500 ಮತ್ತು 2 ಸಾವಿರ  ರೂಪಾಯಿ ಮುಖಬೆಲೆಯ ಹೊಸ ನೋಟುಗಳನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದ ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಹಣಕಾಸು ಕಾರ್ಯದರ್ಶಿ ಶಶಿಕಾಂತ್ ದಾಸ್ ಅವರೊಂದಿ
500 ಮತ್ತು 2 ಸಾವಿರ ರೂಪಾಯಿ ಮುಖಬೆಲೆಯ ಹೊಸ ನೋಟುಗಳನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದ ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಹಣಕಾಸು ಕಾರ್ಯದರ್ಶಿ ಶಶಿಕಾಂತ್ ದಾಸ್ ಅವರೊಂದಿ

500-1000 ನೋಟುಗಳ ಚಲಾವಣೆ ಬಂದ್; ಜನರ ಸಂದೇಹಗಳಿಗೆ ರಿಸರ್ವ್ ಬ್ಯಾಂಕ್ ಉತ್ತರ

500 ಮತ್ತು 1000 ಮುಖಬೆಲೆ ಹೊಂದಿರುವ ನಕಲಿ ಭಾರತೀಯ ಕರೆನ್ಸಿ ನೋಟುಗಳ ಹಾವಳಿ ಇತ್ತೀಚಿನ ದಿನಗಳಲ್ಲಿ...
500 ಮತ್ತು 1000 ಮುಖಬೆಲೆ ಹೊಂದಿರುವ ನಕಲಿ ಭಾರತೀಯ ಕರೆನ್ಸಿ ನೋಟುಗಳ ಹಾವಳಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ನಕಲಿ ನೋಟುಗಳನ್ನು ಹೆಚ್ಚಾಗಿ ಭಯೋತ್ಪಾದಕರು ಕಪ್ಪು ಹಣ ಸಂಗ್ರಹಣೆಗೆ ಬಳಸಿಕೊಳ್ಳುತ್ತಾರೆ. ಭಾರತದ ಆರ್ಥಿಕತೆ ನಗದು ವಹಿವಾಟಿನ ಮೇಲೆ ನಿಂತಿದ್ದು ನಕಲಿ ನೋಟುಗಳ ಚಲಾವಣೆ ಒಂದು ಹಾವಳಿಯಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಇದಕ್ಕೆ ತಡೆಯೊಡ್ಡಲು ಕೇಂದ್ರ ಸರ್ಕಾರ 500 ಮತ್ತು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ಚಲಾವಣೆಯನ್ನು ಕಳೆದ ಮಧ್ಯರಾತ್ರಿಯಿಂದಲೇ ನಿಲ್ಲಿಸಿದ್ದು ಹೊಸ 2 ಸಾವಿರ ರೂಪಾಯಿ ಮುಖಬೆಲೆಯ ನೋಟು ಚಲಾವಣೆಗೆ ಬರಲಿದೆ ಎಂದು ಘೋಷಿಸಿದೆ.
ಹಾಗಾದರೆ ಮುಂದಿನ ವಹಿವಾಟು ಹೇಗೆ, ನೋಟುಗಳನ್ನು ಏನು ಮಾಡಬೇಕು, ಎಲ್ಲಿ ಕೊಡಬೇಕು ಹೀಗೆ ಹತ್ತಾರು ಪ್ರಶ್ನೆಗಳು ಸಾರ್ವಜನಿಕರನ್ನು ಕಾಡುತ್ತಿದೆ. ಈ ಸಂದೇಹಗಳಿಗೆ ರಿಸರ್ವ್ ಬ್ಯಾಂಕಿನ ಉತ್ತರ ಇಲ್ಲಿದೆ.
-ರಿಸರ್ವ್ ಬ್ಯಾಂಕಿನ 19 ಕಚೇರಿಗಳಲ್ಲಿ ಈ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು, ಇಲ್ಲವೇ ಯಾವುದೇ ಬ್ಯಾಂಕುಗಳಲ್ಲಿ, ಪೋಸ್ಟ್ ಆಫೀಸುಗಳಲ್ಲಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು.
