ನವದೆಹಲಿ: ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ರಿಂಗಿಂಗ್ ಬೆಲ್ಸ್ ಕಂಪನಿಯ ಫ್ರೀಡಂ-251 ಸ್ಮಾರ್ಟ್ ಫೋನ್ ಅನ್ನು ಜೂನ್ 28ರಿಂದ ಗ್ರಾಹಕರಿಗೆ ವಿತರಿಸುವುದಾಗಿ ಮಂಗಳವಾರ ನೋಯ್ಡಾ ಮೂಲದ ಕಂಪನಿ ಹೇಳಿಕೊಂಡಿದೆ.
ಆನ್ ಲೈನ್ ಮೂಲಕ ಬುಕ್ ಮಾಡಿದ ಗ್ರಾಹಕರಿಗೆ ಜೂನ್ 28ರಿಂದ ಮೊಬೈಲ್ ಡೆಲಿವರಿ ಮಾಡಲಾಗುವುದು ಎಂದು ಕಂಪನಿಯ ನಿರ್ದೇಶಕ ಮೋಹಿತ್ ಗೋಯಲ್ ಅವರು ತಿಳಿಸಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ರಿಂಗಿಂಗ್ ಬೆಲ್ಸ್ ನ 251 ರುಪಾಯಿ ಮೊತ್ತದ ಸ್ಮಾರ್ಟ್ ಫೋನ್ ಮಾರಾಟಕ್ಕೆ ನವದೆಹಲಿಯಲ್ಲಿ ಚಾಲನೆ ನೀಡಲಾಗಿತ್ತು. ವಿಶ್ವದ ಅತಿ ಅಗ್ಗದ ಈ ಮೊಬೈಲ್ ಗಾಗಿ ಈಗಾಗಲೇ 7.35 ಕೋಟಿ ಮಂದಿ ಬುಕ್ಕಿಂಗ್ ಮಾಡಿದ್ದಾರೆ.