ಬ್ರೆಕ್ಸಿಟ್ ಎಫೆಕ್ಟ್: ಟಾಟಾ ಕಂಪನಿಗೆ ಒಂದೇ ದಿನದಲ್ಲಿ 30 ಸಾವಿರ ಕೋಟಿ ರೂ. ನಷ್ಟ!

ವಿಶ್ವ ಮಾರುಕಟ್ಟೆಯನ್ನು ತಲ್ಲಣಗೊಳಿಸಿದ್ದ ಬ್ರೆಕ್ಸಿಟ್ (ಯುರೋಪಿಯನ್ ಒಕ್ಕೂಟದಿಂದ ಬ್ರಿಟನ್ ಹೊರಬಂದ ಬೆಳವಣಿಗೆ) ಉದ್ಯಮ ಕ್ಷೇತ್ರದಲ್ಲೂ ಪರಿಣಾಮ ಬೀರಿದ್ದು, ಬ್ರಿಟನ್ ನಲ್ಲಿ ಪ್ರಮುಖ ಉದ್ದಿಮೆಯಾಗಿರುವ ಟಾಟಾ ಸಂಸ್ಥೆಯ ಆದಾಯಕ್ಕೆ ಭಾರಿ ಹೊಡೆತ ನೀಡಿದೆ.
ಬ್ರೆಕ್ಸಿಟ್ ಎಫೆಕ್ಟ್: ಟಾಟಾ ಕಂಪನಿಗೆ ಗೆ ಒಂದೇ ದಿನದಲ್ಲಿ 30 ಸಾವಿರ ಕೋಟಿ ರೂ. ನಷ್ಟ!
ಬ್ರೆಕ್ಸಿಟ್ ಎಫೆಕ್ಟ್: ಟಾಟಾ ಕಂಪನಿಗೆ ಗೆ ಒಂದೇ ದಿನದಲ್ಲಿ 30 ಸಾವಿರ ಕೋಟಿ ರೂ. ನಷ್ಟ!

ಮುಂಬೈ: ವಿಶ್ವ ಮಾರುಕಟ್ಟೆಯನ್ನು ತಲ್ಲಣಗೊಳಿಸಿದ್ದ ಬ್ರೆಕ್ಸಿಟ್ (ಯುರೋಪಿಯನ್ ಒಕ್ಕೂಟದಿಂದ ಬ್ರಿಟನ್ ಹೊರಬಂದ ಬೆಳವಣಿಗೆ) ಉದ್ಯಮ ಕ್ಷೇತ್ರದಲ್ಲೂ ಪರಿಣಾಮ ಬೀರಿದ್ದು, ಬ್ರಿಟನ್ ನಲ್ಲಿ ಪ್ರಮುಖ ಉದ್ದಿಮೆಯಾಗಿರುವ ಟಾಟಾ ಸಂಸ್ಥೆಯ ಆದಾಯಕ್ಕೆ ಭಾರಿ ಹೊಡೆತ ನೀಡಿದೆ.

ಬ್ರೆಕ್ಸಿಟ್ ಪರಿಣಾಮವಾಗಿ ಟಾಟಾ ಸಮೂಹದ ಕಂಪನಿಗಳಿಗೆ ಒಂದೇ ದಿನದಲ್ಲಿ ಒಟ್ಟು 30,000 ಕೋಟಿ ನಷ್ಟ ಉಂಟಾಗಿದೆ. ಯುಕೆನಲ್ಲಿ ಒಟ್ಟು 19 ಕಂಪನಿಗಳು 60,000 ನೌಕರರನ್ನು ಟಾಟಾ ಸಂಸ್ಥೆ ಹೊಂದಿದ್ದು, ಬ್ರಿಟನ್ ಯುರೋಪಿಯನ್ ಒಕ್ಕೂಟದಿಂದ ಹೊರಬಂದಿದ್ದ ಪರಿಣಾಮ ಟಾಟಾ ಒಡೆತನದ ಬ್ರಿಟನ್ ನಲ್ಲಿರುವ ಟಾಟಾ ಅಟೊಬೊಬೈಲ್ ನ ಜಾಗ್ವಾರ್ ಲ್ಯಾಂಡ್  ರೋವರ್( ಜೆಎಲ್ ಆರ್) ಕಂಪನಿ ಗೆ ಮುಂದಿನ ನಾಲ್ಕು ವರ್ಷಗಳಲ್ಲಿ 1.47 ಬಿಲಿಯನ್ ಡಾಲರ್ ನಷ್ಟವಾಗಲಿದೆ ಎಂದು ಅಂದಾಜಿಸಲಾಗುತ್ತಿದೆ.

