ತೈಲ ನಿಕ್ಷೇಪ ಪತ್ತೆಗೆ ಉತ್ತೇಜನ, ಬೆಲೆ ನಿಗದಿಗೆ ಹೊಸ ನೀತಿ ಪ್ರಕಟಿಸಿದ ಕೇಂದ್ರ ಸಚಿವ ಸಂಪುಟ

ವಿವಿಧ ಕ್ಷೇತ್ರಗಳಲ್ಲಿ ಉತ್ಪಾದನೆ ಮಾಡಲಾಗುತ್ತಿರುವ ಹೈಡ್ರೋ ಕಾರ್ಬನ್ ಗಳ ಬೆಲೆ ನಿಗದಿಗೆ ಹೊಸ ನಿಯಮ ಜಾರಿಗೆ ಬರಲಿದೆ ಎಂದು ಕೆಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿಕೆ ನೀಡಿದ್ದಾರೆ.
ಧರ್ಮೇಂದ್ರ ಪ್ರಧಾನ್
ಧರ್ಮೇಂದ್ರ ಪ್ರಧಾನ್

ನವದೆಹಲಿ: ವಿವಿಧ ಕ್ಷೇತ್ರಗಳಲ್ಲಿ ಉತ್ಪಾದನೆ ಮಾಡಲಾಗುತ್ತಿರುವ ಹೈಡ್ರೋ ಕಾರ್ಬನ್ ಗಳ ಬೆಲೆ ನಿಗದಿಗೆ ಹೊಸ ನಿಯಮ ಜಾರಿಗೆ ಬರಲಿದೆ ಎಂದು ಕೆಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿಕೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಧರ್ಮೇಂದ್ರ ಪ್ರಧಾನ್,  ಸುಮಾರು 180,000 ಕೋಟಿ ರೂ  ಮೌಲ್ಯದ ತೈಲ ನಿಕ್ಷೇಪಗಳನ್ನು ಹೊರತೆಗೆಯಲು ಅಗತ್ಯವಿರುವ ಕ್ರಮ ಕೈಗೊಳ್ಳಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ತೈಲ ನಿಕ್ಷೇಪಗಳನ್ನು ಹೊರತೆಗೆಯಲು, ಉತ್ಪಾದನೆಯನ್ನು ಉತ್ತೇಜಿಸುವುದಕ್ಕಾಗಿ  ವಿವಿಧ ಕ್ಷೇತ್ರಗಳಲ್ಲಿ ಪತ್ತೆಯಾಗುತ್ತಿರುವ ಹಾಗೂ ಉತ್ಪಾದನೆ ಮಾಡಲಾಗುತ್ತಿರುವ  ಹೈಡ್ರೋ ಕಾರ್ಬನ್ ಗಳ ಬೆಲೆ ನಿಗದಿಗೆ ಹೊಸ ನಿಯಮಗಳನ್ನು ರೂಪಿಸಲಾಗುವುದು ಎಂದು ತಿಳಿಸಿದ್ದಾರೆ.
ಆದಾಯ-ಹಂಚಿಕೆಯ ಮಾದರಿಯನ್ನೊಳಗೊಂಡ ಹೊಸ ತೈಲ ಮತ್ತು ಅನಿಲ ಪರಿಶೋಧನೆ ನೀತಿಗೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಅತಿ ಹೆಚ್ಚು ಆಳವಿರುವ ನೀರಿನ ಪ್ರದೇಶ,  ಹೆಚ್ಚಿನ ಒತ್ತಡ ಹೆಚ್ಚಿನ ಉಷ್ಣಾಂಶ ಪ್ರದೇಶಗಳನ್ನು ತೈಲನಿಕ್ಷೇಪ ಮಾಡುವ ಕಠಿಣ ಪ್ರದೇಶಗಳು ಎಂದು ಗುರುತಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com