ಒಎನ್ ಜಿಸಿ, ಆರ್ ಐಎಲ್ ಗೆ ನೈಸರ್ಗಿಕ ಅನಿಲ ಬೆಲೆ ಶೇಕಡಾ 60ರಷ್ಟು ಏರಿಕೆ: ಕೇಂದ್ರ ಸರ್ಕಾರ

ಸಂಕೀರ್ಣ ಪ್ರದೇಶಗಳಲ್ಲಿ ತೈಲ ನಿಕ್ಷೇಪಗಳ ಸಂಶೋಧನೆಗಳಿಗೆ ಒಎನ್ ಜಿಸಿ, ರಿಲಯನ್ಸ್ ಇಂಡಸ್ಟ್ರೀಸ್ ನಂತಹ ಸಂಸ್ಥೆಗಳಿಗೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಸಂಕೀರ್ಣ ಪ್ರದೇಶಗಳಲ್ಲಿ ತೈಲ ನಿಕ್ಷೇಪಗಳ ಸಂಶೋಧನೆಗಳಿಗೆ ಒಎನ್ ಜಿಸಿ, ರಿಲಯನ್ಸ್ ಇಂಡಸ್ಟ್ರೀಸ್ ನಂತಹ ಸಂಸ್ಥೆಗಳಿಗೆ ಉತ್ತೇಜನ ನೀಡಲು ನೈಸರ್ಗಿಕ ಅನಿಲ ಬೆಲೆಗಳನ್ನು ಶೇಕಡಾ 60ರಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಭಾರತದಲ್ಲಿ ಗ್ಯಾಸ್ ತೈಲ ಬೆಲೆ ಯುಎಸ್ ಡಿ 3.82 ದಶಲಕ್ಷ ಇದ್ದು ಏಪ್ರಿಲ್ ನಲ್ಲಿ ಅದು ಯುಎಸ್ ಡಿ 3.15 ರಷ್ಟಾಗುತ್ತದೆ. ಆದರೆ ತೈಲ ಹೊರತೆಗೆಯುವ ಸಮುದ್ರ ಆಳದ ಅಭಿವೃದ್ಧಿ ಚಟುವಟಿಕೆಗೆ ಈ ದರ ಸಾಕಾಗುವುದಿಲ್ಲ. ಅದಕ್ಕಾಗಿ ವಿವಿಧ ತೈಲ ಸಂಶೋಧನೆಗಳ ಚಟುವಟಿಕೆಗಳಿಗೆ ಸಹಾಯವಾಗಲು ನೈಸರ್ಗಿಕ ಅನಿಲ ದರವನ್ನು ಹೆಚ್ಚಿಸಲಾಗುವುದು ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ ದಾಸ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಹಣಕಾಸು ಸಚಿವ ಜೇಟ್ಲಿಯವರು ಮೊನ್ನೆ ಬಜೆಟ್ ಮಂಡಣೆ ಸಂದರ್ಭದಲ್ಲಿ, ''ಭಾರತದಲ್ಲಿ ಸಂಪದ್ಭರಿತ ಪ್ರಾಕೃತಿಕ ಸಂಪನ್ಮೂಲವಿದೆ. ತೈಲ ಮತ್ತು ಅನಿಲ ನಿಕ್ಷೇಪಗಳೂ ಇವೆ. ಆದರೆ ಅವುಗಳ ಸಂಶೋಧನೆ ಮತ್ತು ಬಳಸುವ ಪ್ರಮಾಣ ನಮ್ಮ ಸಾಮರ್ಥ್ಯಕ್ಕಿಂತ ತುಂಬಾ ಕಡಿಮೆಯಾಗಿದೆ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com