'ರಿಲಯನ್ಸ್ ಜಿಯೊ ಹ್ಯಾಪಿ ನ್ಯೂ ಇಯರ್ ಆಫರ್' ಪ್ರಕಟಿಸಿದ ಮುಕೇಶ್ ಅಂಬಾನಿ

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ರಿಲಯನ್ಸ್ ಜಿಯೊ ಸಿಮ್ ನ್ನು ಇನ್ನಷ್ಟು ಎತ್ತರಕ್ಕೆ ...
ಮುಕೇಶ್ ಅಂಬಾನಿ
ಮುಕೇಶ್ ಅಂಬಾನಿ
ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಗುರುವಾರ ಪ್ರಕಟಿಸಿದ ಜಿಯೊ ಹ್ಯಾಪಿ ನ್ಯೂ ಇಯರ್ ಆಫರ್ ಈಗಿರುವ ಮತ್ತು ಹೊಸ ಗ್ರಾಹಕರಿಗೆ ಅನ್ವಯಿಸುತ್ತದೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ರಿಲಯನ್ಸ್ ಜಿಯೊ ವೆಲ್ ಕಮ್ ಆಫರ್ ಮಾರ್ಚ್ 31ರವರೆಗೆ ವಿಸ್ತರಿಸಲಾಗಿದೆ ಎಂದರು.
ಡಿಸೆಂಬರ್ 4ರಿಂದ ಪ್ರತಿ ಜಿಯೊ ಸಿಮ್ ಹೊಸ ಗ್ರಾಹಕರಿಗೆ ಡಾಟಾ, ವಾಯ್ಸ್, ಜಿಯೊ ಆಪ್ಲಿಕೇಶನ್ ಉಚಿತವಾಗಿ ಮಾರ್ಚ್ 31ರವರೆಗೆ ಸಿಗುತ್ತದೆ. ಇದರ ಹೆಸರು ಜಿಯೊ ಹ್ಯಾಪಿ ನ್ಯೂ ಇಯರ್ ಆಫರ್. ಜಿಯೊದ ವೆಲ್ ಕಮ್ ಆಫರ್ ನ್ನು ಈಗಿರುವ 52 ಶತಕೋಟಿ ಗ್ರಾಹಕರು ಪಡೆಯಲಿದ್ದು, ನಂತರ ಅದು ತನ್ನಷ್ಟಕ್ಕೆ ನ್ಯೂ ಇಯರ್ ಆಫರ್ ಗೆ ಬದಲಾಗುತ್ತದೆ. ಹೊಸ ಸಿಮ್ ಖರೀದಿಸುವ ಅಗತ್ಯವಿಲ್ಲ ಎಂದು ಹೇಳಿದರು.
ಜಿಯೊ ಸಿಮ್ ನಲ್ಲಿ ಇಂಟರ್ನೆಟ್ ನಿಧಾನ ಪ್ರಕ್ರಿಯೆಯನ್ನು ಕೂಡ ಹೊಂದಿದೆ. ಇದಕ್ಕೆ ಕಾರಣ ಶೇಕಡಾ 80 ಗ್ರಾಹಕರು ಇಂಟರ್ನೆಟ್ ನ್ನು ಬಳಸುತ್ತಿದ್ದು, ಶೇಕಡಾ 20 ಮಂದಿ ಆಗಾಗ ಬಳಸುತ್ತಿರುತ್ತಾರೆ, ಹೀಗಾಗಿ ನೆಟ್ ವರ್ಕ್ ಸಮಸ್ಯೆಯುಂಟಾಗುತ್ತದೆ. ಇದಕ್ಕಾಗಿ ಜಿಯೊ ಗ್ರಾಹಕರು ದಿನಕ್ಕೆ 1ಜಿಬಿ ಫಪ್ ಸೀಮಿತತೆಯನ್ನು ಬಳಸುವ ಅವಕಾಶ ಇನ್ನು ಮುಂದೆ ಇದೆ ಎಂದು ಪ್ರಕಟಿಸಿದರು.
ಸೆಪ್ಟೆಂಬರ್ ತಿಂಗಳಲ್ಲಿ ರಿಲಯನ್ಸ್ ಜಿಯೊವನ್ನು ಆರಂಭಿಸಿದ ನಂತರ ಸಿಮ್ ಗೆ ಜನರು ಔಟ್ ಲೆಟ್ ಬಳಿ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಕೆಲವರು ಬ್ರಾಡ್ ಬಾಂಡ್ ನಿಧಾನವಾಗಿದೆ ಎಂದು ದೂರು ನೀಡುತ್ತಿದ್ದಾರೆ. ಇದಕ್ಕೆ ಉಚಿತ ವೆಲ್ ಕಮ್ ಆಫರ್ ಕಾರಣ ಎಂದು ಅಂಬಾನಿ ಹೇಳಿದರು.
ಕಳೆದ ಮೂರು ತಿಂಗಳಿನಲ್ಲಿ ಜಿಯೊ ಫೇಸ್ ಬುಕ್, ವಾಟ್ಸಾಪ್, ಸ್ಕೈಪೆಗಳಿಗಿಂತಲೂ ವೇಗವಾಗಿ ಬೆಳೆದಿದೆ.50 ಶತಕೋಟಿಗೂ ಹೆಚ್ಚು ಗ್ರಾಹಕರಿದ್ದಾರೆ. ಜಿಯೊ ಇಂದು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಸಂಸ್ಥೆಯಾಗಿದೆ. ಇಂಟರ್ನೆಟ್ ಬಳಕೆಗಾಗಿ ನಿರ್ಮಿಸಲಾದ ಅತ್ಯಂತ ಹೆಚ್ಚು ಡಾಟಾ ಹೊಂದಿದ ಸಿಮ್ ಜಿಯೊ ಆಗಿದೆ ಎಂದರು.