ಎಷ್ಟು ಬೆಲೆಯಿರುತ್ತದೆ?: ನೀವು ಬ್ಯಾಂಕು ಅಥವಾ ಪೋಸ್ಟ್ ಆಫೀಸಿಗೆ ನೀಡಿದ ನೋಟಿನ ಮೊತ್ತದಷ್ಟೇ ಚಿಲ್ಲರೆ ಹಣ ನಿಮಗೆ ವಾಪಸ್ ಸಿಗಲಿದೆ.
ಎಲ್ಲವೂ ನಗದು ರೂಪದಲ್ಲಿ ಸಿಗುತ್ತದೆಯೇ?: ಇಲ್ಲ, ಒಬ್ಬ ವ್ಯಕ್ತಿಗೆ 4 ಸಾವಿರ ರೂಪಾಯಿಗಳಷ್ಟು ನಗದು ರೂಪದಲ್ಲಿ ನೀವು ಕೊಟ್ಟ ಹಣಕ್ಕೆ ಬ್ಯಾಂಕ್ ನೀಡುತ್ತದೆ. ಅದಕ್ಕಿಂತ ಹೆಚ್ಚು ಹಣವನ್ನು ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ.
ನಿಮ್ಮಲ್ಲಿರುವ 1000, 500 ರೂಪಾಯಿ ಮುಖಬೆಲೆಯ ಹಣವನ್ನೆಲ್ಲಾ ಕೊಟ್ಟರೆ ಕೇವಲ 4 ಸಾವಿರ ರೂಪಾಯಿ ಸಿಗುವುದೇಕೆ?
ಯೋಜನೆಯ ಉದ್ದೇಶ ನಿಯಮವೇ ಹಾಗಿದೆ.
4 ಸಾವಿರ ರೂಪಾಯಿ ನಿಮ್ಮ ವಹಿವಾಟಿಗೆ ಸಾಕಾಗುವುದಿಲ್ಲ ಎಂದಿಟ್ಟುಕೊಳ್ಳಿ, ಆಗ ಏನು ಮಾಡಬೇಕು?
ನಿಮಗೆ ತುರ್ತಾಗಿ 4 ಸಾವಿರಕ್ಕಿಂತ ಹೆಚ್ಚು ಹಣ ಬೇಕೆಂದುಕೊಳ್ಳಿ. ಆಗ ನಿಮ್ಮ ಖಾತೆಯಲ್ಲಿರುವ ಹಣ ನೋಡಿಕೊಂಡು ಇಂಟರ್ನೆಟ್ ಬ್ಯಾಂಕಿಂಗ್, ಇಸಿಎಸ್,ಚೆಕ್, ಮೊಬೈಲ್ ವ್ಯಾಲೆಟ್ಸ್, ಐಎಮ್ ಪಿಎಸ್, ಕ್ರೆಡಿಟ್/ಡೆಬಿಟ್ ಕಾರ್ಡುಗಳ ಮೂಲಕ ವ್ಯವಹರಿಸಬೇಕಾಗುತ್ತದೆ. 
ನಿಮ್ಮ ಬಳಿ ಬ್ಯಾಂಕ್ ಖಾತೆಯಿಲ್ಲದಿದ್ದರೆ ಏನು ಮಾಡಬೇಕು?
-ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗಿ ನಿಮ್ಮ ಹತ್ತಿರದ ಬ್ಯಾಂಕುಗಳಲ್ಲಿ ಬ್ಯಾಂಕ್ ಖಾತೆಯನ್ನು ತೆರೆಯಬೇಕಾಗುತ್ತದೆ.
ಜನ-ಧನ ಯೋಜನೆ ಖಾತೆ ಮಾತ್ರ ಇದ್ದವರು ಏನು ಮಾಡಬೇಕು?