ಬ್ರಿಟನ್ ನಲ್ಲಿರುವ ಟಾಟಾ ಕಂಪನಿ ಕಾರುಗಳ ಉತ್ಪಾದನೆಗೆ ಅಗತ್ಯವಿರುವ ಬಿಡಿಭಾಗಗಳನ್ನು ಯುರೋಪ್ ನ ಇತರ ರಾಷ್ಟ್ರಗಳಿಂದ ಪಡೆಯುತ್ತಿತ್ತು. ಆದರೆ ಬ್ರಿಟನ್ ಯುರೋಪಿಯನ್ ಒಕ್ಕೂಟದಿಂದ ಹೊರಬಂದಿರುವ ಕಾರಣದಿಂದ ಇನ್ನು ಮುಂದಿನ ದಿನಗಳಲ್ಲಿ ಟಾಟಾ ಕಂಪನಿ ಬಿಡಿಭಾಗಗಳನ್ನು ಯುರೋಪ್ ನ ಇತರ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕೆ ತೆರಿಗೆ ಬೀಳಲಿದ್ದು, ಟಾಟಾ ಸಂಸ್ಥೆಗೆ ಮೊದಲ ನಾಲ್ಕು ವರ್ಷಗಳು ಸವಾಲಿನದ್ದಾಗಿರುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ಹಿಂದೆ ಇದ್ದ ಡೇವಿಡ್ ಕೆಮರೂನ್ ಸರ್ಕಾರ ಟಾಟಾ ಉಕ್ಕು ಘಟಕ ಸೇರಿದಂತೆ ನಷ್ಟದಲ್ಲಿದ್ದ ಟಾಟಾ ಸಮೂಹದ ಉದ್ದಿಮೆಗಳ ಶೇ.25 ರಷ್ಟು ಪಾಲನ್ನು ಪಡೆಯುವುದಾಗಿ ಭರವಸೆ ನೀಡಿತ್ತು. ಆದರೆ ಬ್ರೆಕ್ಸಿಟ್ ಪರಿಣಾಮವಾಗಿ ಬ್ರಿಟನ್ ನಲ್ಲಿ ಸರ್ಕಾರವು ಬದಲಾವಣೆಯಾಗಲಿದ್ದು, ಟಾಟಾ ಉಕ್ಕು ಘಟಕ ಮತ್ತಷ್ಟು ಸಂಕಷ್ಟ ಎದುರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಬ್ರಿಟನ್ ನ ಪೌಂಡ್ ನ ಮೌಲ್ಯ ಕಡಿಮೆಯಾಗುತ್ತಿರುವುದರಿಂದ ರಫ್ತು ಮೂಲಕ ಬ್ರಿಟನ್ ನಲ್ಲಿರುವ ಟಾಟಾ ಕಂಪನಿಯ ಆದಾಯ ಹೆಚ್ಚುವ ನಿರೀಕ್ಷೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬ್ರಿಟನ್ ನ ಲ್ಲಿರುವ ಜೆಎಲ್ ಆರ್ ಟಾಟಾ ಮೋಟಾರ್ಸ್ ನ ಶೇ.90 ರಷ್ಟು ಆದಾಯದ ಮೂಲವಾಗಿದ್ದರೆ, ಟಿಸಿಎಸ್ ನ ಶೇ.16 ರಷ್ಟು ಆದಾಯ ಬ್ರಿಟನ್ ನಿಂದಲೇ ಬರುತ್ತಿದೆ. ಇನ್ನು ಜೆಎಲ್ ಆರ್ ಬ್ರಿಟನ್ ನ ಅಟೋಮೊಬೈಲ್ ಆಗಿರುವುದರಿಂದ ಜೆಎಲ್ ಆರ್ ಪ್ರಗತಿಗೆ ಪ್ರೋತ್ಸಾಹ ನೀಡುವ ಕ್ರಮಗಳನ್ನು ಬ್ರಿಟನ್ ಸರ್ಕಾರ ಕೈಗೊಳ್ಳಲಿದೆ ಎಂಬ ನಿರೀಕ್ಷೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com