ಕೇವಲ 26 ದಿನಗಳಲ್ಲಿ ರಿಲಾಯನ್ಸ್ ಜಿಯೋ ಸಿಮ್ ಖರೀದಿಸಿದ ಗ್ರಾಹಕರ ಸಂಖ್ಯೆ ಎಷ್ಟು ಗೊತ್ತೇ?

ಕಡಿಮೆ ಹಣದಲ್ಲಿ ಅತಿ ವೇಗದ ಇಂಟರ್‍ನೆಟ್ ಸೇವೆ ಎಂಬ ಖ್ಯಾತಿಗೆ ಪಾತ್ರವಾಗಿರುವ ಜಿಯೋ ದಾಖಲೆಯ ಪುಟಕ್ಕೆ ಸೇರ್ಪಡೆಯಾಗಿದೆ. `ಜಿಯೋ ವೆಲ್‍ಕಮ್ ...
ಜಿಯೋ
ಜಿಯೋ

ಮುಂಬೈ: ಕಡಿಮೆ ಹಣದಲ್ಲಿ ಅತಿ ವೇಗದ ಇಂಟರ್‍ನೆಟ್ ಸೇವೆ ಎಂಬ ಖ್ಯಾತಿಗೆ ಪಾತ್ರವಾಗಿರುವ ಜಿಯೋ ದಾಖಲೆಯ ಪುಟಕ್ಕೆ ಸೇರ್ಪಡೆಯಾಗಿದೆ. `ಜಿಯೋ ವೆಲ್‍ಕಮ್ ಆಫರ್’ಗೆ 26 ದಿನಗಳಲ್ಲಿ 1 ಕೋಟಿ 60 ಲಕ್ಷ ಚಂದಾದಾರರನ್ನು ಹೊಂದಿರುವುದಾಗಿ ರಿಲಯನ್ಸ್ ಹೇಳಿದೆ.

16 ಮಿಲಿಯನ್‍ಗೂ ಹೆಚ್ಚು ಚಂದಾದಾರನ್ನು ಹೊಂದುವ ಮೂಲಕ ತಾನು ವಿಶ್ವದಾಖಲೆ ಸೃಷ್ಟಿಸಿರುವುದಾಗಿ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ (ಜಿಯೋ)ಇಂದು ಘೋಷಿಸಿದೆ. ಜಿಯೋ ಈ ಪ್ರಗತಿಯನ್ನು ವಿಶ್ವದಲ್ಲೇ ಯಾವುದೇ ಟೆಲಿಕಾಂ ಆಪರೇಟರ್ ಅಥವಾ ಫೇಸ್‍ಬುಕ್, ವಾಟ್ಸಪ್ ಮತ್ತು ಸ್ಕೈಪ್‍ನಂತಹ ಸ್ಟಾರ್ಟ್ ಅಪ್‍ಗಿಂತಲೂ ವೇಗವಾಗಿ ಸಾಧಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಡಿ. ಅಂಬಾನಿ, ಜಿಯೋ ವೆಲ್‍ಕಮ್ ಆಫರ್‍ಗೆ ಭಾರತದಾದ್ಯಂತ ವ್ಯಕ್ತವಾಗಿರುವ ಅಭೂತಪೂರ್ವ ಪ್ರತಿಕ್ರಿಯೆ ನೋಡಿ ಸಂತೋಷವಾಗಿದೆ. ಇದಕ್ಕಾಗಿ ನಾವು ಗ್ರಾಹಕರಿಗೆ ಆಭಾರಿಗಳಾಗಿದ್ದೇವೆ. ಗ್ರಾಹಕರ ನಿರೀಕ್ಷೆಯನ್ನು ಮೀರಲು ಪ್ರತಿದಿನವೂ ಬದ್ಧರಾಗಿರುತ್ತೇವೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com