- ನಿಯಮ, ಸೂಚನೆ ಪ್ರಕಾರ ಜನ ಧನ ಯೋಜನೆ ಖಾತೆದಾರರು ವಿನಿಮಯ ಸೌಲಭ್ಯವನ್ನು ಬ್ಯಾಂಕಿನ ನಿಯಮಗಳ ಪ್ರಕಾರ ಪಡೆದುಕೊಳ್ಳಬೇಕಾಗುತ್ತದೆ.
ಹೆಚ್ಚಿನ ಮುಖಬೆಲೆಯ ನೋಟುಗಳನ್ನು ಎಲ್ಲಿ ವಿನಿಮಯ ಮಾಡಿಕೊಳ್ಳಬೇಕು?
-ರಿಸರ್ವ್ ಬ್ಯಾಂಕಿನ ಎಲ್ಲಾ ಕಚೇರಿಗಳು, ವಾಣಿಜ್ಯ/ ಸ್ಥಳೀಯ ಗ್ರಾಮೀಣ ಬ್ಯಾಂಕುಗಳು/ನಗರ ಸಹಕಾರಿ ಬ್ಯಾಂಕುಗಳು/ ರಾಜ್ಯ ಸಹಕಾರಿ ಬ್ಯಾಂಕುಗಳು ಅಥವಾ ಯಾವುದೇ ಕೇಂದ್ರ ಪೋಸ್ಟ್ ಆಫೀಸು, ಉಪ ಪೋಸ್ಟ್ ಆಫೀಸುಗಳಿಗೆ ಹೋಗಿ ನೀವು ನೋಟು ವಿನಿಮಯ ಮಾಡಿಕೊಳ್ಳಬಹುದು.
ನೀವು ಖಾತೆ ಹೊಂದಿರುವ ಬ್ಯಾಂಕುಗಳಿಗೆ ಹೋಗಿಯೇ ನೋಟು ವಿನಿಮಯ ಮಾಡಿಕೊಳ್ಳಬೇಕೆ?
-4 ಸಾವಿರ ರೂಪಾಯಿಗಳವರೆಗೆ ನೋಟು ವಿನಿಮಯ ಮಾಡಿಕೊಳ್ಳಲು ನೀವು ಗುರುತು ಪತ್ರ ಹಿಡಿದುಕೊಂಡು ಯಾವುದೇ ಬ್ಯಾಂಕುಗಳಿಗೆ ಹೋಗಬಹುದು. 4 ಸಾವಿರ ರೂಪಾಯಿಗಳಿಗಿಂತ ಹೆಚ್ಚಾದರೆ ನೀವು ಖಾತೆ ಹೊಂದಿರುವ ಬ್ಯಾಂಕಿಗೆ ಅಥವಾ ಆ ಬ್ಯಾಂಕಿನ ಶಾಖಾ ಕಚೇರಿಗೇ ಹೋಗಬೇಕಾಗುತ್ತದೆ. ಅಲ್ಲಿ ಕೂಡ ನಿಮಗೆ ನಗದು ರೂಪದಲ್ಲಿ ಹಣ ಸಿಗುವುದಿಲ್ಲ. ಒಂದು ವೇಳೆ ಇಸಿಎಸ್ ಮೂಲಕ ಬೇರೆ ಬ್ಯಾಂಕುಗಳಿಂದ ಹಣ ವರ್ಗಾವಣೆ ಮಾಡಿಕೊಳ್ಳಲು ನೀವು ಇಚ್ಛಿಸಿದರೆ ಬೇರೆ ಬ್ಯಾಂಕುಗಳಿಗೆ ನಿಗದಿತ ಗುರುತು ಚೀಟಿಯನ್ನು ಇಟ್ಟುಕೊಂಡು ಹೋಗಬೇಕಾಗುತ್ತದೆ.
ನಿಮ್ಮ ಬ್ಯಾಂಕಿನ ಯಾವುದೇ ಶಾಖೆಗಳಿಗೆ ಹೋಗಿ ನೋಟು ಬದಲಾಯಿಸಿಕೊಳ್ಳಬಹುದೇ?
-ಹೌದು, ಯಾವುದೇ ಬ್ರಾಂಚ್ ಗೆ ಹೋಗಬಹುದು.