ಸರಾಸರಿ ಜಿಯೊ ಗ್ರಾಹಕರು ಇತರ ಬ್ರಾಡ್ ಬ್ಯಾಂಡ್ ಗಳಲ್ಲಿ ಬಳಸುವುದಕ್ಕಿಂತ 25 ಸಲ ಹೆಚ್ಚು ಡಾಟಾವನ್ನು ಜಿಯೊದಲ್ಲಿ ಬಳಸಬಹುದು.ಎಲ್ಲಿಯೇ ಹೋದರೂ ಇಂದು ಇತರ ಕಂಪೆನಿಯ ಸಿಮ್ ಗಳಲ್ಲಿ ಡಾಟಾ ಬಳಸುವುದಕ್ಕಿಂತ ಹೆಚ್ಚಾಗಿ ಜಿಯೊ ಸಿಮ್ ಜನರು ಬಳಸುತ್ತಿದ್ದಾರೆ. ಜಿಯೊ ಸಿಮ್ ಆರಂಭವಾದಂದಿನಿಂದ ಅನೇಕ ಪ್ರತಿಕ್ರಿಯೆ, ಸಲಹೆಗಳು ಬರುತ್ತಿದ್ದು ಅವುಗಳನ್ನು ಜಾರಿಗೆ ತರುವಲ್ಲಿ ಕಾರ್ಯಪ್ರವೃತ್ತವಾಗಿದ್ದೇವೆ.ಆರಂಭದ ದಿನಗಳಿಗಿಂತ ಇಂದು ಜಿಯೊ ಸಿಮ್ ಉತ್ತಮವಾಗಿದೆ. ಇದಕ್ಕೆ ಸಹಕಾರ ನೀಡಿದ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆಗಳು.ಇಂದು ಜಿಯೊ ಸಿಮ್ ಕೊಡುವ 2 ಲಕ್ಷ ಮಳಿಗೆಗಳು ಭಾರತದಲ್ಲಿವೆ ಎಂದು ಅಂಬಾನಿ ತಿಳಿಸಿದರು.
ದೇಶದಲ್ಲಿರುವ ಎಟಿಎಂ ಸಂಖ್ಯೆಗಳಿಗೆ ಹತ್ತಿರವಾಗಿದೆ ಜಿಯೊ ಔಟ್ ಲೆಟ್ ಗಳು. ಮುಂದಿನ ವರ್ಷ ಮಾರ್ಚ್ ವೇಳೆಗೆ ಅವುಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಯೋಜನೆ ಹಾಕಿಕೊಂಡಿದ್ದೇವೆ. ಗ್ರಾಹಕರು ಜಿಯೊ ಸಿಮ್ ಗೆ ಅಭೂತಪೂರ್ವ ಒಲವು ತೋರುತ್ತಿರುವ ಸಂದರ್ಭದಲ್ಲಿ ಈಗಿರುವ ನಿರ್ವಾಹಕರಿಂದ ನಮಗೆ ಹೆಚ್ಚಿನ ಬೆಂಬಲ ಸಿಗುತ್ತಿಲ್ಲ.ಕಳೆದ ಮೂರು ತಿಂಗಳಲ್ಲಿ ನಮ್ಮ 3 ಪ್ರಮುಖ ಸ್ಪರ್ಧಾದಾರರ ನೆಟ್ ವರ್ಕ್ ಗಳಿಗೆ ಸುಮಾರು 900 ಕೋಟಿ ಧ್ವನಿಕರೆಗಳನ್ನು ತಡೆಹಿಡಿಯಲಾಗಿದೆ.
ಸ್ಥಾನಿಕ ಸೇವಾಕರ್ತೃಗಳಿಂದ ಸ್ಫರ್ಧಾ ವಿರೋಧಿ ನಡವಳಿಕೆಯಿಂದಾಗಿ ಜಿಯೊದ ಉತ್ಕೃಷ್ಟ ತಂತ್ರಜ್ಞಾನಗಳನ್ನು ಗ್ರಾಹಕರಿಗೆ ನಿರಾಕರಿಸಲಾಗಿದೆ.ಕಳೆದ ಮೂರು ತಿಂಗಳಲ್ಲಿ ಕರೆ ಬ್ಲಾಕ್ ದರಗಳು ಶೇಕಡಾ 90ರಿಂದ ಶೇಕಡಾ 20ಕ್ಕೆ ಕುಸಿದಿದೆ.ಜಿಯೊ ಸಿಮ್ ನಿಂದ ಮಾಡುವ ಎಲ್ಲಾ ಸ್ಥಳೀಯ ಕರೆಗಳು  ಎಂದಿಗೂ ಉಚಿತ ಎಂದು ಪುನರುಚ್ಛರಿಸಿದ ಮುಕೇಶ್ ಅಂಬಾನಿ, ಮೊಬೈಲ್ ನಂಬರ್ ಪೊರ್ಟೇಬಿಲಿಟಿಯನ್ನು ಜಿಯೊ ಫುಲ್ ಸಪೋರ್ಟ್ ಮಾಡುತ್ತಿದ್ದು ಇನ್ನು ಮುಂದೆ ಜಿಯೊಗೆ ಬದಲಾಯಿಸಿಕೊಂಡಾಗ ಗ್ರಾಹಕರು ತಮ್ಮ ನಂಬರ್ ಗಳನ್ನು ಮತ್ತೆ ಪಡೆದುಕೊಳ್ಳಬಹುದು ಎಂದು ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com