ಸಹರಾ ಆಸ್ತಿ ಮಾರಾಟ ಮಾಡಲು ಸೆಬಿಗೆ ಸುಪ್ರೀಂ ಕೋರ್ಟ್ ಅನುಮತಿ

ಸಹರಾ ಸಮೂಹ ಸಂಸ್ಥೆಯ ಆಸ್ತಿ ಮಾರಾಟ ಮಾಡಲು ಭಾರತೀಯ ಷೇರು ಮಾರುಕಟ್ಟೆ ನಿಯಂತ್ರಣ ಮಂಡಳಿ(ಸೆಬಿ)ಗೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಸಹರಾ ಸಮೂಹ ಸಂಸ್ಥೆಯ ಆಸ್ತಿ ಮಾರಾಟ ಮಾಡಲು ಭಾರತೀಯ ಷೇರು ಮಾರುಕಟ್ಟೆ ನಿಯಂತ್ರಣ ಮಂಡಳಿ(ಸೆಬಿ)ಗೆ ಸುಪ್ರೀಂಕೋರ್ಟ್‌ ಮಂಗಳವಾರ ಒಪ್ಪಿಗೆ ನೀಡಿದೆ.
ಸಹರಾ ಕಂಪನಿ ತನ್ನ ಹೂಡಿಕೆದಾರರಿಗೆ 24 ಸಾವಿರ ಕೋಟಿ ರೂ.ಗಳನ್ನು ನೀಡಬೇಕಾಗಿದ್ದು, ಹಣ ನೀಡದೆ ಸಹರಾ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದೆ ಎಂಬ ಕಾರಣಕ್ಕೆ ಸೆಬಿ ಸುಪ್ರೀಂ ಕೋರ್ಟ್‌ ಮೊರೆಹೋಗಿತ್ತು. ವಿಚಾರಣೆ ನಡೆಸಿದ ಕೋರ್ಟ್ ಸಹರಾ ಆಸ್ತಿ ಮಾರಾಟಕ್ಕೆ ಅನುಮತಿ ನೀಡಿದೆ.
ಈ ಹಿಂದೆ ಸಹರಾ ಸಮೂಹ ಸಂಸ್ಥೆಗೆ ಸೇರಿದ ಎರಡು ಕಂಪೆನಿಗಳ ಆಸ್ತಿಪಾಸ್ತಿಗಳನ್ನು ಹಾಗೂ ಷೇರುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸೆಬಿಗೆ ಮುಕ್ತ ಅವಕಾಶ ನೀಡಿದ್ದ ಸುಪ್ರೀಂ ಕೋರ್ಟ್, ಈಗ ಅವುಗಳನ್ನು ಮಾರಾಟ ಮಾಡಲು ಅವಕಾಶ ನೀಡಿದೆ.
ಹೂಡಿಕೆದಾರರಿಗೆ 24 ಸಾವಿರ ಕೋಟಿಯನ್ನು ಹಿಂದಿರುಗಿಸುವಂತೆ ಸಹರಾ ಗ್ರೂಪ್ಸ್‌ಗೆ ಕೋರ್ಟ್ ಆದೇಶಿಸಿತ್ತು ಮತ್ತು ಹಣ ಹಿಂದಿರುಗಿಸಲು ಎರಡು ತಿಂಗಳ ಕಾಲಾವಕಾಶ ನೀಡಿತ್ತು. ಆದರೆ ನ್ಯಾಯಾಲಯದ ಆದೇಶ ಪೂರೈಸಲು ಸಹರಾ ಸೋತಿರುವ ಕಾರಣ, ಸುಪ್ರೀಂ ಕೋರ್ಟ್‌ ಆಸ್ತಿ ಪಾಸ್ತಿ ಮಾರಾಟ ಮಾಡಲು ಸೆಬಿಗೆ ಅವಕಾಶ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com