ಬೇರೆ ಬ್ಯಾಂಕುಗಳ ಶಾಖೆಗಳಿಗೆ ಹೋಗಬಹುದೇ?
-ಹೌದು, ಆ ಸೌಲಭ್ಯ ಕೂಡ ಇದೆ. ಅಲ್ಲಿಗೆ ಹೋಗುವಾಗ ನಿರ್ದಿಷ್ಟ ಗುರುತು ಚೀಟಿಯನ್ನು ಒಯ್ಯಬೇಕು. 4 ಸಾವಿರಕ್ಕಿಂತ ಜಾಸ್ತಿ ಹಣ ನಿಮಗೆ ಬೇಕೆಂದರೆ ಬ್ಯಾಂಕ್ ಖಾತೆ ವಿವರ ಕೂಡ ಇಂಟರ್ನೆಟ್ ಬ್ಯಾಂಕಿಗೆ ಅಗತ್ಯ.
ನಿಮ್ಮ ಬಳಿ ಖಾತೆಯಿಲ್ಲದೆ ನಿಮ್ಮ ಸಂಬಂಧಿಕರು, ಸ್ನೇಹಿತರ ಬಳಿ ಇದ್ದರೆ ನೋಟು ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗುತ್ತದೆಯೇ?
-ನಿಮ್ಮ ಸ್ನೇಹಿತರು, ಸಂಬಂಧಿಕರು ಬರಹ ರೂಪದಲ್ಲಿ ಅವಕಾಶ ನೀಡಿದರೆ ನೀವು ವಿನಿಮಯ ನಡೆಸಬಹುದು. ವಿನಿಮಯ ಮಾಡಿಕೊಳ್ಳುವಾಗ ಅವರು ಅನುಮತಿ ನೀಡಿದ ಸಾಕ್ಷಿ ಮತ್ತು ನಿಗದಿತ ಗುರುತು ಪತ್ರ ನೀಡಬೇಕು.
-ನೀವು ಖುದ್ದಾಗಿ ಬ್ಯಾಂಕಿಗೆ ಹೋಗಬೇಕೆ ಅಥವಾ ನಿಮ್ಮ ಪ್ರತಿನಿಧಿಗಳನ್ನು ಕಳುಹಿಸಬಹುದೇ?
500-1000 ಮುಖಬೆಲೆಯ ನೋಟು ವಿನಿಮಯ ಮಾಡಿಕೊಳ್ಳಲು ನೀವೇ ಖುದ್ದಾಗಿ ಬ್ಯಾಂಕಿಗೆ ಹೋಗುವುದು ಉತ್ತಮ. ನಿಮಗೆ ಸಾಧ್ಯವಿಲ್ಲದಿದ್ದರೆ ನಿಮ್ಮ ಸಹಿ ಹಾಕಿದ ಬರಹದೊಂದಿಗೆ ಬೇರೆಯವರನ್ನು ಕಳುಹಿಸಬಹುದು. 
-ಎಟಿಎಂನಿಂದ ಹಣ ಪಡೆಯಬಹುದೇ?
 ಎಟಿಎಂಗಳ ಮಾಪನಾಂಕ ಮಾಡಲು ಬ್ಯಾಂಕುಗಳಿಗೆ ಸ್ವಲ್ಪ ಸಮಯ ಹಿಡಿಯಬಹುದು. ನವೆಂಬರ್ 18ರವರೆಗೆ ಒಂದು ಕಾರ್ಡಿನಲ್ಲಿ ದಿನಕ್ಕೆ ಗರಿಷ್ಠ 2 ಸಾವಿರದವರೆಗೆ ಹಣ ಪಡೆಯಬಹುದು.ನವೆಂಬರ್ 19ರಿಂದ ಎಟಿಎಂಗಳಿಂದ ದಿನಕ್ಕೆ 4 ಸಾವಿರ ರೂಪಾಯಿ ಪಡೆಯಬಹುದು.
ಬ್ಯಾಂಕ್ ನಲ್ಲಿ ಚೆಕ್ ಹಾಕಿ ಹಣ ಪಡೆಯಬಹುದೇ?
