ಬಳಕೆದಾರರಿಗೆ ಗ್ಯಾಲಕ್ಸಿ ನೋಟ್ 7 ಮೊಬೈಲ್ ಬಳಸದಂತೆ ಸ್ಯಾಮ್ ಸಂಗ್ ಸೂಚನೆ

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 7 ಸರಣಿಯ ಮೊಬೈಲ್ ಗಳು ತಾಂತ್ರಿಕ ದೋಷದಿಂದ ಸ್ಫೋಟಗೊಂಡ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಳಕೆದಾರರಿಗೆ ತಾವು...
ಗ್ಯಾಲಕ್ಸಿ ನೋಟ್ 7
ಗ್ಯಾಲಕ್ಸಿ ನೋಟ್ 7
ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 7 ಸರಣಿಯ ಮೊಬೈಲ್ ಗಳು ತಾಂತ್ರಿಕ ದೋಷದಿಂದ ಸ್ಫೋಟಗೊಂಡ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಳಕೆದಾರರಿಗೆ ತಾವು ಖರೀದಿಸಿರುವ ನೋಟ್ 7 ಸರಿಣಿಯ ಮೊಬೈಲ್ ಗಳನ್ನು ಸ್ವಿಚ್ ಆಫ್ ಮಾಡುವಂತೆ ಸೂಚಿಸಿದೆ. 
ಬಳಕೆದಾರರಿಗೆ ಮೊಬೈಲ್ ಗಳನ್ನು ಬಳಸದಂತೆ ಸೂಚಿಸಿರುವ ಸ್ಯಾಂಗ್ ಸಂಗ್ ಸಂಸ್ಥೆ ನೋಟ್ 7 ಮೊಬೈಲ್ ಬದಲಿಗೆ ಹಣ ಹಿಂತಿರುಗಿಸಲು ಅಥವಾ ಬೇರೆ ಮೊಬೈಲ್ ಎಕ್ಸ್ ಚೈಂಜ್ ಮಾಡಿಕೊಳ್ಳಬಹುದು ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 
ಇತ್ತೀಚೆಗಷ್ಟೇ ಅಮೆರಿಕದಲ್ಲಿ ಪ್ರಯಾಣಿಕರೊಬ್ಬರ ಬಳಿಯಿದ್ದ ಸ್ಯಾಮ್ ಸಂಗ್ ಗೆಲಾಕ್ಸಿ ನೋಟ್ 7 ಹೊಗೆ ಬರಲಾರಂಭಿಸಿದ ಬಳಿಕ ಜಾಗತಿಕ ಮಟ್ಟದಲ್ಲಿ ಆಂತಕ ಹೆಚ್ಚಿಸಿತ್ತು. ಇದಾದ ಬಳಿಕ ಹಲವು ವಿಮಾನಯಾನ ಕಂಪನಿಗಳು ಕೂಡ ಗೆಲಾಕ್ಸಿ ನೋಟ್ 7 ಮೊಬೈಲ್ ಅನ್ನು ವಿಮಾನದಲ್ಲಿ ಒಯ್ಯುವುದಕ್ಕೆ ನಿಷೇಧ ಹೇರಿತ್ತು. ಅಮೆರಿಕ ಹಾಗೂ ಆಸ್ಟ್ರೇಲಿಯಾಗಳಲ್ಲಿ ಪ್ರಮುಖ ಟೆಲಿಕಾಂ ಮಾರಾಟಗಾರರು ನೋಟ್ 7 ಮಾರಾಟವನ್ನು ಸ್ಧಗಿತಗೊಳಿಸಿವೆ. 
ಗೆಲಾಕ್ಸಿ ನೋಟ್ 7 ಮೊಬೈಲ್ ನಲ್ಲಿ ಬಳಸಲಾಗಿರುವ ಬ್ಯಾಟರಿ ಓವರ್ ಹೀಂಟಿಂಗ್ ಸಮಸ್ಯೆಯಿಂದಾಗಿ ಎರಡು ತಿಂಗಳಲ್ಲಿ ಎರಡನೇ ಬಾರಿಗೆ ಸ್ಯಾಮ್ ಸಂಗ್ ತನ್ನ ನೋಟ್ 7 ಸಾಧನದ ಮಾರಾಟಕ್ಕೆ ತಡೆಯೊಡ್ಡಬೇಕಾಗಿ ಬಂದಿದೆ. ಬ್ಯಾಟರಿ ಸಮಸ್ಯೆಯಿಂದಾಗಿ ಇದುವರೆಗೆ 25 ಲಕ್ಷ ನೋಟ್ 7 ಮೊಬೈಲ್ ಗಳನ್ನು ಸ್ಯಾಮ್ ಸಂಗ್ ವಾಪಸ್ ಕರೆಸಿಕೊಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com