ನವದೆಹಲಿ: ಐಟಿ ದೈತ್ಯ ಕಂಪೆನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ ನ ಅಧ್ಯಕ್ಷ ಸ್ಥಾನದಿಂದ ಸೈರಸ್ ಮಿಸ್ತ್ರಿಯವರನ್ನು ವಜಾಗೊಳಿಸಿದ ನಂತರ ಅವರ ಸ್ಥಾನಕ್ಕೆ ರತನ್ ಟಾಟಾ ಅವರ ನಿಕಟವರ್ತಿ ಇಶಾತ್ ಹುಸೇನ್ ಆಗಮಿಸಿದ್ದಾರೆ. ಹೊಸ ಅಧ್ಯಕ್ಷರ ನೇಮಕಾತಿ ಆಗುವವರೆಗೆ ಇಶಾತ್ ಹುಸೇನ್ ಹಂಗಾಮಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಕಂಪೆನಿ ತಿಳಿಸಿದೆ.
ಭಾರತದ ಅತಿದೊಡ್ಡ ಸಾಫ್ಟ್ ವೇರ್ ಸೇವೆ ರಫ್ತಿನ ಕಂಪೆನಿಯಾದ ಟಿಸಿಎಸ್, ಟಾಟಾ ಸನ್ಸ್ ಕಡೆಯಿಂದ ಪತ್ರ ತಲುಪಿದ್ದು ಅದರಲ್ಲಿ ಹುಸೇನ್ ಅವರು ಮಿಸ್ತ್ರಿಯವರ ಅಧ್ಯಕ್ಷ ಸ್ಥಾನವನ್ನು ತಾತ್ಕಾಲಿಕವಾಗಿ ವಹಿಸಿಕೊಳ್ಳಲಿದ್ದಾರೆ ಎಂದು ನಮೂದನೆಯಾಗಿದೆ.