ಬ್ಯಾಂಕಿನಲ್ಲಿ ವಿತ್ ಡ್ರಾವಲ್ ಸ್ಲಿಪ್ ಅಥವಾ ಸೆಲ್ಫ್ ಚೆಕ್ ಬರೆದು ದಿನಕ್ಕೆ ಗರಿಷ್ಠ 10 ಸಾವಿರ ರೂಪಾಯಿ ನಿಮ್ಮ ಖಾತೆಯಿಂದ ಪಡೆಯಬಹುದು. ಆದರೆ ಎಟಿಎಂನಿಂದ ಹಣ ಪಡೆಯುವುದು, ಬ್ಯಾಂಕಿಗೆ ಹೋಗಿ ಪಡೆಯುವುದು ಎಲ್ಲಾ ಸೇರಿ ವಾರಕ್ಕೆ 20 ಸಾವಿರದವರೆಗೆ ಮಾತ್ರ ಹಣ ಪಡೆಯಲು ಅವಕಾಶವಿದೆ. ಈ ಸೌಲಭ್ಯ ನವೆಂಬರ್ 24ರವರೆಗೆ ಲಭ್ಯವಿದೆ.
ಹೆಚ್ಚಿನ ಮುಖಬೆಲೆಯ ಹಣವನ್ನು ಎಟಿಎಂಗಳು, ಕ್ಯಾಶ್ ಡೆಪಾಸಿಟ್ ಮೆಶಿನ್ ಅಥವಾ ಕ್ಯಾಶ್ ರಿಸೈಕ್ಲರ್ ನಲ್ಲಿ ವಿನಿಮಯ ಮಾಡಿಕೊಳ್ಳಬಹುದೇ?
ಹೌದು, ಹೆಚ್ಚಿನ ಮುಖಬೆಲೆಯ ನೋಟುಗಳನ್ನು ಕ್ಯಾಶ್ ಡೆಪಾಸಿಟ್ ಮೆಶಿನ್/ ಕ್ಯಾಶ್ ರಿಸೈಕ್ಲರ್ ಗಳಲ್ಲಿ ಠೇವಣಿ ಮಾಡಬಹುದು.
ನೋಟು ವಿನಿಮಯ ಮಾಡಿಕೊಳ್ಳಲು ಎಷ್ಟು ಸಮಯವಿದೆ? ಈ ಯೋಜನೆ ಡಿಸೆಂಬರ್ 30ರವರೆಗೆ ಇರುತ್ತದೆ. ಒಂದು ವೇಳೆ ಡಿಸೆಂಬರ್ 30ರ ಒಳಗೆ ಸಾಧ್ಯವಾಗದಿದ್ದರೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಆರ್ ಬಿಐ ನಿಗದಿತ ಕಚೇರಿಗಳಲ್ಲಿ ನೋಟು ವಿನಿಮಯ ಮಾಡಿಕೊಳ್ಳಬಹುದು.
ನಾನೀಗ ಭಾರತದಲ್ಲಿಲ್ಲ, ಏನು ಮಾಡಬೇಕು?
ನೀವು ಬರಹ ರೂಪದಲ್ಲಿ ಸಹಿ ಮಾಡಿ ಗುರುತು ಚೀಟಿ ಮತ್ತು ದಾಖಲೆಗಳನ್ನು ನೀಡಿ ಬೇರೆಯವರ ಮೂಲಕ ಹಣ ವಿನಿಮಯ ಮಾಡಿಕೊಳ್ಳಬಹುದು. 
ಅನಿವಾಸಿ ಭಾರತೀಯನಾಗಿದ್ದು ಭಾರತದಲ್ಲಿ ಬ್ಯಾಂಕ್ ಖಾತೆ ಹೊಂದಿದ್ದರೆ ವಿನಿಮಯ ಹಣವನ್ನು ಆ ಅನಿವಾಸಿ ಭಾರತೀಯನ ಖಾತೆಗೆ ನಗದು ಮಾಡಬಹುದೇ?
