ರೇಸ್ ನಿಂದ 'ಸೇಲ್ಸ್ ಫೋರ್ಸ್' ಹೊರಕ್ಕೆ; ಟ್ವಿಟ್ಟರ್ ಕೊಳ್ಳುವವರೇ ಇಲ್ಲ!

ಮೈಕ್ರೋ ಬ್ಲಾಗಿಂಗ್ ದೈತ್ಯ ಟ್ವಿಟ್ಟರ್ ನ ಕೊನೆಯ ಆಸೆಯಾಗಿದ್ದ 'ಸೇಲ್ಸ್ ಫೋರ್ಸ್' ಸಂಸ್ಥೆ, ಟ್ವಿಟ್ಟರ್ ಸಂಸ್ಥೆಯನ್ನು ಕೊಳ್ಳುವ ನಿರ್ಧಾರದಿಂದ ಹೊರನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನ್ಯೂಯಾರ್ಕ್: ಮೈಕ್ರೋ ಬ್ಲಾಗಿಂಗ್ ದೈತ್ಯ ಟ್ವಿಟ್ಟರ್ ನ ಕೊನೆಯ ಆಸೆಯಾಗಿದ್ದ 'ಸೇಲ್ಸ್ ಫೋರ್ಸ್' ಸಂಸ್ಥೆ, ಟ್ವಿಟ್ಟರ್ ಸಂಸ್ಥೆಯನ್ನು ಕೊಳ್ಳುವ ನಿರ್ಧಾರದಿಂದ ಹೊರನಡೆದಿದೆ. 
ಟ್ವಿಟ್ಟರ್ ಕೊಳ್ಳುವ ಪ್ರಸ್ತಾವನೆಯಿಂದ ಹಿಂದೆ ಸರಿದಿದ್ದೇವೆ ಎಂದು 'ಸೇಲ್ಸ್ ಫೋರ್ಸ್' ಸಿಇಒ ಮಾರ್ಕ್ ಬೆನಿಯೋಫ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ. 
ಈ ಹಿಂದೆ ಗೂಗಲ್, ಆಪಲ್ ಮತ್ತು ವಾಲ್ಟ್ ಡಿಸ್ನಿ ಕೂಡ ಈ ಜಾಲತಾಣಕ್ಕೆ ಬಿಡ್ ಸಲ್ಲಿಸುವುದರಿಂದ ಹಿಂದೆಸರಿದಿದ್ದವು. 
ಗೂಗಲ್ ಮತ್ತು ವಾಲ್ಟ್ ಡಿಸ್ನಿ ಈ ನಿರ್ಧಾರ ಕೈಗೊಂಡಾಗ ಟ್ವಿಟ್ಟರ್ ನ ಷೇರುಗಳು ಭಾರಿ ಕುಸಿತ ಕಂಡಿದ್ದವು. ಅಕ್ಟೋಬರ್ 27 ರಂದು ಟ್ವಿಟ್ಟರ್ ತನ್ನ ತ್ರೈಮಾಸಿಕ ಆದಾಯವನ್ನು ಘೋಷಿಸುವ ಸಾಧ್ಯತೆ ಇದೆ. 
ಸದ್ಯಕ್ಕ ಟ್ವಿಟ್ಟರ್ 313 ದಶಲಕ್ಷ ಬಳಕೆದಾರರನ್ನು ಹೊಂದಿದ್ದು, ಇದರ ಮೌಲ್ಯ 20 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com