ಋಣಾತ್ಮಕ ವಲಯದಲ್ಲೇ ಮುಂದುವರೆದ ಹಣದುಬ್ಬರ (-) ೦.91 ಕ್ಕೆ ಇಳಿಕೆ

ಋಣಾತ್ಮಕ ವಲಯದಲ್ಲೇ ಮುಂದುವರೆದಿರುವ ಸಗಟು ದರ ಆಧಾರಿತ ಹಣದುಬ್ಬರ ಫೆಬ್ರವರಿಯಲ್ಲಿ ಶೇ.(-) ೦.91 ರಷ್ಟು ಇಳಿಕೆಯಾಗಿದೆ.
ಹಣದುಬ್ಬರ (-) ೦.91 ರಷ್ಟು ಇಳಿಕೆ
ಹಣದುಬ್ಬರ (-) ೦.91 ರಷ್ಟು ಇಳಿಕೆ
Updated on

ನವದೆಹಲಿ: ಋಣಾತ್ಮಕ ವಲಯದಲ್ಲೇ ಮುಂದುವರೆದಿರುವ ಸಗಟು ದರ ಆಧಾರಿತ ಹಣದುಬ್ಬರ ಫೆಬ್ರವರಿಯಲ್ಲಿ ಶೇ.(-) ೦.91 ಕ್ಕೆ ಇಳಿಕೆಯಾಗಿದೆ.

ಆಹಾರ ಪದಾರ್ಥಗಳು ಪ್ರಮುಖವಾಗಿ ತರಕಾರಿ ಹಾಗೂ ದ್ವಿದಳ ಧಾನ್ಯಗಳ ಬೆಲೆ ಗಣನೀಯ ಪ್ರಮಾನದಲ್ಲಿ ಇಳಿಕೆಯಾಗಿರುವುದರಿಂದ ಸಗಟು ದರ ಆಧಾರಿತ ಹಣದುಬ್ಬರ ಇಳಿಕೆಯಾಗಿದೆ. ಜನವರಿಯಲ್ಲಿ ಹಣದುಬ್ಬರ ಶೇ.(-)೦.91 ರಷ್ಟಿದ್ದರೆ, ಕಳೆದ ವರ್ಷ ಫೆಬ್ರವರಿಯಲ್ಲಿ ಶೇ.(-) 2 .17 ನಷ್ಟಿತ್ತು.   

2014 ರ ನವೆಂಬರ್ ನಿಂದ ಸತತ 16 ನೇ ತಿಂಗಳಲ್ಲೂ ಹಣದುಬ್ಬರ ಇಳಿಕೆಯಾಗಿದೆ. ಪ್ರಸಕ್ತ ಸಾಲಿನ ಜನವರಿಯಲ್ಲಿ ಶೇ.6 .02 ರಷ್ಟಿದ್ದ ಆಹಾರ ಪದಾರ್ಥಗಳ ಹಣದುಬ್ಬರ ಫೆಬ್ರವರಿ ತಿಂಗಳಲ್ಲಿ ಶೇ.3 .35 ರಷ್ಟಾಗಿದೆ. ಇನ್ನು ತರಕಾರಿ ಹಣದುಬ್ಬರ ಶೇ. (-)3 .34 , ಹಣ್ಣು ಶೇ.(-)1 .95 ರಷ್ಟಾಗಿದೆ. ಇಂಧನ ಹಾಗೂ ವಿದ್ಯುತ್ ಕ್ಷೇತ್ರಗಳ ಹಣದುಬ್ಬರ ಶೇ. (-) 6 .40 , ತಯಾರಿಸಲ್ಪಟ್ಟ ಉತ್ಪನ್ನಗಳ ಹಣದುಬ್ಬರ (-)0 .58 ನಷ್ಟಾಗಿದೆ ಎಂದು ಮಾ.14 ರಂದು ಬಿಡುಗಡೆಯಾಗಿರುವ ಅಧಿಕೃತ ಅಂಕಿಅಂಶಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com