
ನವದೆಹಲಿ: ಟಾಟಾ ಮತ್ತು ಸೈರಸ್ ಮಿಸ್ತ್ರಿ ಅವರ ನಡುವಿನ ವೈಷಮ್ಯ ಷೇರು ಮೌಲ್ಯಮಾಪನದ ಮೇಲೆ ವ್ಯತಿರಿಕ್ತ ಪರಿಣಾ ಬೀರುತ್ತಿದೆ. ಹೀಗಾಗಿ ಕೂಡವೇ ಇಬ್ಬರ ನಡುವಿನ ವೈರತ್ವವನ್ನು ಬಗೆಹರಿಸಿಕೊಳ್ಳಬೇಕು ಎಂದು ವಿದೇಶಿ ಹೂಡಿಕೆದಾರರು ಸಲಹೆ ನೀಡಿದ್ದಾರೆ.
ಅಲ್ಪಸಂಖ್ಯಾತ ಶೇರು ಹೂಡಿಕೆದಾರರ ಬಗ್ಗೆ ಗಮನ ಹರಿಸುವಂತೆ ಟಾಟಾ ಕಂಪನಿ ತಿಳಿಸಲು ವಿದೇಶಿ ಹೂಡಿಕೆದಾರರು ಸೆಬಿಗೆ ಮನವಿ ಮಾಡಿದ್ದಾರೆ. ಟಾಟಾ ಗ್ರೂಪ್ ನ ಕಂಪನಿಗಳಾದ ಸಾಫ್ಟ್ ವೇರ್ ಬೆಲ್ ವೆದರ್ - ಟಿಸಿಎಸ್ ಸೇರಿದಂತೆ ಸುಮಾರು 12ಕ್ಕೂ ಹೆಚ್ಚು ಕಂಪನಿಗಳಲ್ಲಿ ವಿದೇಶಿ ಹೂಡಿಕೆದಾರರು ತಮ್ಮ ಬಂಡವಾಳ ಹೂಡಿದ್ದಾರೆ. ರತನ್ ಟಾಟಾ ಮಿಸ್ತ್ರಿ ಅವರನ್ನು ತಮ್ಮ ಕಂಪನಿಯಿಂದ ತೆಗೆದು ಹಾಕಿದ ನಂತರ, ಮಾರುಕಟ್ಟೆ ಮೌಲ್ಯ ಕುಸಿದಿದೆ ಎಂದು ವಿದೇಶಿ ಹೂಡಿಕೆದಾರರು ಹೇಳಿದ್ದಾರೆ.
ಟಾಟಾ ಕಂಪನಿಯಲ್ಲಿ ನಡೆಯುತ್ತಿರುವ ಒಳಜಗಳದಿಂದ ಎಚ್ಚೆತ್ತುಕೊಳ್ಳಲು ಸೆಬಿ ಗೆ ವಿದೇಶಿ ಬಂಡವಾಳ ಹೂಡಿಕೆದಾರರು ಮನವಿ ಮಾಡಿದ್ದಾರೆ. ಟಾಟಾ ಕಂಪನಿ ಅಲ್ಪ ಸಂಖ್ಯಾತ ಶೇರು ಹೂಡಿಕೆದಾರರ ಭವಿಷ್ಯದ ಬಗ್ಗೆ ಪ್ರಾಮುಖ್ಯತೆ ನೀಡಬೇಕು, ಕಂಪನಿಯ ಮುಖ್ಯಸ್ಥರ ನಡುವಿನ ಒಳಜಗಳವನ್ನು ಶೀಘ್ರವೇ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
Advertisement