ಗ್ರಾಹಕರಿಂದ 77 ಸಾವಿರ ಬಲೆನೊ ಡೀಸೆಲ್ ಕಾರುಗಳನ್ನು ಹಿಂಪಡೆಯಲಿರುವ ಮಾರುತಿ

ಭಾರತದ ಮುಂಚೂಣಿ ಕಾರು ತಯಾರಿಕಾ ಕಂಪೆನಿ ಮಾರುತಿ ಸುಜುಕಿ ಏರ್ ಬ್ಯಾಗ್ ಕಂಟ್ರೋಲರ್ ಸಾಫ್ಟ್ ವೇರ್ ನ್ನು ಮೇಲ್ದರ್ಜೆಗೇರಿಸಲು...
ಡೆಕೋ ಕಾರು
ಡೆಕೋ ಕಾರು

ನವದೆಹಲಿ: ಭಾರತದ ಮುಂಚೂಣಿ ಕಾರು ತಯಾರಿಕಾ ಕಂಪೆನಿ ಮಾರುತಿ ಸುಜುಕಿ ಏರ್ ಬ್ಯಾಗ್ ಕಂಟ್ರೋಲರ್ ಸಾಫ್ಟ್ ವೇರ್ ನ್ನು ಮೇಲ್ದರ್ಜೆಗೇರಿಸಲು ಮತ್ತು ದೋಷಪೂರಿತ ಇಂಧನ ಫಿಲ್ಟರ್ ನ್ನು ಬದಲಾಯಿಸಲು 77 ಸಾವಿರದ 380 ಕಾರುಗಳನ್ನು ಮಾರುಕಟ್ಟೆಯಿಂದ ವಾಪಸ್ ಪಡೆದುಕೊಳ್ಳಲಿದೆ.

ಈ ಕುರಿತು ಶುಕ್ರವಾರ ಕಂಪೆನಿ ಪ್ರಕಟಣೆ ಹೊರಡಿಸಿದೆ. ಜಪಾನ್ ಮೂಲದ ಸುಜುಕಿ ಮೋಟಾರ್ ಕಾರ್ಪ್ ಒಡೆತನದ ಮಾರುತಿ ಕಂಪೆನಿ 75 ಸಾವಿರದ 419 ಬಲೆನೋ ಕಾರುಗಳನ್ನು ಮಾರುಕಟ್ಟೆಯಿಂದ ಹಿಂತೆಗೆದುಕೊಳ್ಳಲಿದ್ದು, ಅವುಗಳಲ್ಲಿ 17 ಸಾವಿರದ 231 ರಫ್ತು ಘಟಕಗಳು ಕೂಡ ಸೇರಿಕೊಂಡಿವೆ. ಕಳೆದ ವರ್ಷ ಆಗಸ್ಟ್ 3ರಿಂದ ಈ ವರ್ಷ ಮೇ 17ರವರೆಗೆ ಉತ್ಪಾದನೆಗೊಂಡ ಕಾರುಗಳನ್ನು ಏರ್ ಬ್ಯಾಗ್ ಕಂಟ್ರೋಲರ್ ಸಾಫ್ಟ್ ವೇರ್ ಗೆ ಮೇಲ್ದರ್ಜೆಗೇರಿಸಲಾಗುತ್ತದೆ.

ಇವುಗಳಲ್ಲಿ ಕಳೆದ ವರ್ಷ ಆಗಸ್ಟ್ 3ರಿಂದ ಈ ವರ್ಷ ಮಾರ್ಚ್ 22ರವರೆಗೆ ತಯಾರಾದ 15 ಸಾವಿರದ 995 ಬಲೆನೋ ಡೀಸೆಲ್ ಕಾರುಗಳನ್ನು ದೋಷಪೂರಿತ ಇಂಧನ ಫಿಲ್ಟರ್ ತಪಾಸಣೆ ನಡೆಸಿ ಬದಲಾಯಿಸಲಾಗುತ್ತದೆ.

ಮಾರುತಿ ಸುಜುಕಿ, ಸ್ವಯಂ ಶಿಫ್ಟ್ ಗೇರ್ ತಂತ್ರಜ್ಞಾನವನ್ನು ಹೊಂದಿರುವ ಸಾವಿರದ 961 ಡಿಜೈರ್ ಡೀಸಲ್ ಹ್ಯಾಚ್ಬ್ಯಾಕ್ ಕಾರುಗಳನ್ನು ಬದಲಾಯಿಸಲಿದ್ದು, ದೋಷಪೂರಿತ ಇಂಧನ ಫಿಲ್ಟರ್ ನ್ನು ತಪಾಸಣೆ ಮಾಡಿ ಬದಲಾಯಿಸಲಿದೆ ಎಂದು ಕಂಪೆನಿ ಪ್ರಕಟಣೆಯಲ್ಲಿ ತಿಳಿಸಿದೆ. ವಿತರಕರು ಈ ಸಂಬಂಧ ಇದೇ 31ರಿಂದ ಗ್ರಾಹಕರನ್ನು ಸಂಪರ್ಕಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com