ಏ.1ರಿಂದ ಮೋಟಾರ್ ವಿಮೆ ಶೇ.20ರಿಂದ 30ರಷ್ಟು ಹೆಚ್ಚಳ ಸಾಧ್ಯತೆ

ಮೋಟಾರ್ ವಿಮಾ ಕಂತು ಮತ್ತಷ್ಟು ದುಬಾರಿಯಾಗಲಿದ್ದು, ವಿಮಾ ನಿಯಂತ್ರಣ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಮೋಟಾರ್ ವಿಮಾ ಕಂತು ಮತ್ತಷ್ಟು ದುಬಾರಿಯಾಗಲಿದ್ದು, ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ(ಐಆರ್ಡಿಎ) ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಮೋಟಾರ್ ವಿಮೆಯನ್ನು ಶೇ.20ರಿಂದ 30ರಷ್ಟು ಹೆಚ್ಚಿಸಲು ಅನುಮತಿ ನೀಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಸರ್ಕಾರಕ್ಕೆ ಸಲ್ಲಿಸಿರುವ ಕರಡು ಪ್ರತಿಯ ಪ್ರಕಾರ, ಏಪ್ರಿಲ್ 1ರಿಂದ ಆರು ಚಕ್ರದ ವಾಹನದ ಥರ್ಡ್ ಪಾರ್ಟಿ ವಿಮಾ ಕಂತನ್ನು ಈಗಿರುವ 1476 ರುಪಾಯಿಯಿಂದ 2229 ರುಪಾಯಿ ಹೆಚ್ಚಳವಾಗಲಿದೆ.
ಸಣ್ಣ ಗಾತ್ರದ ಇ-ರಿಕ್ಷಾ ಸೇರಿದಂತೆ ಮೂರು ಚಕ್ರದ ವಾಹನಗಳ ವಿಮಾ ಕಂತನ್ನು 59ರಿಂದ 400ರುಪಾಯಿಗೆ ಹಾಗೂ 6ರಿಂದ 17 ಸೀಟ್ ಗಳನ್ನು ಹೊಂದಿರುವ ಮೂರು ಚಕ್ರದ ವಾಹನಗಳ ವಿಮಾ ಕಂತನ್ನು 959ರಿಂದ 2059ರುಪಾಯಿ ಹೆಚ್ಚಿಸುವಂತೆ ಐಆರ್ ಡಿಎ ಪ್ರಸ್ತಾವನೆ ಸಲ್ಲಿಸಿದೆ. ಆದರೆ ದ್ವಿಚಕ್ರ ವಾಹನಗಳ ವಿಮಾ ಕಂತಿನಲ್ಲಿ ಯಾವುದೇ ಏರಿಕೆ ಇಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com