ಭಾರತೀಯ ಅಂಚೆ ಇಲಾಖೆಯಿಂದ ಪೇಮೆಂಟ್ ಬ್ಯಾಂಕ್

ಭಾರತೀಯ ಅಂಚೆ ಕಚೇರಿಯ ಸೇವೆಯನ್ನು ಇನ್ನಷ್ಟು ವಿಸ್ತರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಮುಂದಿನ ವರ್ಷದಿಂದ ನಿಮ್ಮ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಭಾರತೀಯ ಅಂಚೆ ಕಚೇರಿಯ ಸೇವೆಯನ್ನು ಇನ್ನಷ್ಟು ವಿಸ್ತರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಮುಂದಿನ ವರ್ಷದಿಂದ ನಿಮ್ಮ ಮನೆಯ ಹತ್ತಿರದಲ್ಲಿರುವ ಅಂಚೆ ಕಚೇರಿಗಳು ಬ್ಯಾಂಕ್ ಗಳ ಮಾದರಿಯಲ್ಲಿ ಕಾರ್ಯ ನಿರ್ವಹಿಸಲಿದೆ. ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ದೇಶಾದ್ಯಂತ 800 ಕೋಟಿ ರೂಪಾಯಿ ಬಂಡವಾಳದೊಂದಿಗೆ 650 ಕೋಟಿ ರೂಪಾಯಿ ವೆಚ್ಚದಲ್ಲಿ ಮುಂದಿನ ವರ್ಷ ಮಾರ್ಚ್ ತಿಂಗಳಿನಿಂದ ಕಾರ್ಯಾರಂಭ ಮಾಡಲಿದೆ.
ಭಾರತೀಯ ಅಂಚೆ ವಿಭಾಗದಲ್ಲಿ ಮುಂದಿನ ವರ್ಷ ಮಾರ್ಚ್ ನಿಂದ ಪೇಮೆಂಟ್ ಬ್ಯಾಂಕ್ ನ್ನು ಆರಂಭಿಸಲಾಗುವುದು. ಇದು ಅಂಚೆ ಕಚೇರಿಯ ಸ್ಥಿತಿಗತಿಯನ್ನೇ ಬದಲಾಯಿಸಲಿದೆ.
 
ದೇಶದಲ್ಲಿ ಪ್ರಸ್ತುತ 1.54 ಲಕ್ಷ ಅಂಚೆ ಕಚೇರಿಗಳಿವೆ. ವಿಶ್ವದಲ್ಲಿಯೇ ನಮ್ಮ ಸಂಪರ್ಕಜಾಲ ಬೃಹತ್ತಾಗಿದೆ. ಅದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕಿಂತಲೂ ಹೆಚ್ಚು ಎಂದು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ ಪ್ರಸಾದ್ ತಿಳಿಸಿದ್ದಾರೆ.

ಕೋರ್ ಬ್ಯಾಂಕಿಂಗ್ ವ್ಯವಸ್ಥೆಯಡಿ ಭಾರತೀಯ ಅಂಚೆ ಕಚೇರಿ ವಿಶಾಲ ಸಂಪರ್ಕಜಾಲವನ್ನು ಹೊಂದಿದೆ. ಅದು ಈಗ 250ರಿಂದ 22 ಸಾವಿರಕ್ಕೆ ಏರಿಕೆಯಾಗಿದೆ.ಗ್ರಾಮೀಣ ಭಾಗಗಳಲ್ಲಿರುವ ಅಂಚೆ ಕಚೇರಿಗಳನ್ನು ಮುಖ್ಯವಾಗಿ ಗಮದಲ್ಲಿಟ್ಟುಕೊಳ್ಳಲಾಗುವುದು. ಮೊದಲ ಹಂತದಲ್ಲಿ 650 ಪೇಮೆಂಟ್ ಬ್ಯಾಂಕು ಶಾಖೆಗಳನ್ನು ಸ್ಥಾಪಿಸಲಾಗುವುದು. ಇದಕ್ಕೆ ಸಂಬಂಧಪಟ್ಟ ಕೆಲಸಗಳು ಸೆಪ್ಟೆಂಬರ್ ಗೆ ಮುಗಿಯಬೇಕು ಎಂದು ಪ್ರಧಾನ ಮಂತ್ರಿ ಸೂಚಿಸಿದ್ದಾರೆ ಎಂದು ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದರು.

ಅಲ್ಲದೆ ಅಂಚೆ ಕಚೇರಿಯ ಕೆಲಸ ಕಾರ್ಯಗಳನ್ನು, ಕಚೇರಿ ಸಿಬ್ಬಂದಿಗಳು, ಪೋಸ್ಟ್ ಮ್ಯಾನ್ ನ ಕಾರ್ಯಶೈಲಿಯನ್ನು ಮೇಲ್ದರ್ಜೆಗೇರಿಸಲು ಸರ್ಕಾರ ಮುಂದಾಗಿದೆ. ಪೋಸ್ಟ್ ಮ್ಯಾನ್ ಗೆ ಸಹ ಸ್ಮಾರ್ಟ್ ಫೋನ್, ಟ್ಯಾಬ್ ನೀಡಲಾಗುತ್ತದೆ.

ಮೊದಲ ಹಂತದಲ್ಲಿ ಸರ್ಕಾರ 400 ಕೋಟಿ ಇಕ್ವಿಟಿ ಮತ್ತು ಅನುದಾನವನ್ನು ಬಿಡುಗಡೆ ಮಾಡಿದೆ. ಪೇಮೆಂಟ್ ಬ್ಯಾಂಕುಗಳನ್ನು ಜನಪ್ರಿಯಗೊಳಿಸಲು ಇಲಾಖೆ ದೇಶಾದ್ಯಂತ 5 ಸಾವಿರ ಎಟಿಎಂಗಳನ್ನು ಸ್ಥಾಪಿಸಲಿದೆ. 3ನೇ ವ್ಯಕ್ತಿಯ ವಿಮೆ ಮತ್ತು ಇತರ ಸೇವೆಗಳನ್ನು ಸಹ ನೀಡಲಿದೆ.

ಪೇಮೆಂಟ್ ಬ್ಯಾಂಕುಗಳ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ವೇತನ ನೀಡಿಕೆ, ನಗರಪಾಲಿಕೆಗಳಿಗೆ, ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಕಟ್ಟುವ ಶುಲ್ಕವನ್ನು ಪೇಮೆಂಟ್ ಬ್ಯಾಂಕುಗಳಲ್ಲಿ ಕಟ್ಟುವ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com