ಷೇರು ಮಾರುಕಟ್ಟೆ ಸೂಚ್ಯಂಕ 332 ಅಂಕ ಜಿಗಿತ

ಷೇರು ಮಾರುಕಟ್ಟೆಯ ವಾರದ ಆರಂಭದ ದಿನದ ವಹಿವಾಟು ಮುಕ್ತಾಯಕ್ಕೆ ಸಂವೇದಿ ಸೂಚ್ಯಂಕ 332.63 ಅಂಕಗಳಷ್ಟು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಷೇರು ಮಾರುಕಟ್ಟೆಯ ವಾರದ ಆರಂಭದ ದಿನದ ವಹಿವಾಟು ಮುಕ್ತಾಯಕ್ಕೆ ಸಂವೇದಿ ಸೂಚ್ಯಂಕ 332.63 ಅಂಕಗಳಷ್ಟು ಏರಿಕೆ ಕಂಡು ಬಂದು 25 ಸಾವಿರದ 285.37ರಲ್ಲಿ ಮುಕ್ತಾಯಗೊಂಡಿತು. ಇನ್ನು ರಾಷ್ಟ್ರೀಯ ಷೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 99.90 ಅಂಕಗಳಷ್ಟು ಏರಿಕೆ ಕಂಡುಬಂದು 7 ಸಾವಿರದ 704.25ರಲ್ಲಿ ಇಂದಿನ ವಹಿವಾಟನ್ನು ಕೊನೆಗೊಳಿಸಿದೆ.

ಇದೇ 24ರಂದು ಹೋಳಿಹಬ್ಬ, 25ರಂದು ಗುಡ್ ಫ್ರೈಡೆ, ನಂತರ ಶನಿವಾರ ಹೀಗೆ ಮೂರು ದಿನ ಸತತವಾಗಿ ರಜೆ ಇರುವುದರಿಂದ ಈ ವಾರದಲ್ಲಿ ಮೂರು ದಿನ ಮಾತ್ರ ಷೇರುಪೇಟೆ ವ್ಯವಹಾರ ನಡೆಯಲಿದೆ.

ವಿದೇಶೀ ಬಂಡವಾಳದ ಒಳ ಹರಿವು ಹೆಚ್ಚಿರುವುದು ಮತ್ತು ಏಷ್ಯಾ ಮಾರುಕಟ್ಟೆಯಲ್ಲಿ ಸ್ಥಿರತೆಯ ಪ್ರವೃತ್ತಿ ಕಂಡುಬಂದಿರುವುದು ಮುಂಬಯಿ ಷೇರು ಪೇಟೆಯ ಏರಿಕೆಗೆ ಕಾರಣವೆಂದು ವಿಶ್ಲೇಷಕರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com