
ನವದೆಹಲಿ: http://aonebiz.in/ ಎಂಬ ಆನ್‌ಲೈನ್ ಕಂಪನಿ ರಿಲಯನ್ಸ್ ಜಿಯೋ ಸಿಮ್‌ಗಳನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ಮಾರಾಟ ಮಾಡುತ್ತಿದೆ.
ಜಿಯೋ ಸಿಮ್ ಕಾರ್ಡ್ ಪಡೆಯಲು ಗ್ರಾಹಕರಿಂದ ಆನ್‌ಲೈನ್‌ನಲ್ಲಿರುವ ಫಾರ್ಮ್‌ನಲ್ಲಿ ಗ್ರಾಹಕರು ಹೆಸರು, ದೂರವಾಣಿ ಸಂಖ್ಯೆ ಹಾಗೂ ಸಿಮ್ ಡೆಲಿವರಿ ಮಾಡುವ ವಿಳಾಸ, ಇ ಮೇಲ್ ಐಡಿ ನೀಡುವುದು ಅಗತ್ಯವಾಗಿದೆ. ಇದಕ್ಕಾಗಿ ಡೆಲಿವರಿ ಶುಲ್ಕದ ರೀತಿಯಲ್ಲಿ 199 ರೂಪಾಯಿ ಪಡೆದುಕೊಳ್ಳುತ್ತಿದೆ.
ಆದರೆ ಸಿಮ್ ಜತೆಗೆ ರಿಲಯನ್ಸ್ ಕಂಪನಿಯ ರಿಲಯನ್ಸ್ ಜಿಯೋ ಡೋಂಗಲ್ (1,999 ರೂ.) ಹಾಗೂ ರಿಲಯನ್ಸ್ ಜಿಯೋ ವೈ ಫೈ ಡೋಂಗಲ್ (2,199) ಅನ್ನು ಡೆಲಿವರಿ ಮಾಡುವುದಾಗಿಯೂ ವೆಬ್ ಸೈಟ್ ಹೇಳಿಕೊಂಡಿದೆ.
ಇವುಗಳ ಖರೀದಿಗೆ ಗ್ರಾಹಕರು ಮೊದಲೇ 2,199 ರು. ಆನ್‌ಲೈನ್ ಪೇಮೆಂಟ್ ಮಾಡಬೇಕಾಗುತ್ತಿದೆ. ಅಲ್ಲಿ ನೀವು ಮೋಸ ಹೋಗುವುದು ಖಚಿತ. ಯಾಕೆಂದರೆ ಇಲ್ಲಿಯವರೆಗೆ ರಿಲಿಯನ್ಸ್ ಜಿಯೋ ಯಾವುದೇ ಆನ್‌ಲೈನ್ ಅಥವಾ ಹೋಮ್ ಡೆಲಿವರಿ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿಲ್ಲ. ಈ ವೆಬ್ ಸೈಟ್ ನಿಂದ ಮೋಸ ಹೋದವರು ಇದೀಗ ವಾಟ್ಸಪ್, ಇ ಮೇಲ್ ಹಾಗೂ ಎಸ್‌ಎಂಎಸ್‌ಗಳ ಮೂಲಕ ಬಯಲಿಗೆಳೆಯುತ್ತಿದ್ದಾರೆ.
Advertisement