ಹಳೆ ನೋಟ್ ಗಳ ಬದಲಾವಣೆ ಸ್ಥಗಿತಗೊಳಿಸುವುದಿಲ್ಲ: ಕೇಂದ್ರ ಸ್ಪಷ್ಟನೆ

ನಿಷೇಧಿತ 500 ಹಾಗೂ 1000 ರುಪಾಯಿ ನೋಟ್ ಗಳ ಬದಲಾವಣೆಯ ಮೊತ್ತವನ್ನು 4,500 ರುಪಾಯಿಯಿಂದ 2000 ರುಪಾಯಿಗೆ ಇಳಿಸಿದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ನಿಷೇಧಿತ 500 ಹಾಗೂ 1000 ರುಪಾಯಿ ನೋಟ್ ಗಳ ಬದಲಾವಣೆಯ ಮೊತ್ತವನ್ನು 4,500 ರುಪಾಯಿಯಿಂದ 2000 ರುಪಾಯಿಗೆ ಇಳಿಸಿದ ಬೆನ್ನಲ್ಲೇ, ಹಳೆ ನೋಟ್ ಬದಲಾವಣೆಯನ್ನು ಶೀಘ್ರ ಸ್ಥಗಿತಗೊಳಿಸಲಾಗುತ್ತಿದೆ ಎಂಬ ವರದಿಯನ್ನು ಕೇಂದ್ರ ವಿತ್ತ ಸಚಿವಾಲಯ ಶುಕ್ರವಾರ ಸ್ಪಷ್ಟವಾಗಿ ತಳ್ಳಿಹಾಕಿದೆ.
ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು 500 ಹಾಗೂ 1000 ನೋಟ್ ಗಳ ನಿಷೇಧಿಸಿದ ನಂತರ ಸಾಮಾನ್ಯ ಜನರು ಹಳೆ ನೋಟ್ ಗಳ ಬದಲಾವಣೆಗಾಗಿ ಬ್ಯಾಂಕ್ ಮುಂದೆ ಕ್ಯೂ ನಿಂತಿದ್ದಾರೆ. ಇದರ ಬೆನ್ನಲ್ಲೇ ನಿನ್ನೆಯಿಂದ ಕೇವಲ 2000 ರುಪಾಯಿ ಮಾತ್ರ ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಇದೀಗ ಶೀಘ್ರದಲ್ಲೇ ಅದನ್ನು ಸ್ಥಗಿತಗೊಳಸಲಾಗುತ್ತಿದೆ ಎಂಬ ವರದಿಗಳು ಜನರನ್ನು ಆತಂಕಕ್ಕೆ ದೂಡಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ವಿತ್ತ ಸಚಿವಾಲಯದ ಹಿರಿಯ ಅಧಿಕಾರಿಗಳು. ಅಂತಹ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com