ಬೆಲೆ ಇಳಿಕೆ ಕ್ರಮ: ಕೇಂದ್ರದಿಂದ 2 ಮಿಲಿಯನ್ ಟನ್ ದ್ವಿದಳ ಧಾನ್ಯಗಳ ಸಂಗ್ರಹದ ಗುರಿ

ಬೆಲೆ ಏರಿಕೆಯಾದ ಸಂದರ್ಭದಲ್ಲಿ ಬಳಸಿಕೊಳ್ಳುವ ಉದ್ದೇಶದಿಂದ ಗ್ರಾಹಕ ವ್ಯವಹಾರಗಳ ಸಚಿವಾಲಯ 2017ರ ವೇಳೆಗೆ ದ್ವಿದಳ ಧಾನ್ಯಗಳ ಸಂಗ್ರಹವನ್ನು 2 ಮಿಲಿಯನ್ ಟನ್ ಗೆ ಏರಿಕೆ ಮಾಡುವ ಗುರಿ...
ದ್ವಿದಳ ಧಾನ್ಯ (ಸಂಗ್ರಹ ಚಿತ್ರ)
ದ್ವಿದಳ ಧಾನ್ಯ (ಸಂಗ್ರಹ ಚಿತ್ರ)
ನವದೆಹಲಿ: ಬೆಲೆ ಏರಿಕೆಯಾದ ಸಂದರ್ಭದಲ್ಲಿ ಬಳಸಿಕೊಳ್ಳುವ ಉದ್ದೇಶದಿಂದ ಗ್ರಾಹಕ ವ್ಯವಹಾರಗಳ ಸಚಿವಾಲಯ 2017ರ ವೇಳೆಗೆ ದ್ವಿದಳ ಧಾನ್ಯಗಳ ಸಂಗ್ರಹ(ಬಫರ್ ಸ್ಟಾಕ್) ವನ್ನು 2 ಮಿಲಿಯನ್ ಟನ್ ಗೆ ಏರಿಕೆ ಮಾಡುವ ಗುರಿ ಹೊಂದಿದೆ.  
2017 ರ ಜೂನ್ ವೇಳೆಗೆ 2 ಮಿಲಿಯನ್ ನಷ್ಟು ದ್ವಿದಳ ಧಾನ್ಯವನ್ನು ಸಂಗ್ರಹಿಸುವ ಗುರಿ ಹೊಂದಲಾಗಿದ್ದು, ಈಗಾಗಲೇ 6 ಲಕ್ಷ ಟನ್ ಗಳಷ್ಟು ಧಾನ್ಯಗಳನ್ನು ಸಂಗ್ರಹಿಸಲಾಗಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಹೇಮ್ ಪಾಂಡೆ ತಿಳಿಸಿದ್ದಾರೆ. 2016-17 ನೇ ಸಾಲಿನಲ್ಲಿ ದ್ವಿದಳ ಧಾನ್ಯಗಳ ಉತ್ಪಾದನೆ 20 ಮಿಲಿಯನ್ ಟನ್ ಗೂ ಅಧಿಕವಾಗಲಿದ್ದು, ದೇಶಿ ಮಾರುಕಟ್ಟೆಯಿಂದ ಒಂದು ಮಿಲಿಯನ್ ಟನ್ ಖರೀದಿಸಿದರೆ ಮತ್ತೊಂದು ಮಿಲಿಯನ್ ಟನ್ ನಷ್ಟು ಧಾನ್ಯಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ ಎಂದು ಪಾಂಡೆ ಮಾಹಿತಿ ನೀಡಿದ್ದಾರೆ. 
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತ ಈ ವರೆಗೂ 3.5 ಮಿಲಿಯನ್ ಟನ್ ಗಳಷ್ಟು ದ್ವಿದಳ ಧಾನ್ಯಗಳನ್ನು ಆಮದು ಮಾಡಿಕೊಂಡಿದೆ. ಈ ಪೈಕಿ 0.4 ಮಿಲಿಯನ್ ನಷ್ಟು ಧಾನ್ಯಗಳನ್ನು ಸಾರ್ವಜನಿಕ ವಲಯದ ವಹಿವಾಟು ಸಂಸ್ಥೆಗಳಿಂದ ಖರೀದಿಸಲಾಗಿದೆ. 2016-17 ನೇ ಆರ್ಥಿಕ ವರ್ಷದಲ್ಲಿ ದ್ವಿದಳ ಧಾನ್ಯಗಳ ಉತ್ಪಾದನೆ ಹೆಚ್ಚಾಗುವ ಸಾಧ್ಯತೆ ಇದ್ದು 24-25 ಮಿಲಿಯನ್ ಟನ್ ಗಳಷ್ಟು ದ್ವಿದಳ ಧಾನ್ಯಗಳ ಲಭ್ಯತೆಯನ್ನು ಖಚಿತಪಡೊಸಿಕೊಂಡ ಬಳಿಕ ಆಮದು ಪ್ರಮಾಣವನ್ನು ಕಡಿಮೆ ಮಾಡಲಾಗುತ್ತದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com