ಭಾರತದಲ್ಲಿ ಅಮೆರಿಕ ಉದ್ಯಮಿಗಳಿಂದ 45 ಮಿಲಿಯನ್ ಡಾಲರ್ ನಷ್ಟು ಹೆಚ್ಚುವರಿ ಹೂಡಿಕೆ

ಭಾರತದಲ್ಲಿ ಈಗಾಗಲೇ 28 ಮಿಲಿಯನ್ ಡಾಲರ್ ನಷ್ಟು ಬಂಡವಾಳ ಹೂಡಿಕೆ ಮಾಡಿರುವ ಅಮೆರಿಕ ಉದ್ಯಮಿಗಳು ಇನ್ನೂ 45 ಮಿಲಿಯನ್ ಡಾಲರ್ ನಷ್ಟು ಬಂಡವಾಳ ಹೂಡಿಕೆ ಮಾಡಲಿದ್ದಾರೆ
ಉದ್ಯಮ ಸದಸ್ಯರ ಪರಿಷತ್ ನ ಅಧ್ಯಕ್ಷ ಜಾನ್ ಚೇಂಬರ್ಸ್-ಪ್ರಧಾನಿ ನರೇಂದ್ರ ಮೋದಿ
ಉದ್ಯಮ ಸದಸ್ಯರ ಪರಿಷತ್ ನ ಅಧ್ಯಕ್ಷ ಜಾನ್ ಚೇಂಬರ್ಸ್-ಪ್ರಧಾನಿ ನರೇಂದ್ರ ಮೋದಿ

ವಾಷಿಂಗ್ ಟನ್: ಭಾರತದಲ್ಲಿ ಈಗಾಗಲೇ 28 ಮಿಲಿಯನ್ ಡಾಲರ್ ನಷ್ಟು ಬಂಡವಾಳ ಹೂಡಿಕೆ ಮಾಡಿರುವ ಅಮೆರಿಕ ಉದ್ಯಮಿಗಳು ಇನ್ನೂ 45 ಮಿಲಿಯನ್ ಡಾಲರ್ ನಷ್ಟು ಬಂಡವಾಳ ಹೂಡಿಕೆ ಮಾಡಲಿದ್ದಾರೆ ಎಂದು ಅಮೆರಿಕ- ಭಾರತ ಉದ್ಯಮ ಸದಸ್ಯರ ಪರಿಷತ್ ನ ಅಧ್ಯಕ್ಷ ಜಾನ್ ಚೇಂಬರ್ಸ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸಿದ್ದಾರೆ.
2014 ರ ಸೆಪ್ಟೆಂಬರ್ ನಲ್ಲಿ ಯುಎಸ್ಐಬಿಸಿ ಸದಸ್ಯರು ಮುಂದಿನ 2 -3 ವರ್ಷಗಳಲ್ಲಿ 41 ಬಿಲಿಯನ್ ಡಾಲರ್ ಹೂಡಿಕೆ ಮಾಡುವ ಸೂಚನೆ ನೀಡಿದ್ದರು. ಈಗ ಕೇವಲ ಎರಡು ವರ್ಶಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪರಿಷತ್ ನ ಶೇ.20  ರಷ್ಟು ಸದಸ್ಯರು 28 ಬಿಲಿಯನ್ ಡಾಲರ್ ನಷ್ಟು ಹಣವನ್ನು ಹೂಡಿಕೆ ಮಾಡಿದ್ದಾರೆ ಎಂದು ಜಾನ್ ಚೇಂಬರ್ಸ್ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವ ಅಮೆರಿಕ- ಭಾರತ ಉದ್ಯಮ ಸದಸ್ಯರ ಪರಿಷತ್ ನ ಅಧ್ಯಕ್ಷ ಜಾನ್ ಚೇಂಬರ್ಸ್, ಮುಂದಿನ 2 -3 ವರ್ಷಗಳಲ್ಲಿ ಹೂಡಿಕೆ ಪ್ರಮಾಣ ಮತ್ತಷ್ಟು ಹೆಚ್ಚಲಿದ್ದು, ಭಾರತದಲ್ಲಿ ಇನ್ನೂ 45 ಬಿಲಿಯನ್ ಡಾಲರ್ ನಷ್ಟು ಹೆಚ್ಚುವರಿ ಹೂಡಿಕೆಯಾಗಲಿದೆ ಎಂದಿದ್ದಾರೆ.
ಜಾನ್ ಚೆಂಬರ್ಸ್ ನೊಂದಿಗೆ ಪೆಪ್ಸಿಕೋ, ಮಾಸ್ಟರ್ ಕಾರ್ಡ್, ವಾರ್ಬರ್ಗ್ ಪಿನ್ಸಸ್, ಲಾಕ್ಹೀಡ್ ಮಾರ್ಟಿನ್, ಬೋಯಿಂಗ್, ವೆಸ್ಟಿಂಗ್ಹೌಸ್, ಇಂಟೆಲ್ಸ್ಯಾಟ್, ಎಮರ್ಸನ್ ಸಂಸ್ಥೆಗಳ ಮುಖ್ಯಸ್ಥರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com