದಲ್ಲಿ ಇ-ಕಾಮರ್ಸ್ ಕ್ಷೇತ್ರ ೧೪ ಬಿಲಿಯನ್ ಡಾಲರ್
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಾಶಿಂಗ್ಟನ್: ಅಮೆರಿಕಾ ಮೂಲದ ಜಾಗತಿಕ ಇ-ಕಾಮರ್ಸ್ ದೈತ್ಯ ಅಮೆಜಾನ್ ಭಾರತದಲ್ಲಿ ಮತ್ತೆ ೩ ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಮುಂದಾಗಿದೆ. ದೇಶದಲ್ಲಿ ಇ-ಕಾಮರ್ಸ್ ಕ್ಷೇತ್ರ ೧೪ ಬಿಲಿಯನ್ ಡಾಲರ್ ಮಾರುಕಟ್ಟೆ ಹೊಂದಿದ್ದು, ೨೦೧೮ರ ಹೊತ್ತಿಗೆ ಇದು ೫೫ ಬಿಲಿಯನ್ ಡಾಲರ್ ಗೆ ಏರಲಿದೆ ಎಂಬ ವರದಿಗಳ ನಡುವೆ ಅಮೆಜಾನ್ ದೊಡ್ಡ ಹೂಡಿಕೆಗೆ ಮುಂದಾಗಿದೆ.

"ನಾವು ಈಗಾಗಲೇ ಭಾರತದಲ್ಲಿ ೪೫ ಸಾವಿರ ಉದ್ಯೋಗಗಳನ್ನು ಸೃಷ್ಟಿಸಿದ್ದೇವೆ. ಭಾರತದ ಆರ್ಥಿಕತೆಯಲ್ಲಿ ಇನ್ನೂ ಹೆಚ್ಚಿನ ಸಾಧ್ಯತೆಗಳನ್ನು ನಾವು ಕಂಡಿದ್ದೇವೆ" ಎಂದು ಅಮೆಜಾನ್.ಕಾಂ ನ ಸಂಸ್ಥಾಪಕ-ಸಿ ಇ ಒ ಜೆಫ್ ಬೆಜೋಸ್, ಅಮೆರಿಕಾ ಪ್ರವಾಸದಲ್ಲಿರುವ ನರೇಂದ್ರ ಮೋದಿ ಸಮ್ಮುಖದಲ್ಲಿ ಅಮೆರಿಕಾ-ಭಾರತ ವ್ಯವಹಾರ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

"ನಮ್ಮ ಅಮೆಜಾನ್.ಇನ್ ತಂಡ ಗುರಿಯಿಟ್ಟುಕೊಂಡು ಹಾಕಿಕೊಂಡ ಮೈಲಿಗಳ್ಳುಗಳನ್ನೆಲ್ಲಾ ದಾಟುತ್ತಿದ್ದೇವೆ. ೨೦೧೪ ರಲ್ಲಿ ಘೋಷಣೆಯಾದ ೨ ಬಿಲಿಯನ್ ಡಾಲರ್ ಗಳ ಮೇಲೆ ಮತ್ತೆ ೩ ಬಿಲಿಯನ್ ಡಾಲರ್ ಮೊತ್ತವನ್ನು ಭಾರತದಲ್ಲಿ ಹೂಡಿಕೆ ಮಾಡುವುದನ್ನು ಘೋಷಿಸಲು ಸಂತಸವಾಗುತ್ತಿದೆ" ಎಂದು ಅವರು ಹೇಳಿದ್ದಾರೆ.

ಸನ್ ಫಾರ್ಮಾಟಿಕಲ್ಸ್ ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ದಿಲೀಪ್ ಶಾಂಗ್ವಿ ಅವರ ಜೊತೆಗೆ ಬೆಜೋಸ್ ಅವರಿಗೆ ಜಾಗತಿಕ ನಾಯಕತ್ವ ಪ್ರಶಸ್ತಿಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಪ್ರಧಾನ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com