ಹಳೆ ನೋಟುಗಳ ವಿನಿಮಯ ಮೊತ್ತವನ್ನು ಅನಿವಾಸಿ ಭಾರತೀಯನ ಖಾತೆಗಳಿಗೆ ಹಾಕಬಹುದು.
ವಿದೇಶಿ ಪ್ರವಾಸಿಗರಾಗಿದ್ದರೆ ಏನು ಮಾಡಬೇಕು?
ಅಧಿಸೂಚನೆ ಹೊರಡಿಸಿದ 72 ಗಂಟೆಗಳ ಮೊದಲು ವಿಮಾನ ನಿಲ್ದಾಣ ವಿನಿಮಯ ಕೇಂದ್ರಗಳಲ್ಲಿ 500 ಮತ್ತು ಸಾವಿರ ರೂಪಾಯಿಗಳಿಗೆ ವಿದೇಶಿ ವಿನಿಮಯ ಹಣವನ್ನು ಪಡೆದುಕೊಳ್ಳಬಹುದು. 
ನಿಮಗೆ ತುರ್ತಾಗಿ ಹಣ ಬೇಕೆಂದಿಟ್ಟುಕೊಳ್ಳಿ, 500, 1000 ನೋಟುಗಳೇ ನಿಮ್ಮ ಬಳಿ ಇವೆ ಆಗ ಏನು ಮಾಡಬೇಕು?
ಕಳೆದ ಮಧ್ಯರಾತ್ರಿಯಿಂದ 72 ಗಂಟೆಗಳೊಳಗಡೆ ಆಸ್ಪತ್ರೆಗಳು, ಸರ್ಕಾರಿ ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣಗಳಲ್ಲಿ ಹಣ ವಿನಿಮಯ ಮಾಡಿಕೊಳ್ಳಬಹುದು.
ಯಾವ ಗುರುತು ಪತ್ರಗಳನ್ನು ನೀಡಬಹುದು?
ಆಧಾರ್ ಕಾರ್ಡ್, ಚಾಲನಾ ಪರವಾನಗಿ ಪತ್ರ, ಪಾಸ್ ಪೋರ್ಟ್, ನರೇಗಾ ಕಾರ್ಡು, ಪಾನ್ ಕಾರ್ಡ್, ಸರ್ಕಾರಿ ಇಲಾಖೆಗಳು ನೀಡಿದ ಗುರುತು ಚೀಟಿ, ಸಾರ್ವಜನಿಕ ವಲಯ ಘಟಕಗಳು ತಮ್ಮ ಸಿಬ್ಬಂದಿಗೆ ನೀಡಿದ ಗುರುತು ಚೀಟಿ ನೋಟು ವಿನಿಮಯ ಮಾಡಿಕೊಳ್ಳಲು ನೆರವಾಗುತ್ತವೆ.
ಈ ಯೋಜನೆ ಬಗ್ಗೆ ಎಲ್ಲಿ ಮಾಹಿತಿ ಪಡೆಯಬಹುದು?
ಈ ಬಗ್ಗೆ ಇನ್ನಷ್ಟು ಮಾಹಿತಿಗೆ ಜನರು ಆರ್ ಬಿಐ ವೆಬ್ ಸೈಟ್ www.rbi.org.in ನಲ್ಲಿ ನೋಡಬಹುದು.
ಏನಾದರೂ ಸಮಸ್ಯೆ, ಸಂದೇಹ ಉಂಟಾದಲ್ಲಿ ಯಾರನ್ನು ಸಂಪರ್ಕಿಸಬೇಕು?
ರಿಸರ್ವ್ ಬ್ಯಾಂಕಿನ ನಿಯಂತ್ರಣ ಕೊಠಡಿ ಸಂಖ್ಯೆ 022-22602201/022-22602944ನ್ನು ಸಂಪರ್ಕಿಸಬಹುದು. ಇಲ್ಲವೇ ಇ ಮೇಲ್ ಮೂಲಕವೂ ಸಂಪರ್ಕಿಸಬಹುದು.

Related Stories

No stories found.

Advertisement

X
Kannada Prabha
www.kannadaprabha.com